ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತಮ್ಮ ಪ್ರಮುಖ ಟೂರಿಂಗ್ ಬೈಕ್ ಆದ ಗೋಲ್ಡ್ ವಿಂಗ್‌ನೊಂದಿಗೆ ಹೊಸ ಬಣ್ಣಗಳನ್ನು ನೀಡಲು ನಿರ್ಧರಿಸಿದೆ. ಈ ಹೊಸ ಬಣ್ಣಗಳ ಆಯ್ಜೆಯೊಂದಿಗೆ 2022ರ ಹೋಂಡಾ ಗೋಲ್ಡ್ ವಿಂಗ್‌ ಮಾದರಿಯು ಬಿಡುಗಡೆಯಾಗಲಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

2022ಕ್ಕೆ ಜಪಾನೀಸ್ ಬ್ರ್ಯಾಂಡ್ ಗೋಲ್ಡ್ ವಿಂಗ್‌ ಅನ್ನು ನವೀಕರಿಸುತ್ತದೆ. GL1800 ಗೋಲ್ಡ್ ವಿಂಗ್ ಮತ್ತು GL1800 ಗೋಲ್ಡ್ ವಿಂಗ್ ಟೂರ್. ಗೋಲ್ಡ್ ವಿಂಗ್ ಟೂರ್‌ನ ಮ್ಯಾನುವಲ್ ರೂಪಾಂತರವು ಈಗ ಗನ್‌ಮೆಟಲ್ ಬ್ಲ್ಯಾಕ್ ಮೆಟಾಲಿಕ್‌ನೊಂದಿಗೆ ಬ್ಲ್ಯಾಕ್ಡ್ ಔಟ್ ಎಂಜಿನ್‌ನಲ್ಲಿ ನೀಡಲಾಗುತ್ತಿದೆ. ಇದೇ ಮಾದರಿಯ DCT ರೂಪಾಂತರವು ಎರಡು ಹೊಸ ಬಣ್ಣಗಳ ಆಯ್ಜೆಯನ್ನು ಪಡೆಯುತ್ತದೆ. ಇದು ಗ್ಲಿಂಟ್ ವೇವ್ ಬ್ಲೂ ಮೆಟಾಲಿಕ್ ಮತ್ತು ಪರ್ಲ್ ಗ್ಲೇರ್ ವೈಟ್ ಆಗಿದೆ. ಇನ್ನು GL1800 ಗೋಲ್ಡ್ ವಿಂಗ್‌ನ DCT ರೂಪಾಂತರವು ಮ್ಯಾಟ್ ಜೀನ್ಸ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಲಭ್ಯವಿರುತ್ತದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಈ ಹೊಸ ಬಣ್ಣದ ಆಯ್ಕೆಗಳು ಬ್ರ್ಯಾಂಡ್‌ಗೆ ಈ ಮೈಟಿ ಟೂರರ್ ಅನ್ನು ಪ್ರಸ್ತುತವಾಗಿ ಇರಿಸಲು ಸಹಾಯ ಮಾಡುತ್ತದೆ ಮತ್ತು ಇನ್ನೊಂದು ವರ್ಷಕ್ಕೆ ಮಹತ್ವಾಕಾಂಕ್ಷೆಯನ್ನು ನೀಡುತ್ತದೆ. ಗೋಲ್ಡ್ ವಿಂಗ್ ತನ್ನ ಅತ್ಯುತ್ತಮ ಸೌಕರ್ಯ, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಇತ್ತೀಚಿನ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಗೋಲ್ಡ್ ವಿಂಗ್‌ನ ಬ್ರಾಂಡ್ ಮೌಲ್ಯವು ಎಷ್ಟು ಪ್ರಬಲವಾಗಿದೆ ಎಂದರೆ ಅವರ ಗ್ರಾಹಕರು ಪ್ರತಿ ಕೆಲವು ವರ್ಷಗಳಿಗೊಮ್ಮೆ ಹೊಸ ಮಾದರಿಗೆ ಅಪ್‌ಗ್ರೇಡ್ ಮಾಡುತ್ತಾರೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ಗೋಲ್ಡ್ ವಿಂಗ್ ಟೂರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಐಷಾರಾಮಿ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ಕೇವಲ 24 ಗಂಟೆಯೊಳಗೆ ಸೋಲ್ಡ್ ಔಟ್ ಆಗಿತ್ತು, ಇ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಹೋಂಡಾ ಗೋಲ್ಡ್ ವಿಂಗ್ ಬೈಕ್ ಟೂರ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್-ಅಪ್ ಯುನಿಟ್(ಸಿಬಿಯು) ಆಗಿ ತರಲಾಗಿದೆ. ಈ ಬೈಕನ್ನು ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗಿದೆ. ಇನ್ನು 2021ರ ಹೋಂಡಾ ಗೋಲ್ಡ್ ವಿಂಗ್ ಬೈಕನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ,

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಈ ಹೋಂಡಾ ಗೋಲ್ಡ್ ವಿಂಗ್ ಜಗತ್ತಿನಾದ್ಯಂತ ಲಭ್ಯವಿರುವ ಐಕಾನಿಕ್ ಬೈಕ್ ಗಳಲ್ಲಿ ಒಂದಾಗಿದೆ. ಹೊಸ ಬೈಕಿನಲ್ಲಿ ಎದ್ದು ಕಾಣುವ ವೈಶಿಷ್ಟ್ಯವೆಂದರೆ ಇದರ 1695 ಎಂಎಂ ಲಾಂಗ್-ವೀಲ್‌ಬೇಸ್. ಡ್ಯುಯಲ್-ಪಾಡ್ ಹೆಡ್‌ಲ್ಯಾಂಪ್‌ಗಳೊಂದಿಗೆ ಅದರ ಡಿಸ್ಕ್ಟಿಕ್ಟಿವ್ ಫ್ರಂಟ್-ಎಂಡ್ ಸ್ಟೈಲಿಂಗ್ ಆಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಈ ಹೋಂಡಾ ಗೋಲ್ಡ್ ವಿಂಗ್ ಬೈಕಿನಲ್ಲಿ 1,833 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 125 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಈ ಐಷಾರಾಮಿ ಟೂರ್ ಬೈಕ್ ಬಹಳಷ್ಟು ಪ್ರೀಮಿಯಂ ಫೀಚರ್ಸ್ ಗಳನ್ನು ಸಹ ಹೊಂದಿದೆ. ಇದರಲ್ಲಿ 7.0-ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಕೂಡ ಹೊಂದಿದೆ.ಇದರೊಂದಿಗೆ ಗೈರೊಕಾಂಪಾಸ್ ನ್ಯಾವಿಗೇಷನ್, ಸ್ಮಾರ್ಟ್ ಕೀ, ಎಲೆಕ್ಟ್ರಾನಿಕ್-ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಹಿಲ್ ಸ್ಟಾರ್ಟ್ ಅಸಿಸ್ಟ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ (ಡಿಸಿಟಿ ಮಾತ್ರ) ಮತ್ತು ಆಲ್-ಎಲ್ಇಡಿ ಲೈಟಿಂಗ್ ಅನ್ನು ಕೂಡ ಒಳಗೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಈ ಗೋಲ್ಡ್ ವಿಂಗ್ ಟೂರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬಲ್-ವಿಷ್ಬೋನ್ ಯುನಿಟ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಸೆಟಪ್ ಅನ್ನು ಹೊಂದಿದೆ. ಇದನ್ನು ಎಲೆಕ್ಟ್ರಿಕ್ ಕಂಟ್ರೋಲ್ ಜೊತೆ ಸಸ್ಪೆಂಕ್ಷನ್-ಡ್ಯಾಂಪಿಂಗ್ ಹೊಂದಾಣಿಕೆಯನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಈ ಹೊಸ ಗೋಲ್ಡ್ ವಿಂಗ್ ಟೂರ್ ಬೈಕ್ ಟ್ರ್ಯಾವೇಲ್, ಸ್ಪೋಟ್ಸ್, ರೈನ್ ಮತ್ತು ಇಕಾನ್ ಎಂಬ ರೈಡಿಂಗ್ ಮೋಡ್ ಅನ್ನು ಹೊಂದಿದೆ. 2021ರ ಗೋಲ್ಡ್ ವಿಂಗ್ ಅತ್ಯಂತ ಬೃಹತ್ ಗಾತ್ರದ ಅಲ್ಟ್ರಾ ಪ್ರೀಮಿಯಂ ಬೈಕ್ ಆಗಿದೆ. ಇನ್ನು ಈ ಬೈಕ್ ಸ್ಟೆಪ್ಡ್ ಸೀಟುಗಳನ್ನು ಸಹ ಹೊಂದಿದೆ, ಇದು ದೀರ್ಘ ಸವಾರಿಗಳಿಗೆ ಸಾಕಷ್ಟು ಆರಾಮದಾಯಕವಾಗಿರುತ್ತದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು 2021ರ ಜೂನ್ ತಿಂಗಳಿನ ತನ್ನ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 2.34 ಲಕ್ಷ ದ್ವಿಚಕ್ರ ವಾಹನಗಳ ಮಾರಾಟಗೊಳಿಸಿವೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಹೋಂಡಾ ಕಂಪನಿಯು 2.10 ಲಕ್ಷ ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.11 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳಿನಲ್ಲಿ 21,583 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ Honda Gold Wing ಬೈಕ್

ಇನ್ನು ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಹೋಂಡಾ ಕಂಪನಿಯು 8042 ಯುನಿಟ್‌ಗಳನ್ನು ರಫ್ತು ಮಾಡಿದ್ದರು. ಕಳೆದ ತಿಂಗಳ ಮಾರಟಕ್ಕೆ ಹೋಲಿಸಿದರೆ ಶೇ.168 ರಷ್ಟು ಬೆಳವಣಿಗೆಯನ್ನು ಕಂಡಿದೆ.ಕಳೆದ ತಿಂಗಳ ಮಾರಾಟದಲ್ಲಿ ಆಕ್ಟಿವಾ 6ಜಿ ಮತ್ತು ಶೈನ್ ಮಾದರಿಗಳು ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಹೋಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ.

Most Read Articles

Kannada
English summary
2022 honda gold wing gets new colour options details
Story first published: Tuesday, November 23, 2021, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X