Just In
- 5 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‌ಫೀಲ್ಡ್ ಇಂಟರ್‍ಸೆಪ್ಟರ್ 350 ಬೈಕ್
ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ರಾಯಲ್ ಎನ್ಫೀಲ್ಡ್ ಕಂಪನಿಯು ಭಾರತದಲ್ಲಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿವೆ.

ರಾಯಲ್ ಎನ್ಫೀಲ್ಡ್ ಕಂಪನಿಯ ಹೊಸ ಬೈಕುಗಳು ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಮುಂದಿನ ವರ್ಷ ರಾಯಲ್ ಎನ್ಫೀಲ್ಡ್ ಕಂಪನಿಯು ಪ್ರೀಮಿಯಂ ಬೈಕುಗಳನ್ನು ಬಿಡುಗಡೆಗೊಳಿಸಲಿವೆ. ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ತನ್ನ ಥಂಡರ್‌ಬರ್ಡ್ 350 ಬದಲಿಗೆ ಮಿಟಿಯೊರ್ 350 ಕ್ರೂಸರ್ ಬೈಕನ್ನು ಬಿಡುಗಡೆಗೊಳಿಸಿತ್ತು. ಇದರೊಂದಿಗೆ ರಾಯಲ್ ಎನ್‌ಫೀಲ್ಡ್ ಅದೇ 350 ವಿಭಾಗದಲ್ಲಿ ಇಂಟರ್‌ಸೆಪ್ಟರ್ 650 ಆಧಾರಿತ ಹೊಸ ಬೈಕು ತರಲು ಸಜ್ಜಾಗುತ್ತಿದೆ.

ಈ ಹೊಸ ಬೈಕನ್ನು ರಾಯಲ್ ಎನ್‌ಫೀಲ್ಡ್ ಇಂಟರ್‍ಸೆಪ್ಟರ್ 350 ಎಂದು ಕರೆಯಲಾಗುತ್ತದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಇಂಟರ್‍ಸೆಪ್ಟರ್ 350 ಬೈಕ್ ಭಾರತದಲ್ಲಿ ಮೊದಲ ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಹೊಸ ರಾಯಲ್ ಎನ್‌ಫೀಲ್ಡ್ ಇಂಟರ್‍ಸೆಪ್ಟರ್ 350 ಬೈಕ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರ ಬಹಿರಂಗವಾಗಿದೆ. ಈ ಬೈಕ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮಾದರಿಯನ್ನು ಆಧರಿಸಿದೆ.

ಈ ಹೊಸ ಇಂಟರ್‍ಸೆಪ್ಟರ್ 350 ಬೈಕನ್ನು ಇಂಟರ್‌ಸೆಪ್ಟರ್ 650 ಮಾದರಿಯ ಕಿರಿಯ ಸಹೋದರ ಎಂದೇ ಹೇಳಬಹುದು. ಇನ್ನು ಹೊಸ ಬೈಕ್ ಇಂಟರ್‌ಸೆಪ್ಟರ್ 650 ಮಾದರಿಯ ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಇಂಟರ್‍ಸೆಪ್ಟರ್ 350 ಬೈಕಿನ ಟೈಲ್ ಲ್ಯಾಂಪ್ ಜೋಡಣೆ ಮತ್ತು ಆಯತಾಕಾರದ ಟರ್ನ್ ಇಂಡಿಕೇಟರ್ಸ್ ಇಂಟರ್‌ಸೆಪ್ಟರ್ 650 ಮಾದರಿಯೊಂದಿಗೆ ಹಲವಾರು ಸಮಾನತೆಗಳನ್ನು ಹೊಂದಿದೆ.

ಇದಲ್ಲದೆ, ಫುಟ್‌ಪೆಗ್‌ಗಳು, ಹಿಂಭಾಗದ ಫೆಂಡರ್ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಸಹ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650ಗೆ ಹೋಲುತ್ತದೆ. ಹಿರಿಯ ಸಹೋದರ ಇಂಟರ್‌ಸೆಪ್ಟರ್ 650 ಮಾದರಿಯಲ್ಲಿರುವಂತಹ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಹೊಸ ಇಂಟರ್‍ಸೆಪ್ಟರ್ 350 ಬೈಕಿನಲ್ಲಿ ಮಿಟಿಯೊರ್ ಮಾದರಿಯಲ್ಲಿರುವ ಅದೇ 349 ಸಿಸಿ ಸಿಂಗಲ್ ಸಿಲಿಂಡರ್ ಏರ್-ಅಂಡ್-ಆಯಿಲ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಈ 349 ಸಿಸಿ ಎಂಜಿನ್ 20.2 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಬೈಕಿನಲ್ಲಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳನ್ನು ಹೆಚ್ಚಿಸುವ ರೀತಿಯಲ್ಲಿ ಟ್ಯೂನ್ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಇಂಟರ್‍ಸೆಪ್ಟರ್ 350 ಬೈಕಿನಲ್ಲಿ ರೈಡರ್ ಆರಾಮದಾಯಕವಾಗಿ ಕೂತು ಸವಾರಿ ಮಾಡುವಂತ ಸೀಟಿಂಗ್ ಪೊರ್ಷಿಸನ್ ಅನ್ನು ನೀಡಬಹುದು. ಇನ್ನು ಹಿರಿಯ ಸಹೋದರ ಮಾದರಿಯಲ್ಲಿರುವಂತಹ ಎತ್ತರದ ಹ್ಯಾಂಡಲ್‌ಬಾರ್‌ಗಳು ಮತ್ತು ಫುಟ್‌ಪೆಗ್‌ಗಳನ್ನು ಹೊಂದಿರಲಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಇಂಟರ್‍ಸೆಪ್ಟರ್ 350 ಬೈಕ್ ಕ್ಲಾಸಿಕ್‌ನ ಮೇಲೆ ಸ್ವಲ್ಪ ಪ್ರೀಮಿಯಂ ಮಾದರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಉತ್ತಮ ಕಾರ್ಯಕ್ಷಮತೆಗಾಗಿ ಅದೇ 349 ಸಿಸಿ ಟ್ಯೂನ್ ಮಾಡುವ ಸಾಧ್ಯತೆಗಳು ಕೂಡ ಇವೆ.

ಇನ್ನು ರಾಯಲ್ ಎನ್ಫೀಲ್ಡ್ ಕಂಪನಿಯ ಬೈಕುಗಳ ಮಾರಾಟ ನಿಧಾನವಾಗಿ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ. ರಾಯಲ್ ಎನ್ಫೀಲ್ಡ್ ಕಂಪನಿಯು ವಾರ್ಷಿಕ ಮಾರಾಟದಲ್ಲಿ ಶೇ.6 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2020ರ ನವೆಂಬರ್ ತಿಂಗಳಿನಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯು 63,782 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.