ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ (Honda) ತನ್ನ ಜನಪ್ರಿಯ ಸುಪ್ರಾ ಜಿಟಿಆರ್ 150 ಸ್ಕೂಟರ್‌ನ ವಾರ್ಷಿಕ ನವೀಕರಿಸಿದ ಆವೃತ್ತಿಯನ್ನು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸಿದೆ. ಇದನ್ನು ವಿಯೆಟ್ನಾಂ ಮಾರುಕಟ್ಟೆಯಲ್ಲಿ ವಿನ್ನರ್ ಎಕ್ಸ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

2022ರ ಹೋಂಡಾ ಸುಪ್ರಾ ಜಿಟಿಆರ್ 150 (Honda Supra GTR 150) ಸ್ಕೂಟರ್ ಹೊಸ ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ. ಆದರೆ ಉಳಿದಂತೆ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾಗದೆ ಉಳಿದಿವೆ. ವಾರ್ಷಿಕವಾಗಿ ನವೀಕರಿಸಲಾದ ಹೋಂಡಾ ಸುಪ್ರಾ ಜಿಟಿಆರ್ 150 ಈಗ ಹೊಸ ಮತ್ತು ಸ್ಪೋರ್ಟಿಯರ್-ಕಾಣುವ ಮುಂಭಾಗದ ವಿನ್ಯಾಸದೊಂದಿಗೆ ಬರುತ್ತದೆ. ಮುಂಭಾಗ ಟ್ವಿನ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಸ್ಪೋರ್ಟ್‌ಬೈಕ್‌ನಿಂದ ಪಡೆಯಲಾಗಿದೆ ಎಂದು ತೋರುತ್ತದೆ ಮತ್ತು ಅದರ ಡೈನಾಮಿಕ್ ರೈಡಿಂಗ್ ನಿಲುವನ್ನು ಬೆಂಬಲಿಸಲು ದೊಡ್ಡ ವ್ಹೀಲ್ ಗಳನ್ನು ಹೊಂದಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಈ ಹೊಸ ಹೋಂಡಾ ಸುಪ್ರಾ ಜಿಟಿಆರ್ 150 ಸ್ಕೂಟರ್ ಮಾದರಿಯ ಕೆಲವು ಪ್ರಮುಖ ವೈಶಿಷ್ಟ್ಯಗಳ ಮುಖ್ಯಾಂಶಗಳು ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಮತ್ತು ನೀಲಿ ಬ್ಯಾಕ್ಲಿಟ್ ಸಂಪೂರ್ಣ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಈ ಹೊಸ ಸ್ಕೂಟರ್‌ನ ಹೃದಯಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 150ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 15.4 ಬಿಹೆಚ್‍ಪಿ ಪವರ್ ಮತ್ತು 13.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ,

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಸ್ಕೂಟರ್ ಎರಡೂ ಕಡೆಗಳಲ್ಲಿ ಬೃಹತ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಹೋಂಡಾ ಸುಪ್ರಾ ಜಿಟಿಆರ್ 150 ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಸೆಟಪ್ ಅನ್ನು ಹೊಂದಿದೆ,

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಹೊಸ ಹೋಂಡಾ ಸುಪ್ರಾ ಜಿಟಿಆರ್ 150 ಸ್ಕೂಟರ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರುವುದಿಲ್ಲ. ಆದರೆ ಶೀಘ್ರದಲ್ಲೇ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಮಾದರಿಯು ಬಿಡುಗಡೆಯಾದ ಬಳಿಕ ಯಮಹಾ ಏರೋಕ್ಸ್ 155 ಸ್ಕೂಟರ್'ಗೆ ಪೈಪೋಟಿ ನೀಡುತ್ತದೆ. ಇದು ಈಗಾಗಲೇ ದೇಶದಲ್ಲಿ ಸ್ಪೋರ್ಟಿ ಮೋಟೋ ಸ್ಕೂಟರ್ ಆಗಿ ಮಾರಾಟವಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತಿ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 2,80,381 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಕಳೆದ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 2,56,170 ಯುನಿಟ್‌ಗಳನ್ನು ಮಾರಾಟಗೊಳಿಸಿದರೆ, ಉಳಿದ 24,211 ಯುನಿಟ್‌ಗಳನ್ನು ರಪ್ತು ಮಾಡಿದ್ದಾರೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,12,641 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.38 ರಷ್ಟು ಕುಸಿತವಾಗಿದೆ. ಇನ್ನು ಹೋಂಡಾ ಕಂಪನಿಯು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 20,565 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.38 ರಷ್ಟು ಕುಸಿತವಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕರ್ನಾಟದಲ್ಲಿ ಮಾತ್ರ ಇದುವರೆಗೆ ಸುಮಾರು 40 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲುಗಳನ್ನು ಸಾಧಿಸಿದೆ. ಕರ್ನಾಟಕದಲ್ಲಿ ಮೊದಲ 20 ಲಕ್ಷ ಮಾರಾಟ 16 ವರ್ಷಗಳಲ್ಲಿ ಆಗಿದೆ. ಇನ್ನು ಕೇವಲ 5 ವರ್ಷಗಳಲ್ಲಿ 20 ಲಕ್ಷ ಗ್ರಾಹಕರನ್ನು ಸೇರಿಸಿದೆ. ಮಹಾರಾಷ್ಟ್ರದ ಅಹ್ಮದ್‌ನಗರ, ಮಧ್ಯಪ್ರದೇಶದ ಗ್ವಾಲಿಯರ್, ಒಡಿಶಾದ ಅಂಗುಲ್, ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶದ ಕಾನ್ಪುರ, ಕರ್ನಾಟಕದ ಮೈಸೂರು, ಆಂಧ್ರಪ್ರದೇಶದ ವಿಜಯವಾಡ, ಮುಜಾಫರ್‌ಪುರದಲ್ಲಿ ತನ್ನ ಬಿಗ್ ವಿಂಗ್ ಔಟ್‌ಲೆಟ್‌ಗಳನ್ನು ವಿಸ್ತರಿಸುವ ಮೂಲಕ ಹೋಂಡಾ ದೇಶಾದ್ಯಂತ ತನ್ನ ಪ್ರೀಮಿಯಂ ಮಾರಾಟ ಜಾಲವನ್ನು ಬಲಪಡಿಸಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ ಹೋಂಡಾ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಆಕ್ಟಿವಾ ಸ್ಕೂಟರ್ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಮೊದಲ 2.5 ಕೋಟಿ ಮಾರಾಟವನ್ನು 16 ವರ್ಷಗಳ ಕಾರ್ಯಾಚರಣೆಯಲ್ಲಿ ಸಾಧಿಸಲಾಗಿದೆ ಎಂದು ಹೋಂಡಾ ಹೇಳಿದೆ. ಮುಂದಿನ 2.5 ಕೋಟಿ ಯುನಿಟ್‌ಗಳು ಕೇವಲ 5 ವರ್ಷಗಳಲ್ಲಿ ಮಾರಾಟವಾದವು.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ Honda Supra GTR 150 ಸ್ಕೂಟರ್

ಕೆಲವು ತಿಂಗಳುಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ 2.5 ಕೋಟಿ ಮಾರಾಟದ ಮೈಲಿಗಲ್ಲನ್ನು ದಾಟಿದ ಮೊದಲ ಸ್ಕೂಟರ್ ಮಾದರಿಯೆಂದರೆ ಆಕ್ಟಿವಾ ಸರಣಿ ಎಂಬುದನ್ನೂ ಗಮನಿಸಬೇಕು. ಪ್ರಸ್ತುತ, ಆಕ್ಟಿವಾ ಸರಣಿಯು ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಅನ್ನು ಒಳಗೊಂಡಿದೆ, ಇವೆರಡೂ ಬಹು ರೂಪಾಂತರಗಳನ್ನು ಹೊಂದಿವೆ. ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಡೀಲರ್ ನೆಟ್‌ವರ್ಕ್‌ಗಳನ್ನು ಹೊಂದಿದ್ದು, ಇದು ರೆಡ್‌ವಿಂಗ್ ಮತ್ತು ಬಿಗ್‌ವಿಂಗ್ ಆಗಿದೆ.

Most Read Articles

Kannada
English summary
2022 honda supra gtr 150 scooter unveiled features new changes details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X