ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಯಮಹಾ ಮೋಟರ್‍‍ಸೈಕಲ್ ಇಂಡಿಯಾ ತನ್ನ ಬಹುನಿರೀಕ್ಷಿತ ಬಿಎಸ್-6 ಎ‍‍ಫ್‍ಝಡ್ ಎಫ್ಐ ಮತ್ತು ಎಫ್‍‍ಝಡ್ ಎಸ್ ಎಫ್ಐ ಬೈಕುಗಳ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿತ್ತು. ಇದೀಗ ಯಮಹಾ ಕಂಪನಿಯು ತನ್ನ ಜನಪ್ರಿಯ ಎರಡು 125ಸಿಸಿ ಸ್ಕೂಟರ್‌ಗ ಬೆಲೆಗಳ ಏರಿಸಲಾಗಿದೆ.

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಯಮಹಾ ಕಂಪನಿಯು ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳ ಬೆಲೆಯನ್ನು ರೂ.800 ಗಳವರೆಗೆ ಹೆಚ್ಚಿಸಲಾಗಿದೆ. ಯಮಹಾ ಕಂಪನಿಯು ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳ ಬೆಲೆಯನ್ನು ರೂಪಾಂತರಗಳ ಅನುಗುಣವಾಗಿ ಏರಿಸಲಾಗಿದೆ. ಯಮಹಾ ಕಂಪನಿಯ ಸರಣಿಯಲ್ಲಿ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು ಜನಪ್ರಿಯ ಮಾದರಿಗಳಾಗಿದೆ.

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಮೊದಲಿಗೆ ಫಾಸಿನೋ 125 ಸ್ಕೂಟರ್ ಬೆಲೆ ಏರಿಕೆಯ ಬಳಿಕ ರೂಪಾಂತರಗಳ ಅನುಗುಣವಾಗಿ ಹೇಳುವುದಾದರೆ, ಫಾಸಿನೋ 125 ಸ್ಟ್ಯಾಂಡರ್ಡ್ ಡ್ರಮ್ ರೂಪಾಂತರದ ಬೆಲೆಯು ರೂ.69,530 ಗಳಾದರೆ, ಸ್ಟ್ಯಾಂಡರ್ಡ್ ಡಿಸ್ಕ್ ಬೆಲೆಯು ರೂ.72,030 ಗಳಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಇನ್ನು ಫಾಸಿನೋ 125 ಸ್ಕೂಟರ್ ಡಿಲಕ್ಸ್ ಡ್ರಮ್ ರೂಪಾಂತರದ ಬೆಲೆಯು ರೂ.70,530 ಗಳಾದರೆ, ಡಿಲಕ್ಸ್ ಡಿಸ್ಕ್ ರೂಪಾಂತರದ ಬೆಲೆಯು ರೂ.73,060 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಏರಿಕೆಯ ಬಳಿಕ ರೂಪಾಂತರಗಳ ಅನುಗುಣವಾಗಿ ಹೇಳುವುದಾದರೆ, ರೇ ಜೆಡ್ಆರ್ 125 ಸ್ಕೂಟರ್ ಡ್ರಮ್ ರೂಪಾಂತರದ ಬೆಲೆಯು ರೂ.70,330 ಗಳಾದರೆ ಡಿಸ್ಕ್ ರೂಪಾಂತರದ ಬೆಲೆಯು ರೂ,73,330 ಗಳಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಇನ್ನು ಮೂರನೇ ಸ್ಟ್ರೀಟ್ ರ್ಯಾಲಿ ರೂಪಾಂತರದ ಬೆಲೆಯು ರೂ.74,330 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ದೀಪಾವಳಿ ಹಬ್ಬದ ಅವಧಿಯಲ್ಲಿ ಈ ಜನಪ್ರಿಯ ಯಮಹಾ ಸ್ಕೂಟರ್‌ಗಳು ತುಸು ದುಬಾರಿಯಾಗಿದೆ.

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಯಮಹಾ ಫಾಸಿನೋ 125 ಸ್ಕೂಟರ್ ಅತ್ಯಂತ ವಕ್ರವಾದ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದ್ದು, ಮಹಿಳಾ ಸವಾರರನ್ನು ಗುರಿಯಾಗಿರಿಸಿಕೊಂಡಿರುವ ವಿನ್ಯಾಸ ಒಳಗೊಂಡಿದೆ ಎಂದು ಹೇಳಬಹುದು. ಇನ್ನು ರೇ ಜೆಡ್ಆರ್ 125 ಸ್ಕೂಟರ್ ಸ್ಪೋರ್ಟಿ ಮತ್ತು ಒರಟಾದ ವಿನ್ಯಾಸವನ್ನು ಹೊಂದಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ರೇ ಜೆಡ್ಆರ್ 125 ಸ್ಕೂಟರ್ ಸ್ಟ್ರೀಟ್ ರ್ಯಾಲಿ ರೂಪಾಂತರವು ನಕಲ್ ಗಾರ್ಡ್ ಮತ್ತು ಹರಿತವಾದ ಡೆಕಲ್‌ಗಳಂತಹ ಹೆಚ್ಚುವರಿ ಸ್ಟೈಲಿಂಗ್ ಅಂಶಗಳನ್ನು ಪಡೆಯುತ್ತದೆ. ಇದು ಬ್ಲಾಕ್ ಪ್ಯಾಟರ್ನ್ ಟೈರ್‌ಗಳನ್ನು ಸಹ ಪಡೆಯುತ್ತದೆ, ಅದು ಮತ್ತಷ್ಟು ಎದ್ದು ಕಾಣಲು ಸಹಾಯ ಮಾಡುತ್ತದೆ.

ದುಬಾರಿಯಾಯ್ತು ಯಮಹಾ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು

ಇನ್ನು ಈ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳಲ್ಲಿ 125 ಸಿಸಿ, ಏರ್-ಕೂಲ್ಡ್, ಇಂಧನ-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 8.04 ಬಿಹೆಚ್‌ಪಿ ಮತ್ತು 5,000 ಆರ್‌ಪಿಎಂನಲ್ಲಿ 9.7 ಎನ್ಎಂ ಅನ್ನು ಉತ್ಪಾದಿಸುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha Fascino 125, Ray ZR 125 Prices Marginally Hiked. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X