ಎಥರ್ ಇವಿ ಸ್ಕೂಟರ್ ವಿತರಣೆ ಪಡೆದ ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್
ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗುತ್ತಿದ್ದು, ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಕಂಪನಿಯಾಗಿರುವ ಎಥರ್ ಎನರ್ಜಿಯು ಗ್ರಾಹಕರ ಬೇಡಿಕೆಯೆಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದೆ.

ಬೆಂಗಳೂರು ಮತ್ತು ಚೆನ್ನೈ ನಂತರ ದೇಶದ ಪ್ರಮುಖ 11 ಮಾಹಾನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಜಾಲವನ್ನು ವಿಸ್ತರಿಸುತ್ತಿರುವ ಎಥರ್ ಎನರ್ಜಿ ಕಂಪನಿಯು 2ನೇ ಹಂತದ ವಾಹನ ಮಾರಾಟ ಮಳಿಗೆಗಳ ವಿಸ್ತರಣೆ ಯೋಜನೆಯಲ್ಲಿ ಮುಂಬೈ, ಅಹಮದಾಬಾದ್, ಪುಣೆ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡಾ ಹೊಸ ಮಾರಾಟ ಮಳಿಗೆಗಳಿಗಳಿಗೆ ಚಾಲನೆ ನೀಡಲಾಗಿದೆ. ದೆಹಲಿಯಲ್ಲಿ ಮೊದಲ ಬಾರಿಗೆ ಇವಿ ಸ್ಕೂಟರ್ ವಿತರಣೆ ಆರಂಭಿಸಿದ ಸಂಭ್ರಮಕ್ಕಾಗಿ ಎಥರ್ ಕಂಪನಿಯು ಮೊದಲ ಯುನಿಟ್ ಅನ್ನು ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಅವರಿಗೆ ವಿತರಣೆ ಮಾಡಲಾಗಿದೆ.

ಪವನ್ ಮುಂಜಾಲ್ ಕುಟುಂಬವು ಎಥರ್ ಕಂಪನಿಯಲ್ಲಿ ಹೂಡಿಕೆಯೊಂದಿಗೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಎಥರ್ ಕಂಪನಿಯು ಇತ್ತೀಚೆಗೆ ಹೊಸ ಬಂಡವಾಳ ಹೂಡಿಕೆಯೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕವನ್ನು ಆರಂಭಿಸಿದೆ.

ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾಗಿರುವ ಹೊಸ ಉತ್ಪಾದನಾ ಘಟಕದಲ್ಲಿ ಇವಿ ಸ್ಕೂಟರ್ ಉತ್ಪಾದನೆ ಚಾಲನೆ ನೀಡಿರುವ ಎಥರ್ ಕಂಪನಿಯು ವಾರ್ಷಿಕ 1 ಲಕ್ಷ ಸ್ಕೂಟರ್ ನಿರ್ಮಾಣ ಗುರಿಯೊಂದಿಗೆ 1.23 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದೆ.

ಎಥರ್ ಎನರ್ಜಿ ಕಂಪನಿಯ ಹೊಸ ಯೋಜನೆಗಾಗಿ ರೂ. 259 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಬೃಹತ್ ಯೋಜನೆಯಲ್ಲಿ ಉದ್ಯಮಿಗಳಾದ ಸಚಿನ್ ಬನ್ಸಾಲ್ ಮತ್ತು ಪವನ್ ಮುಂಜಾಲ್ ಕುಟುಂಬವು ಹೆಚ್ಚಿನ ಮಟ್ಟದ ಪಾಲು ಹೊಂದಿವೆ. ಫ್ಲಿಪ್ ಕಾರ್ಟ್ ಸಹಸಂಸ್ಥಾಪಕ ಸಚಿನ್ ಬನ್ಸಾಲ್ ಅವರು ರೂ. 171 ಕೋಟಿ ಮತ್ತು ಪವನ್ ಮುಂಜಾಲ್ ಕುಟುಂಬವು ಸುಮಾರು ರೂ. 88 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಎಥರ್ ಕಂಪನಿಯ ಸೀರಿಸ್ ಡಿ ವಿಭಾಗದಲ್ಲಿನ ಬಂಡವಾಳ ಹೂಡಿಕೆಗೂ ಮುನ್ನ ಎರಡು ಬಾರಿ ಹಂತ ಹಂತವಾಗಿ ಹೂಡಿಕೆ ಮಾಡಿದ್ದ ಸಚಿನ್ ಬನ್ಸಾಲ್ ಅವರು ಇದುವರೆಗೆ ಒಟ್ಟು ರೂ. 392 ಕೋಟಿ ಬಂಡವಾಳದೊಂದಿಗೆ ಹೆಚ್ಚಿನ ಪಾಲು ಪಡೆದುಕೊಂಡಿದ್ದು, ಹೊಸ ಯೋಜನೆಗಾಗಿ ಪವನ್ ಮುಂಜಾಲ್ ಕುಟುಂಬವು ಕೈಜೋಡಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.

ಹೊಸ ಬಂಡವಾಳದೊಂದಿಗೆ ಉತ್ಪಾದನೆ ಹೆಚ್ಚಿಸಿರುವ ಎಥರ್ ಕಂಪನಿಯು 2021ರ ಕೊನೆಯಲ್ಲಿ ಒಟ್ಟು 15 ರಾಜ್ಯಗಳ 27 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದುವ ಗುರಿಹೊಂದಿದ್ದು, ದುಬಾರಿ ಬೆಲೆ ನಡುವೆಯೂ ಎಥರ್ ಪ್ರೀಮಿಯಂ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

450ಎಕ್ಸ್ ಸ್ಕೂಟರ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷ ಬೆಲೆ ಹೊಂದಿದ್ದು, ಬಣ್ಣದ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಾದ 450ಎಕ್ಸ್ ಮಾದರಿಯಲ್ಲೇ ಸ್ಪೆಷಲ್ ಎಡಿಷನ್ ಕೂಡಾ ಒಂದೇ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಸ್ಟ್ಯಾಂಡರ್ಡ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರೇ, ವೈಟ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications








