ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಭಾರತದ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬೈಕ್‌ಗಳ ಆಯ್ಕೆಗಳಿವೆ. ಪ್ರತಿ ವಿಭಾಗದಲ್ಲಿಯು ಹಲವು ವಿಧದ ಆಯ್ಕೆಗಳನ್ನು ಒಳಗೊಂಡಿದೆ, ಪ್ರತಿ ಖರೀದಿದಾರನು ವಿಭಿನ್ನ ಅವಶ್ಯಕತೆ ಮತ್ತು ಬಯಕೆಗಳನ್ನು ಹೊಂದಿರಬಹುದು. ಗ್ರಾಹಕರ ಅವಶ್ಯಕತೆ ಮತ್ತು ಬಯಕೆಗಳಿಗೆ ತಕ್ಕಂತೆ ವಿಭಿನ್ನ ಆಯ್ಕೆಗಳಿವೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಇತ್ತೀಚೆಗೆ ಬಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದ ಮತ್ತು ಅತಿ ಹೆಚ್ಚು ಮೈಲೇಜ್ ಅನ್ನು ಒದಗಿಸುವ ಬೈಕ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಮಾಧ್ಯಮ ವರ್ಗದವರಿಗೂ ಕಡಿಮೆ ಬೆಲೆಯಲ್ಲಿ ಖರೀಸಬಹುದಾದ ಜನಪ್ರಿಯ ಬೈಕ್‌ಗಳ ಆಯ್ಕೆಗಳಿವೆ. 125 ಸಿಸಿ ಬೈಕ್‌ಗಳು ಉತ್ತಮ ಮೈಲೇಜ್ ಮತ್ತು ದೈನಂದಿನ ಬಳಕೆಗೆ ಯೋಗ್ಯ ಮಟ್ಟದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಇದರಿಂದ 125 ಸಿಸಿ ಬೈಕ್‌ಗಳು ಉತ್ತಮವಾಗಿ ಬೇಡಿಕೆಯನ್ನು ಹೊಂದಿದೆ, ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಈ 2021ರ ಜನಪ್ರಿಯ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಟಿವಿಎಸ್ ರೈಡರ್

125ಸಿಸಿ ವಿಭಾಗಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಹೊಸ ಟಿವಿಎಸ್ ರೈಡರ್ ಆಗಿದೆ. ಈ ಹೊಸ ಬೈಕ್ ಮಾದರಿಯು ಟಿವಿಎಸ್ ಕಂಪನಿಯ ಇತರೆ ಕಮ್ಯುಟರ್ ಬೈಕ್ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ತಂತ್ರಜ್ಞಾನ ಸೌಲಭ್ಯಗಳ ಆಧಾರದ ಮೇಲೆ ಪ್ರಮುಖ ಮೂರು ವೆರಿಯೆಂಟ್ ಬಿಡುಗಡೆ ಮಾಡಿಲಾಗಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಈ ಹೊಸ ಬೈಕ್ ಡ್ರಮ್, ಡಿಸ್ಕ್ ಮತ್ತು ಕನೆಕ್ಟೆಡ್ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಈ ಹೊಸ ಟಿವಿಎಸ್ ರೈಡರ್ ಆರಂಭಿಕ ಬೆಲೆಯು ರೂ,77,500 ಆಗಿದೆ. ಈ ಬೈಕಿನಲ್ಲಿ 124.8 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಬಜಾಜ್ ಪಲ್ಸರ್ ಎನ್ಎಸ್125

ಪಲ್ಸರ್ ಎನ್ಎಸ್ ಮಾದರಿಗಳು ಪ್ರೀಮಿಯಂ ಬೈಕ್ ಸರಣಿಯಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿದೆ. ಎನ್ಎಸ್ ಸರಣಿಯಲ್ಲಿ ಎನ್ಎಸ್125 ಎಂಟ್ರಿ ಲೆವೆಲ್ ಮಾದರಿಯಾಗಿದೆ. ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯನ್ನು ಪಲ್ಸರ್ ಎನ್ಎಸ್ 160 ಮಾದರಿಯನ್ನು ಆಧರಿಸಿ ಅಭಿವೃದ್ದಿಪಡಿಸಿರುವ ಬಜಾಜ್ ಆಟೋ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ನೀಡಿದ್ದಾರೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಫೀಚರ್ಸ್ ಮತ್ತು ಪರ್ಫಾಮೆನ್ಸ್‌ನಲ್ಲಿ ಈ ಬೈಕ್ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಈ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಬರ್ನ್ಟ್ ರೆಡ್, ಪ್ಯೂಟರ್ ಗ್ರೇ, ಸ್ಯಾಫೈರ್ ಬ್ಲೂ ಮತ್ತು ಆರೆಂಜ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಎನ್ಎಸ್125 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಇನ್ನು ಈ ಹೊಸ ಪಲ್ಸರ್ ಎನ್ಎಸ್125 ಬೈಕಿನಲ್ಲಿ 124.45 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 11.6 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 11 ಎನ್ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಬೈಕಿನ ಸೀಟ್ 805 ಎಂಎಂ ಎತ್ತರದಲ್ಲಿ ಇರಿಸಲಾಗಿದೆ. ಇನ್ನು ಈ ಬೈಕ್ 144 ಕೆಜಿ ತೂಕವನ್ನು ಹೊಂದಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಬಜಾಜ್ ಪಲ್ಸರ್ 125

ದೈನಂದಿನ ಪ್ರಯಾಣದ ಕೆಲಸವನ್ನು ಮಾಡುವ ಕೈಗೆಟುಕುವ ಮತ್ತು ಪ್ರಾಯೋಗಿಕ ಬೈಕ್ ಅನ್ನು ಖರೀದಿಸಲು ಬಯಸಿದರೆ, ಬಜಾಜ್ ಪಲ್ಸರ್ 125 ಒಂದು ಉತ್ತಮ ಆಯ್ಕೆಯಾಗಿದೆ. ಪಲ್ಸರ್ 150 ಸಹ ಇದೆ ಮತ್ತು ಬಜೆಟ್‌ನೊಳಗೆ ಹೊಂದಿಕೊಳ್ಳುತ್ತದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಪಲ್ಸರ್ 125 ನೊಂದಿಗೆ ಹೆಚ್ಚಿನ ಇಂಧನ ದಕ್ಷತೆಯನ್ನು ನೀವು ಪಡೆಯಬಹುದು. ಪಲ್ಸರ್ 125 ವಿನ್ಯಾಸ ಮತ್ತು ಸ್ಟೈಲಿಂಗ್‌ನಲ್ಲಿ ಪಲ್ಸರ್ 150 ಅನ್ನು ಹೋಲುತ್ತದೆ. ಪಲ್ಸರ್ 150 ಮಾದರಿಯಿಂದ ಹಲವು ಅಂಶಗಳನ್ನು ಎರವಲು ಪಡೆಯಲಾಗಿದೆ. ಇದರಲ್ಲಿ ಎಲ್ಲಾ ಬಾಡಿ ಪ್ಯಾನೆಲ್‌ಗಳು, ಟೈರ್‌ಗಳು, ಡಿಸ್ಕ್ ಬ್ರೇಕ್‌ಗಳು, ಚಾಸಿಸ್, ಸಸ್ಪೆಂಕ್ಷನ್ ಮತ್ತು ಹೆಚ್ಚಿನವುಗಳಿವೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಹೋಂಡಾ ಎಸ್‌ಪಿ 125

ಈ ಹೋಂಡಾ ಎಸ್‌ಪಿ 125 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಈ ಎಸ್‌ಪಿ 125 ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍‍ಗಳ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಎಸ್‌ಪಿ 125 ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌, ಎಂಜಿನ್ ಸ್ಟಾರ್ಟ್/ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍‍ಗಳನ್ನು ಸಹ ಹೊಂದಿದೆ.

ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ 125ಸಿಸಿ ಬೈಕ್‌ಗಳಿವು

ಈ ಹೋಂಡಾ ಎಸ್‍‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

Most Read Articles

Kannada
English summary
Best 125cc motorcycles under rs 1 lakh in year 2021 find here all details
Story first published: Tuesday, December 28, 2021, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X