ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಬಹುನೀರಿಕ್ಷಿತ ಮೆಟಿಯೊರ್ 350 ಅರ್ಬನ್ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಇದೇ ತಿಂಗಳು 6ರಂದು ಬಿಡುಗಡೆಯಾಗಲಿರುವ ಹೊಸ ಬೈಕಿನ ವಿನ್ಯಾಸದ ಚಿತ್ರಗಳನ್ನು ಅನಾವರಣಗೊಳಿಸಿದೆ.

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಕ್ರೂಸರ್ ಬೈಕ್ ಮಾದರಿಯಾಗಿದ್ದ ಥಂಡರ್‌ಬರ್ಡ್ ಎಕ್ಸ್ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ನಂತರ ರಾಯಲ್ ಎನ್‌ಫೀಲ್ಡ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಥಂಡರ್‌ಬರ್ಡ್ ಎಕ್ಸ್ ಸ್ಥಾನ ತುಂಬಲು ಮೆಟಿಯೊರ್ 350 ಬೈಕ್ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, ಹೊಸ ಬೈಕ್ ಬಿಡುಗಡೆಗೂ ಮುನ್ನ ಹಲವಾರು ಟೀಸರ್ ವಿಡಿಯೋಗಳನ್ನು ಹಂಚಿಕೊಂಡಿದೆ.

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಕಳೆದ ಜೂನ್‌ನಲ್ಲಿಯೇ ಬಿಡುಗಡೆಗೊಳಿಸಬೇಕಿದ್ದ ಹೊಸ ಬೈಕ್‌ ಅನ್ನು ಕರೋನಾ ವೈರಸ್ ಪರಿಣಾಮ ಮುಂದೂಡಿಕೆ ಮಾಡುತ್ತಾ ಬಂದಿದ್ದ ರಾಯಲ್ ಎನ್‌ಫೀಲ್ಡ್ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಬಿಡುಗಡೆಗೆ ಸಿದ್ದವಾಗಿದ್ದು, ಸ್ಥಗಿತಗೊಂಡಿರುವ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಹೊಸ ಬೈಕ್ ಹಲವು ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಮೇಲ್ನೋಟಕ್ಕೆ ಮೆಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಎಕ್ಸ್ ಬೈಕ್ ಮಾದರಿಯ ಹೋಲಿಕೆಯನ್ನು ಪಡೆದುಕೊಂಡಿದ್ದರೂ ಸಹ ತಾಂತ್ರಿಕವಾಗಿ ಸಾಕಷ್ಟು ಭಿನ್ನತೆಗಳನ್ನು ಹೊಂದಿದ್ದು, ಹೊಸ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್‌ಗೇರ್ ಫೀಚರ್ಸ್ ಹೊಂದಿರುವುದು ರೋಡ್ ಟೆಸ್ಟಿಂಗ್ ವೇಳೆ ಬಹಿರಂಗವಾಗಿದೆ.

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಹಾಗೆಯೇ ಹೊಸ ಬೈಕಿನಲ್ಲಿ ವೃತ್ತಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್, ಅಲಾಯ್ ವ್ಹೀಲ್, ಬ್ಲ್ಯಾಕ್ ಔಟ್ ಎಕ್ಸಾಸ್ಟ್ ಸೌಲಭ್ಯಗಳಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಬೈಕ್ ಮಾದರಿಯು ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ.

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಫೈರ್‌ಬಾಲ್ ರೂಪಾಂತರವು ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಟೋನ್ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಔಟ್ ಎಂಜಿನ್ ಮತ್ತು ಕಲರ್ ರಿಮ್ ಟೇಪ್ ಅನ್ನು ಹೊಂದಿದೆ. ಎರಡನೇ ಮಾದರಿಯಾದ ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್‌ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್‌ಬಾರ್ ಮತ್ತು ಕ್ರೋಮ್ ಇಎಫ್‌ಐ ಕವರ್ ಪಡೆದುಕೊಂಡಿದ್ದು, ಇದರಲ್ಲಿ ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಇನ್ನು ಸೂಪರ್‌ನೊವಾ ರೂಪಾಂತರದಲ್ಲಿ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್‌ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ರೆಟ್ರೋ ಅರ್ಬನ್ ಕ್ರೂಸ್ ಮಾದರಿಯಾಗಿರುವ ಮೆಟಿಯೊರ್ 350 ಬೈಕ್ ಮಾದರಿಯಲ್ಲಿರುವ ಎಂಜಿನ್ 346-ಸಿಸಿ ಏರ್ ಕೂಲ್ಡ್ ಓವರ್ ಹೆಡ್ ಕ್ಯಾಮ್‌(OHC) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ ಮೂಲಕ 19.1-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಮೈಲೇಜ್ ಪಡೆದುಕೊಂಡಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೀಗಿರಲಿದೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ಹೊಸ ಮೆಟಿಯೊರ್ 350

ಹೊಸ ಬೈಕಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಬಾಬ್ಬರ್ ಸ್ಟೈಲ್‌ನಲ್ಲಿರುವ ಫ್ಯೂಲ್ ಟ್ಯಾಂಕ್, ಟೂರಿಂಗ್‌ಗೆ ಸಹಕಾರಿಯಾದ ಫ್ಲ್ಯಾಟ್ ಶೇಫ್ ಫುಟ್‌ಪೆಗ್ಸ್, ಅಗಲವಾದ ಕ್ರ್ಯಾಶ್‌ಗಾರ್ಡ್, ವೀಲ್ಡ್ ಸ್ಕ್ರೀನ್, ಫ್ರೇಮ್ ಗಾರ್ಡ್ ಹೊಂದಿದ್ದು, ಹೊಸ ಬೈಕ್ ಮಾದರಿಯು ಈ ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ರೂ. 15 ಸಾವಿರದಿಂದ ರೂ. 20 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Royal Enfield Meteor 350 Launch Tomorrow. Read in Kannada.
Story first published: Thursday, November 5, 2020, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X