ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಉತ್ತಮ ಬೇಡಿಕೆಯೊಂದಿಗೆ ಹೊಸ ಬದಲಾವಣೆಗೆ ಕಾರಣವಾಗುತ್ತಿದ್ದು, ಹಲವಾರು ಸ್ಟಾರ್ಟ್ ಅಪ್ ಕಂಪನಿಗಳು ಗ್ರಾಹಕರ ಬೇಡಿಕೆ ಅನುಸಾರವಾಗಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ.

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

ಹೈದ್ರಾಬಾದ್ ಮೂಲದ ಪ್ಯೂರ್ ಇವಿ ಕಂಪನಿಯು ಕೂಡಾ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿರುವ ಪ್ಯೂರ್ ಇವಿ ಕಂಪನಿಯು ಇದೀಗ ಇಟ್ರಾನ್ಸ್ ಪ್ಲಸ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಇವಿ ಸ್ಕೂಟರ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 56,999 ನಿಗದಿ ಮಾಡಲಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೇವಲ ಆಯ್ದ ನಗರಗಳಲ್ಲಿ ಮಾತ್ರವೇ ಖರೀದಿ ಲಭ್ಯವಿರಲಿದ್ದು, 1.25 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್ ಗರಿಷ್ಠ 65ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

ಹಾಗೆಯೇ ಹೊಸ ಇಟ್ರಾನ್ಸ್ ಪ್ಲಸ್ ಇವಿ ಸ್ಕೂಟರ್‌ನಲ್ಲಿ ರೀಜನರೇಟಿವ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಎಬಿಎಸ್, ಸೊಕ್ ಇಂಡಿಕೇಟರ್ ನೀಡಲಾಗಿದ್ದು, ಇದು ಎಲೆಕ್ಟ್ರಿಕ್ ಸ್ಕೂಟರಿನ ಕಿ.ಮೀ ಮಾಹಿತಿಯೊಂದಿಗೆ ಬ್ಯಾಟರಿ ಲಭ್ಯತೆಯನ್ನು ಸ್ಪಷ್ಟವಾಗಿ ಗೋಚರಿಸುತ್ತದೆ.

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

ಈ ಮೂಲಕ ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಫೀಚರ್ಸ್‌ವುಳ್ಳ ಸ್ಕೂಟರ್ ಮಾದರಿಯೊಂದಿಗೆ ಸಿದ್ದಪಡಿಸಲು ಯತ್ನಿಸಿರುವ ಪ್ಯೂರ್ ಇವಿ ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರ್ ಮಾರಾಟಕ್ಕೆ ಚಾಲನೆ ನೀಡಲಿದ್ದು, ತೆಗೆದುಹಾಕಬಹುದಾದ ಬ್ಯಾಟರಿ ಫೀಚರ್ಸ್ ಲಭ್ಯತೆ ಹಿನ್ನಲೆಯಲ್ಲಿ ಹೆಚ್ಚುವರಿ ಬ್ಯಾಟರಿ ಬ್ಯಾಕ್‌ಪ್ಯಾಕ್ ಹೊಂದಬಹುದಾಗಿದೆ.

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

ಮೇಲ್ನೋಟಕ್ಕೆ ಸ್ಕೂಟರ್ ಮೈಲೇಜ್ ಪ್ರಮಾಣ ತುಸು ಕಡಿಮೆ ಎನ್ನಿಸಿದರೂ ಬಜೆಟ್ ಬೆಲೆಯಲ್ಲಿ ಒಂದು ಉತ್ತಮ ಸ್ಕೂಟರ್ ಎನ್ನಬಹುದಾಗಿದ್ದು, ಕರೋನಾ ವೈರಸ್ ಸಂದರ್ಭದಲ್ಲಿ ವ್ಯಯಕ್ತಿಕ ಬಳಕೆಯ ವಾಹನ ಮಾದರಿಯಾಗಿ ಬಳಕೆ ಮಾಡಿಕೊಳ್ಳಲು ಅನುಕೂಲಕವಾಗಿದೆ ಎನ್ನಬಹುದು.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಸದ್ಯ ಮಾರುಕಟ್ಟೆಯಲ್ಲಿ ಕರೋನಾ ವೈರಸ್ ಪರಿಣಾಮ ಬಹುತೇಕರು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಕ್ಕೆ ಹಿಂಜರಿಯುತ್ತಿರುವುದಲ್ಲದೆ ಬಜೆಟ್ ಬೆಲೆಯಲ್ಲಿ ಸ್ವಂತ ವಾಹನಗಳನ್ನು ಪರಿಪಾಠ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಹೆಚ್ಚಿಸುವಂತ ಬಹುತೇಕ ಆಟೋ ಕಂಪನಿಗಳು ಹೊಸ ಹೊಸ ಯೋಜನೆ ರೂಪಿಸಿವೆ.

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

ಪ್ಯೂರ್ ಇವಿ ಕೂಡಾ ಹೈದ್ರಾಬಾದ್ ಐಐಟಿಯೊಂದಿಗಿನ ಸಹಭಾಗಿತ್ವದೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಸದ್ಯ ಐಐಟಿ ಕ್ಯಾಂಪಸ್‌ನಲ್ಲೇ ತಾತ್ಕಾಲಿಕವಾಗಿ ಸ್ಕೂಟರ್ ಉತ್ಪಾದನಾ ಘಟಕವನ್ನು ತೆರೆದಿದೆ. 2021ರ ವೇಳೆಗೆ ಪ್ರತ್ಯೇಕ ಉತ್ಪಾದನಾ ಘಟಕ ಹೊಂದುವ ಯೋಜನೆಯಲ್ಲಿದ್ದು, ವಾರ್ಷಿಕವಾಗಿ 2 ಲಕ್ಷ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದೆ.

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

2018ರಿಂದಲೇ ವಿವಿಧ ಮಾದರಿಯ ಇವಿ ಸ್ಕೂಟರ್ ಉತ್ಪಾದನೆ ಮಾಡಿರುವ ಪ್ಯೂರ್ ಇವಿ ಕಂಪನಿಯು ಇಟ್ರಾನ್ಸ್ ಪ್ಲಸ್ ಜೊತೆಗೆ ಇಪ್ಯೂಟೊ 7ಜಿ, ಇಟ್ರಾನ್ಸ್, ಇಟ್ರಾನ್ ಪ್ಲಸ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡುತ್ತಿದ್ದು, ಸೀಮಿತ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡುತ್ತಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಇಟ್ರಾನ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಇವಿ

2020ರ ವೇಳೆಗೆ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಸಿದ್ದವಾಗಿದ್ದು, ಕೇವಲ ರೂ.70 ಸಾವಿರ ಬೆಲೆಯಲ್ಲಿ 90 ಮೈಲೇಜ್ ಪ್ರೇರಿತ ಸ್ಕೂಟರ್ ಬಿಡುಗಡೆ ಮಾಡುವ ನೀರಿಕ್ಷೆಯಲ್ಲಿದೆ. ಇದಕ್ಕಾಗಿ ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಪ್ರಮುಖ ಆಟೋ ಕಂಪನಿಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.

Most Read Articles

Kannada
English summary
Pure EV ETrance+ E-Scooter Launched In India. Read in Kannada.
Story first published: Monday, August 17, 2020, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X