ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಕಂಪನಿಯು ತನ್ನ ಜೂಪಿಟರ್ ಝಡ್ಎಕ್ಸ್ ಮಾದರಿಯನ್ನು ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.69,052ಗಳಾಗಿದೆ. ಫ್ರಂಟ್ ಡಿಸ್ಕ್ ಬ್ರೇಕ್, ಝಡ್ಎಕ್ಸ್ ಮಾದರಿಗೆ ಮಾತ್ರ ಸೀಮಿತವಾಗಿದೆ.

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಇದರ ಜೊತೆಗೆ ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರಿನಲ್ಲಿ ಹೊಸ ಎಲೆಕ್ಟ್ರಿಕ್ ಸ್ಟಾರ್ಟ್ ಐ-ಟಚ್ ಸ್ಟಾರ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ ವೇಗವಾಗಿ ಹಾಗೂ ನಿಶಬ್ದವಾಗಿ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡುತ್ತದೆ. ಹೊಸ ಡಿಸ್ಕ್ ಮಾದರಿಯ ಬೆಲೆ ಮಾರುಕಟ್ಟೆಯಲ್ಲಿರುವ ಡ್ರಮ್ ಮಾದರಿಗಿಂತ ರೂ.3,950ಗಳಷ್ಟು ಹೆಚ್ಚಾಗಿದೆ. ಬಿಎಸ್ 6 ಸ್ಕೂಟರಿನ ಬೆಲೆಯನ್ನು ಬಿಎಸ್ 4 ಮಾದರಿಗಿಂತ ರೂ.9062 ಗಳಷ್ಟು ಹೆಚ್ಚಿಸಲಾಗಿದೆ.

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಮಾದರಿಯು ಇಗ್ನಿಷನ್, ಸ್ಟೀಯರಿಂಗ್ ಲಾಕ್, ಸೀಟ್ ಲಾಕ್ ಹಾಗೂ ಫ್ಯೂಯಲ್ ಟ್ಯಾಂಕ್ ಕ್ಯಾಪ್ ಓಪನರ್ ಸೇರಿದಂತೆ ಆಲ್-ಇನ್-ಲಾಕ್ ಫಂಕ್ಷನ್ ಗಳನ್ನು ಹೊಂದಿದೆ. ಇದರಿಂದಾಗಿ ಎಲ್ಲಾ ಕೆಲಸಗಳನ್ನು ಒಂದು ಬಟನ್ ನಿಂದ ನಿರ್ವಹಿಸಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರ್ ಎಕೋಸ್ಟ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಸಿಸ್ಟಂ 15%ನಷ್ಟು ಹೆಚ್ಚು ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಅನ್ನು ಮ್ಯಾಟ್ ಸ್ಟಾರ್‌ಲೈಟ್ ಬ್ಲೂ, ಸ್ಟಾರ್‌ಲೈಟ್ ಬ್ಲೂ ಹಾಗೂ ರಾಯಲ್ ವೈನ್ ಎಂಬ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಸ್ಕೂಟರಿನಲ್ಲಿ 109 ಸಿಸಿಯ ಸಿಂಗಲ್ ಸಿಲಿಂಡರ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.4 ಬಿಹೆಚ್‌ಪಿ ಪವರ್ ಹಾಗೂ 8.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಜೂಪಿಟರ್ ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆಂಷನ್ ಹಾಗೂ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇದರ ಜೊತೆಗೆ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲೈಟ್, ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಯುಎಸ್ ಬಿ ಚಾರ್ಜರ್ ಜೊತೆಗೆ 2-ಲೀಟರ್ ಗ್ಲೋವ್ಬಾಕ್ಸ್ ಹಾಗೂ ಕ್ಲಾಸಿಕ್ ಮಾದರಿಯಲ್ಲಿ ವಿಂಡ್ ಷೀಲ್ಡ್ ಅನ್ನು ಹೊಂದಿದೆ.

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಕಂಪನಿಯು ಇತ್ತೀಚಿಗೆ ತನ್ನ ಬಿಎಸ್ 6 ಸ್ಕೂಟರಿನ ಬೆಲೆಯನ್ನು ಹೆಚ್ಚಿಸಿತ್ತು. ಟಿವಿಎಸ್ ಜೂಪಿಟರ್ 110 ಬಿಎಸ್ 6 ಸ್ಕೂಟರಿನ ಬೆಲೆಯನ್ನು ರೂ.1,040ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಟಿವಿಎಸ್ ಜೂಪಿಟರ್ ಸ್ಕೂಟರಿನ ಬೆಲೆ ರೂ.63,102ಗಳಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್

ಟಿವಿಎಸ್ ಜೂಪಿಟರ್ ಕ್ಲಾಸಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.69,602ಗಳಾಗಿದೆ. ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳು ತನ್ನ ಜೂಪಿಟರ್ ಸರಣಿಯ ಸ್ಕೂಟರ್ ಗಳ ಬೆಲೆಯನ್ನು ರೂ.651ಗಳಷ್ಟು ಹೆಚ್ಚಿಸಿತ್ತು.

Most Read Articles

Kannada
English summary
TVS Jupiter ZX launched with front disc brake. Read in Kannada.
Story first published: Monday, August 24, 2020, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X