ಭಾರತದಲ್ಲಿ ಬಿಡುಗಡೆಯಾಗಲಿರುವ ರೂ.3 ಲಕ್ಷದೊಳಗಿನ ಅಡ್ವೆಂಚರ್ ಬೈಕುಗಳಿವು
ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕುಗಳ ಅಭಿಮಾನಿಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಯುವ ರೈಡರ್ ಗಳು ಅಡ್ವೆಂಚರ್ ಬೈಕುಗಳನ್ನು ಇಷ್ಟ ಪಡುತ್ತಿದ್ದಾರೆ. ಭಾರತದಲ್ಲಿ ಬಿಡುಗಡೆಗೊಂಡ ಕೆಲವು ಜನಪ್ರಿಯ ಅಡ್ವೆಂಚರ್ ಬೈಕುಗಳು ಯಶ್ವಸಿಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಜನಪ್ರಿಯ ದ್ವಿ ಚಕ್ರ ಕಂಪನಿಗಳು ಅಡ್ವೆಂಚರ್ ಬೈಕ್‍ಗಳನ್ನು ಇತ್ತೀಚಿನ ವರ್ಷದಲ್ಲಿ ಬಿಡುಗಡೆಗೊಳಿಸಿವೆ. ಅಡ್ವೆಂಚರ್ ಬೈಕ್ ಪ್ರಿಯರನ್ನು ಈ ಬೈಕ್‍ಗಳು ಸೆಳೆಯುವಲ್ಲಿ ಯಶ್ವಸಿಯಾಗಿವೆ. ಇದರಲ್ಲಿ ಹೀರೋ ಎಕ್ಸ್‌ಪಲ್ಸ್ 200 ಉತ್ತಮ ಉದಾಹರಣೆಯಾಗಿದೆ. ಇದೇ ಕಾರಣದಿಂದಾಗಿ ಹಲವಾರು ಜನಪ್ರಿಯ ದ್ವಿಚಕ್ರ ಉತ್ಪಾದನಾ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಹಲವಾರು ಯುವಕರಿಗೆ ಅಡ್ವೆಂಚರ್ ಬೈಕ್ ಹೊಂದುವ ಕನಸಿದೆ. ಅಂತಹವರಿಗಾಗಿ ಭಾರತದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ರೂ.3 ಲಕ್ಷದೊಳಗಿನ ಅಡ್ವೆಂಚರ್ ಬೈಕುಗಳ ಮಾಹಿತಿ ಇಲ್ಲಿದೆ.

ಕೆಟಿಎಂ 250 ಅಡ್ವೆಂಚರ್
ಕೆಟಿಎಂ ಕಂಪನಿಯು ಭಾರತದಲ್ಲಿ 250 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. 250 ಅಡ್ವೆಂಚರ್ ಬೈಕ್ ಅನ್ನು ಕೆಟಿಎಂ ಕಂಪನಿಯು ಅಡ್ವೆಂಚರ್ ಬೈಕ್ ಸೆಗ್‍ಮೆಂಟಿನ ಎಂಟ್ರಿ ಲೆವೆಲ್‍ನಲ್ಲಿ ಬಿಡುಗಡೆಗೊಳಿಸಲಿದೆ. ಕೆಟಿಎಂ 250 ಅಡ್ವೆಂಚರ್ ಬೈಕ್, 390 ಅಡ್ವೆಂಚರ್ ಬೈಕಿನಲ್ಲಿರುವಂತಹ ವಿನ್ಯಾಸ, ಚಾಸೀಸ್ ಹಾಗೂ ಫ್ರೇಂಗಳನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‌ಟಿಆರ್ ಬೈಕುಗಳು

250 ಬೈಕ್, 390 ಅಡ್ವೆಂಚರ್ ಬೈಕಿಗಿಂತ ವಿಭಿನ್ನವಾದ ಬಾಡಿ ಗ್ರಾಫಿಕ್ಸ್ ನೊಂದಿಗೆ ಬರಲಿದೆ. ಕೆಟಿಎಂ 250 ಬೈಕ್ ಹಾಲೊಜೆನ್ ಹೆಡ್‍ಲ್ಯಾಂಪ್ ಯುನಿಟ್ ಹೊಂದಿದ್ದರೆ, 390 ಅಡ್ವೆಂಚರ್ ಬೈಕ್ ಪೂರ್ಣ ಪ್ರಮಾಣದ ಎಲ್‍ಇಡಿ ಯುನಿಟ್ ಹೊಂದಿದೆ. ಕೆಟಿಎಂ 250 ಬೈಕಿನಲ್ಲಿ 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಬಾಡಿ ಪ್ಯಾನೆಲ್, ಬೆಲ್ಲಿ ಪ್ಯಾನ್, ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್, ರೇಡಿಯೇಟರ್ ಶ್ರೌಡ್ ಹಾಗೂ ಟೇಲ್ ಸೆಕ್ಷನ್‍ಗಳಿವೆ. ಆದರೆ ಈ ಎರಡೂ ಬೈಕ್‍ಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿರಲಿವೆ.

ಸುಜುಕಿ ವಿ-ಸ್ಟ್ರೋಮ್ 250
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಲಿಮಿಟೆಡ್ ತನ್ನ ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ವಿ-ಸ್ಟ್ರೋಮ್ ಸರಣಿಯ ಅಡ್ವೆಂಚರ್ ಬೈಕ್‍ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಗಳಿಸಿವೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ವಿ-ಸ್ಟ್ರೋಮ್ 250 ಬೈಕಿನಲ್ಲಿ 248 ಸಿಸಿ ಲಿಕ್ವಿಡ್ ಕೂಲ್ಡ್ ಫೋರ್-ಸ್ಟ್ರೋಕ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8,000 ಆರ್‍ಪಿಎಂನಲ್ಲಿ 25 ಬಿಹೆಚ್‍ಪಿ ಪವರ್ ಮತ್ತು 6,500 ಆರ್‍ಪಿಎಂನಲ್ಲಿ 23.4 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಲಿದೆ.

ಹೀರೋ ಎಕ್ಸ್‌ಪಲ್ಸ್ 300
ಹೀರೋ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕ್ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದರಿಂದಾಗಿ ಕಂಪನಿಯು ಅಡ್ವೆಂಚರ್ ಬೈಕು ಪ್ರಿಯರಿಗಾಗಿ ಹೊಸ ಹೀರೋ ಎಕ್ಸ್‌ಪಲ್ಸ್ 300 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಯಮಹಾ ಡಬ್ಲ್ಯುಆರ್ 155
ಯಮಹಾ ಕಂಪನಿಯು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕನ್ನು ಬಿಡುಗಡೆಗೊಳಿಸಿತ್ತು, ಈ ಯಮಹಾ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಯಮಹಾ ಡಬ್ಲ್ಯುಆರ್ 155 ಆರ್ ಬೈಕಿನಲ್ಲಿ 155 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 16 ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.


Click it and Unblock the Notifications