ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್‌ಗಳಿಗೆ ಹೆಚ್ಚು ಜನಪ್ರಿಯವಾಗುತ್ತಿವೆ. ಅಡ್ವೆಂಚರ್ ಬೈಕ್‌ಗಳ ಅಭಿಮಾನಿ ವರ್ಗವು ದೊಡ್ಡ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಇದರಿಂದ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ಪೈಪೋಟಿಗಿಳಿದು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿವೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಅಡ್ವೆಂಚರ್ ಬೈಕ್‌ಗಳು ಡೃಡವಾದ ಸಸ್ಪೆಂಕ್ಷನ್ ಸೆಟಪ್ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಕಾರಣದಿಂದಾಗಿ ಎಲ್ಲಾ ರೀತಿಯ ರಸ್ತೆಗಳಲ್ಲಿ ಮತ್ತು ಕಠಿಣವಾದ ಭೂಪ್ರದೇಶಗಳಲ್ಲಿ ಸಾಗಬಹುದು. ಅಡ್ವೆಂಚರ್ ಬೈಕ್‌ಗಳ ಮೂಲಕ ಕಠಿಣವಾದ ಹಾದಿಗಳಲ್ಲಿ ಅಡ್ವೆಂಚರ್ ಮಾಡುವ ಮೂಲಕ ಸಾಗಬಹುದು. ಇನ್ನು ಸಾಮಾನ್ಯ ರಸ್ತೆಗಳಲ್ಲೂ ಉತ್ತಮವಾಗಿ ಚಲಿಸುತ್ತದೆ. ವಿಶೇಷವಾಗಿ ಉಬ್ಬುಗಳು, ಗುಂಡಿಗಳು ಮತ್ತು ಸ್ಪೀಡ್-ಬ್ರೇಕರ್‌ಗಳಲ್ಲಿ ನಡುವೆ ಉತ್ತಮವಾಗಿ ಚಲಿಸುತ್ತದೆ. ಅಡ್ವೆಂಚರ್ ಬೈಕ್ ಪ್ರೀಯರಿಗೆ ಭಾರತದಲ್ಲಿ ಹಲವಾರು ಆಯ್ಕೆಗಳಿವೆ. ಇದರಲ್ಲಿ ಕೈಗೆಟುಕುವ ದರದ ಪ್ರಮುಖ ಮೂರು ಅಡ್ವೆಂಚರ್ ಬೈಕ್‌ಗಳ ಮಾಹಿತಿ ಇಲ್ಲಿ ನೀಡುತ್ತೇವೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಹೀರೋ ಎಕ್ಸ್‌ಪಲ್ಸ್ 200

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಿಎಸ್-6 ಎಕ್ಸ್‌ಪಲ್ಸ್ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ.1,15,300 ಆಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ 199.6 ಸಿಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 17.8 ಬಿಹೆಚ್‌ಪಿ ಪವರ್ ಮತ್ತು 6,400 ಆರ್‌ಪಿಎಂನಲ್ಲಿ 16.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಈ ಬೈಕಿನಲ್ಲಿ ಏರ್/ಆಯಿಲ್-ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಹಿಂದಿನ ಮಾದರಿಗಿಂತ ತೂಕ ಹೆಚ್ಚಾಗಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 ಬೈಕ್ 157 ಕೆಜೆ ತೂಕವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಹೊಸ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ. ಇನ್ನು ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ 2021ರ ಹಿಮಾಲಯನ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಆರಂಭಿಕ ಬೆಲೆಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ.1.92 ಲಕ್ಷಗಳಾಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಹೊಸ ಫೀಚರ್ ಗಳು ಪಡೆದುಕೊಂಡಿದೆ. ಇವುಗಳಲ್ಲಿ ನವೀಕರಿಸಿದ ಸೀಟ್ ಸೇರಿವೆ. ಇದು ಈಗ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ವಿಶೇಷವಾಗಿ ಲಾಂಗ್ ರೈಡ್ ತೆರಳುವಾಗ ಇದು ಹೆಚ್ಚು ಸಹಕಾರಿಯಾಗಿರುತ್ತದೆ. ಇನ್ನು ನವೀಕರಿಸಿದ ಹಿಂಭಾಗದ ಕ್ಯಾರಿಯರ್ ಮತ್ತು ಮುಂಭಾಗ ಮೆಟಲ್ ಫ್ರೇಮ್ ಮತ್ತು ಹೊಸ ವಿಂಡ್‌ಸ್ಕ್ರೀನ್ ಸೇರ್ಪಡೆಯಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ‘ಟ್ರಿಪ್ಪರ್ ನ್ಯಾವಿಗೇಷನ್' ಅನ್ನು ಸಹ ಒಳಗೊಂಡಿದೆ. ಹೊಸ ಸರಳ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಅಳವಡಿಸಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

2021ರ ಹಿಮಾಲಯನ್ ಬೈಕಿನಲ್ಲಿ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಲಾಗಿದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಕೆಟಿಎಂ 250 ಅಡ್ವೆಂಚರ್

ಆಸ್ಟ್ರಿಯಾದ ಸ್ಪೋರ್ಟ್ ಬೈಕ್ ತಯಾರಿಕಾ ಕಂಪನಿಯಾದ ಕೆಟಿಎಂ ಕೂಡಾ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬೈಕ್ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವು ಅಡ್ವೆಂಚರ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಕಂಪನಿಯು ಭಾರತದಲ್ಲೂ ಹಂತ ಹಂತವಾಗಿ ತನ್ನ ಪ್ರಮುಖ ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಭಾರತದಲ್ಲಿ ಮಾರಾಟವಾಗುತ್ತಿರುವ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ.2,53,587 ಆಗಿದೆ. ಈ ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9000 ಆರ್ಪಿಎಂನಲ್ಲಿ 29.5 ಬಿಹೆಚ್ಪಿ ಮತ್ತು 7500 ಆರ್‌ಪಿಎಂನಲ್ಲಿ 24 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಬೈಕ್‌ಗಳಿವು

ಕೆಟಿಎಂ 250 ಅಡ್ವೆಂಚರ್ ಬೈಕಿನಲ್ಲಿ ಹಾಲೋಜೆನ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‍‌ಎಲ್ಎಸ್, ಎಲ್ಇಡಿ ಟೈಲ್ ಲೈಟ್ ಮತ್ತು ಟರ್ನ್ ಇಂಡಿಕೇಟರ್, ಎಲ್‌ಸಿಡಿ ಡಿಸ್‌ಪ್ಲೇ, 14.5-ಲೀಟರ್ ಸಾಮರ್ಥ್ಯ ಫ್ಯೂಲ್ ಟ್ಯಾಂಕ್ ಅನ್ನು ಹೊಂದಿದೆ.

Most Read Articles

Kannada
English summary
Affordable Adventure Bikes. Read In Kannada.
Story first published: Friday, April 30, 2021, 22:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X