ಬಿಡುಗಡೆಯಾಯ್ತು ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕ್
ಯಮಹಾ ಕಂಪನಿಯು ತನ್ನ ಹೊಸ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕ್ ಹೆರಿಟೇಜ್ ಡಾಕರ್ ರ‍್ಯಾಲಿ ಬಣ್ಣಗಳನ್ನು ಒಳಗೊಂಡಂತೆ ಹಲವಾರು ಆಫ್-ರೋಡ್ ಫೋಕಸ್ಡ್ ಅಕ್ಸೆಸರೀಸ್ ಅನ್ನು ಹೊಂದಿದೆ.

ಈ ಹೊಸ ಬೈಕಿನಲ್ಲಿ ಅಪ್‌ಗ್ರೇಡ್ ಸ್ಕಿಡ್-ಪ್ಲೇಟ್, ರ‍್ಯಾಲಿ ಸೀಟ್, ಅಕ್ರಾಪೊವಿಕ್ ಎಂಡ್ ಕ್ಯಾನ್, ಮತ್ತು ಚೈನ್ ಮತ್ತು ರೇಡಿಯೇಟರ್‌ಗಾಗಿ ಗಾರ್ಡ್‌ಗಳಂತಹ ಪರ್ಫಾಮೆನ್ಸ್ ಉಪಕರಣಗಳನ್ನು ಸಹ ನೀಡಲಾಗಿದೆ. ಈ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕಿನಲ್ಲಿ 1983 -1984 ನಲ್ಲಿ ನಡೆದ ಡಾಕರ್ ರ‍್ಯಾಲಿಯಲ್ಲಿ ಜೀನ್-ಕ್ಲೌಡ್ ಆಲಿವಿಯರ್ ಮತ್ತು ಸೆರ್ಜ್ ಬಾಕೌ ಅವರು ರೈಡ್ ಮಾಡಿದ ಬೈಕಿನಲ್ಲಿರುವ ಹಾಗೆ ವಿಶೇಷ ನೀಲಿ ಮತ್ತು ಹಳದಿ ಬಣ್ಣವನ್ನು ಸಿಂಪಡಿಸಿದ್ದಾರೆ.

ಈ ಹಿಂದೆ ಜೆಸಿಒ ಎಂದು ಕರೆಯಲ್ಪಡುವ ಜೀನ್-ಕ್ಲೌಡ್ ಆಲಿವಿಯರ್, ಮೊದಲ ಉತ್ಪಾದನಾ ಮಾದರಿ ಎಕ್ಸ್‌ಟಿ 600 ಜೆಡ್ ಟೆನೆರೆ ಅನ್ನು ಕೂಡ ಯಮಹಾದ ಅತ್ಯಂತ ಯಶಸ್ವಿ ಅಡ್ವೆಂಚರ್ ಬೈಕ್‌ಗಳಲ್ಲಿ ಒಂದನ್ನಾಗಿ ಮಾಡಲಾಗಿತ್ತು.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಈ ಹೊಸ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕಿನಲ್ಲಿ 689 ಸಿಸಿ ಟ್ವಿನ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 72.4 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 68 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ರ‍್ಯಾಲಿ ಎಡಿಷನ್ ಬೈಕ್ 200 ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿದೆ. ಇದು ಬಹಳ ಭರವಸೆಯ ಅಡ್ವೆಂಚರ್ ಟೂರಿಂಗ್ ಬೈಕ್ ಎಂದು ಹೇಳಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಬೈಕ್ ಸ್ಟ್ಯಾಂಡರ್ಡ್ ಕಿಟ್‌ನ ಭಾಗವಾಗಿರುವ ಎಬಿಎಸ್ ಅನ್ನು ಹೊಂದಿದೆ. ಇದನ್ನು ಅಗತ್ಯಕ್ಕೆ ತಕ್ಕ ಹಾಗೆ ರೈಡರ್ ಸ್ವಿಚ್ ಆಫ್ ಅಥವಾ ಆನ್ ಮಾಡಬಹುದಾಗಿದೆ. ಅಲ್ಲದೇ ಈ ಬೈಕ್ ಸಖತ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಈ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕಿನಲ್ಲಿ 895 ಎಂಎಂ ಸೀಟಿನ ಎತ್ತರವಿದೆ. ಇನ್ನು ಈ ಬೈಕಿನಲ್ಲಿ 21 ಇಂಚಿನ ಮತ್ತು 18 ಇಂಚಿನ ಸ್ಪೋಕ್ಡ್ ಟಯರುಗಳನ್ನು ಅಳವಡಿಸಿದೆ.

ಇನ್ನು ಯಮಹಾ ಕಂಪನಿಯ ಎಕ್ಸ್‌ಎಸ್‌ಆರ್ 155 ರೆಟ್ರೊ-ಲುಕಿಂಗ್ ಬೈಕ್ ಅನ್ನು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಯಮಹಾ ಕಂಪನಿಯು ಈ ವರ್ಷದ ಕೊನೆಯಲ್ಲಿ ಈ ಜನಪ್ರಿಯ ಎಕ್ಸ್‌ಎಸ್‌ಆರ್ 155 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕ್ ಮುಂದಿನ ಜುಲೈ ತಿಂಗಳಲ್ಲಿ ಯುರೋಪಿಯನ್ ಡೀಲರುಗಳ ಬಳಿ ತಲುಪಬಹುದು. ಆದರೆ ಭಾರತದಲ್ಲಿ ಈ ಬೈಕನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್


Click it and Unblock the Notifications