ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಟಿವಿಎಸ್ ಮೋಟಾರ್ ಕಂಪನಿಯು 2020ರ ಅಪಾಚೆ ಆರ್‌ಟಿಆರ್ 200 4ವಿ ಬೈಕನ್ನು ನೇಪಾಳದಲ್ಲಿ ಬಿಡುಗಡೆಗೊಳಿಸಿದೆ. ಈ 2020ರ ಅಪಾಚೆ ಆರ್‌ಟಿಆರ್ 200 4ವಿ ಬೈಕನ್ನು ಭಾರತದಲ್ಲಿ ಟಿವಿಎಸ್ ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತು.

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಈ 2020ರ ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಹೊಸ ಎಲ್ಇಡಿ ಹೆಡ್‌ಲ್ಯಾಂಪ್, ಫೆದರ್ ಟಚ್ ಸ್ಟಾರ್ಟ್, ಹೊಸ ಬಾಡಿ ಗ್ರಾಫಿಕ್ಸ್, ರೇಡಿಯಲ್ ಟೈರ್ ಮತ್ತು ರೇಸ್ ಪಡೆದ ಎಬಿಎಸ್ ಅನ್ನು ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ನ್ಯಾವಿಗೇಷನ್, ಕಾಲ್/ಎಸ್ಎಂಎಸ್ ಅಲರ್ಟ್, ಲೀನ್ ಆಂಗಲ್ ಮೀಟರ್ ಮತ್ತು ರೇಸ್ ಟೆಲಿಮೆಟ್ರಿಗಳನ್ನು ತರುವ ಟಿವಿಎಸ್ ಸ್ಮಾರ್ಟ್ ಕನೆಕ್ಟ್ ಬ್ಲೂಟೂತ್ ಸಿಸ್ಟಂ ಅನ್ನು ಸಹ ಹೊಂದಿದೆ.

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

2020ರ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆಯ ಸಂದರ್ಭದಲ್ಲಿ ಟಿವಿಎಸ್ ಮೋಟಾರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್. ದಿಲೀಪ್ ಅವರು ಮಾತನಾಡಿ, ಈ ಹೊಸ ಅಪಾಚೆ ಆರ್‌ಟಿಆರ್ 200 4ವಿ ಬೈಕನ್ನು ನೇಪಾಳದಲ್ಲಿ ಬಿಡುಗಡೆಗೊಳಿಲು ಸಂತಸವಿದೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಈ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಬೈಕ್ ಬಿಡುಗಡೆಗೊಳಿಸಿ ನೇಪಾಳದ ಟಿವಿಎಸ್ ಅಪಾಚೆ ಬೈಕ್ ಅಭಿಮಾನಿಗಳನ್ನು ಸಂತಸಗೊಳಿಸುವುದು ನಮ್ಮ ಬದ್ದತೆಯಾಗಿದೆ ಎಂದು ಅವರು ಹೇಳಿದರು.

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕಿನಲ್ಲಿರುವ, 197.75 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 20.2 ಬಿಎಚ್‍ಪಿ ಪವರ್ ಮತ್ತು 18.1 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕಿನ ಎಂಜಿನ್ 8500 ಆರ್‌ಪಿಎಂನಲ್ಲಿ 20.2 ಬಿಹೆಚ್‌ಪಿ ಪವರ್ ಮತ್ತು 7500 ಆರ್‌ಪಿಎಂನಲ್ಲಿ 16.8 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಇನ್ನು ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ, ಡಿಸ್ಕ್ ಬ್ರೇಕ್ ಜೊತೆಯಲ್ಲಿ ಎಬಿಎಸ್ ಅನ್ನು ಕೂಡ ನೀಡಲಾಗಿದೆ. ನೇಪಾಳಾದಲ್ಲಿ 2020ರ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಗ್ಲೋಸಿ ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ.

ನೇಪಾಳದಲ್ಲಿ ಬಿಡುಗಡೆಯಾಯ್ತು 2020ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಒನ್-ಮೇಕ್ ಚಾಂಪಿಯನ್ ಶಿಪ್ ಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಪಾಚೆ ಆರ್‌ಟಿಆರ್ 200 4ವಿ ಮಾದರಿಯು ಟಿವಿಎಸ್ ಬೈಕುಗಳ ಸರಣಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಇದು ಕೂಡ ಒಂದಾಗಿದೆ.

Most Read Articles

Kannada
English summary
2020 TVS Apache RTR 200 4V Launched In Nepal. Read In Kannada.
Story first published: Wednesday, August 19, 2020, 18:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X