ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಎಂಬ ಸ್ಪೋರ್ಟ್-ಟೂರಿಂಗ್ ಬೈಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. 2021ರ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿಯ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಹಲವಾರು ನವೀಕರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

2021ರ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಮಾದರಿಗಳು ಸ್ಪೋರ್ಟ್-ಟೂರಿಂಗ್ ಬೈಕುಗಳಾಗಿವೆ. ಇನ್ನು ಟ್ರೇಸರ್ 9 ಜಿಟಿ ಬೈಕಿನಲ್ಲಿ ಸ್ಯಾಡಲ್ ಬಾಕ್ಸ್, ಎಲ್ಇಡಿ ಕಾರ್ನರಿಂಗ್ ಲೈಟ್ಸ್ ಮತ್ತು ಹಿಟೆಡ್ ಗ್ರಿಪ್ಸ್ ನಂತಹ ಟೂರಿಂಗ್-ಆಧಾರಿತ ಫೀಚರ್ ಗಳನ್ನು ಒಳಗೊಂಡಿದೆ. ಎರಡು ಬೈಕುಗಳು ಅಗ್ರೇಸಿವ್ ಆಗಿ ಕಾಣುವ ಫ್ರಂಟ್ ಎಂಡ್ ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಹೊಸ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಬೈಕುಗಳಲ್ಲಿ ಟ್ವಿನ್-ಪಾಡ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಮಧ್ಯದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ಮೈನ್ ಹೆಡ್‌ಲ್ಯಾಂಪ್‌ಗಳನ್ನು ಟ್ಯಾಂಕ್ ಫೇರಿಂಗ್‌ನ ಮುಂಭಾಗಕ್ಕೆ ಸಂಯೋಜಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಈ ಸ್ಪೋರ್ಟ್-ಟೂರಿಂಗ್ ಬೈಕುಗಳು ಆರಾಮದಾಯಕವಾದ ಸ್ಪ್ಲಿಟ್-ಸೀಟ್ ವಿನ್ಯಾಸ, ಒಳ್ಳೆಯ ರೈಡಿಂಗ್ ಪೊಷಿಷನ್, ನಕಲ್ ಗಾರ್ಡ್, ಎತ್ತರದ ವಿಂಡ್ಸ್ಕ್ರೀನ್ ಮತ್ತು 19-ಲೀಟರ್ ಇಂಧನ ಟ್ಯಾಂಕ್ ಅನ್ನು ಸಹ ಒಳಗೊಂಡಿದೆ. ಈ ಹೊಸ ಬೈಕುಗಳಲ್ಲಿ ಎರಡು-ಹಂತದ ಹೊಂದಾಣಿಕೆ ಮಾಡುವ ರೈಡರ್ ಸೀಟ್ ಹೊಂದಿದ್ದು ಅದು 810 ಎಂಎಂ ಅಥವಾ ಗರಿಷ್ಠ 825 ಎಂಎಂ ಎತ್ತರಕ್ಕೆ ಹೊಂದಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಹೊಸ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಬೈಕುಗಳಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ ಡ್ಯುಯಲ್ 3.5 ಟಿಎಫ್‌ಟಿ ಡಿಸ್ ಪ್ಲೇಗಳನ್ನು ಹೊಂದಿವೆ. ಇದರಲ್ಲಿ ಎಡಭಾಗದ ಡಿಸ್ ಪ್ಲೇಯು ಸ್ಪೀಡ್, ಗೇರ್ ಸ್ಥಾನ, ಫೂಯಲ್ ಇಂಡೀಕೆಟರ್ ಮತ್ತು ಟ್ಯಾಕೋಮೀಟರ್ ಅನ್ನು ಸಹ ಪ್ರದರ್ಶಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಇನ್ನು ಬಲಭಾಗದ ಡಿಸ್ ಪ್ಲೇಯು ಪ್ರವಾಸದ ಬಗ್ಗೆ ಮಾಹಿತಿಯ ನೀಡುವುದರ ಜೊತೆಗೆ ಮೈಲೇಜ್ ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ. ಇನ್ನು ಹೊಸ ಬೈಕುಗಳೊಂದಿಗೆ ನೀಡಲಾಗುವ ವಿವಿಧ ಎಲೆಕ್ಟ್ರಾನಿಕ್ ರೈಡರ್ ಸಾಧನಗಳನ್ನು ನಿಯಂತ್ರಿಸಲು ರೈಡರ್ ಡಿಸ್ ಪ್ಲೇಯನ್ನು ಬಳಸಬಹುದು.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

2021ರ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಮಾದರಿಗಳ ಎಂಜಿನ್ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗೆ ಹೋಲಿಸಿದರೆ ಎಂಜಿನ್ ಅನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ಎಂಜಿನ್ ಅನ್ನು ನೀಡಲಾಗಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಈ ಹೊಸ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಬೈಕುಗಳಲ್ಲಿ ಇತ್ತೀಚೆಗೆ ಅನಾವರಣಗೊಂಡ ಯಮಹಾ ಎಂಟಿ -09 ಮಾದರಿಯಲ್ಲಿರುವ ಎಂಜಿನ್ ಅನ್ನು ಅಳವಡಿಸಿಸಲಾಗಿದೆ. ಇದು ಲಿಕ್ವಿಡ್-ಕೂಲ್ಡ್, ಇನ್-ಲೈನ್ ಮೂರು-ಸಿಲಿಂಡರ್, 889 ಸಿಸಿ ಡಿಒಹೆಚ್‌ಸಿ ‘ಸಿಪಿ 3 'ಎಂಜಿನ್ ಆಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಈ ಎಂಜಿನ್ 118 ಪವರ್ ಮತ್ತು 93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. 2021ರ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಬೈಕುಗಳಲ್ಲಿ ರೈಡರ್ ಫೀಚರ್ ಗಳೊಂದಿಗೆ 3-ಮೋಡ್ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ(ಟಿಸಿಎಸ್), ಜೊತೆಗೆ ಸ್ಲೈಡ್ ಕಂಟ್ರೋಲ್ ಸಿಸ್ಟಮ್ (ಎಸ್‌ಸಿಎಸ್), ಫ್ರಂಟ್-ವೀಲ್ ಲಿಫ್ಟ್ ಕಂಟ್ರೋಲ್ ಸಿಸ್ಟಮ್ (ಎಲ್‌ಐಎಫ್) ಮತ್ತು ಬ್ರೇಕ್ ಕಂಟ್ರೋಲ್ ಸಿಸ್ಟಮ್ (ಬಿಸಿ) ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಟ್ರೇಸರ್ 9 ಬೈಕುಗಳು

ಹೊಸ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಬೈಕುಗಳು ತಮ್ಮ ವಿಭಾಗದಲ್ಲಿ ಅತ್ಯಂತ ಸಮರ್ಥವಾದ ಸ್ಪೋರ್ಟ್-ಟೂರಿಂಗ್ ಬೈಕುಗಳಾಗಿವೆ. ಈ ಎರಡೂ ಬೈಕುಗಳಲ್ಲಿ ಸವಾರರಿಗೆ ಆತ್ಮವಿಶ್ವಾಸವನ್ನು ನೀಡುವ ಹಲವಾರು ಎಲೆಕ್ಟ್ರಾನಿಕ್ಸ್‌ಗಳನ್ನು ಹೊಂದಿವೆ.ಈ ಹೊಸ ಯಮಹಾ ಟ್ರೇಸರ್ 9 ಮತ್ತು ಟ್ರೇಸರ್ 9 ಜಿಟಿ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಬಳಿಕ ಕವಾಸಕಿ 1000 ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
2021 Yamaha Tracer 9 & Tracer 9 GT Globally Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X