ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಭಾರತೀಯ ಮಾರುಕಟ್ತೆಯಲ್ಲಿ 125 ಸಿಸಿ ವಿಬಾಗದ ಹಲವು ಬೈಕ್‌ಗಳಿವೆ. 125 ಸಿಸಿ ಬೈಕ್‌ಗಳು ಉತ್ತಮ ಮೈಲೇಜ್ ಮತ್ತು ದೈನಂದಿನ ಬಳಕೆಗೆ ಯೋಗ್ಯ ಮಟ್ಟದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಇದರಿಂದ 125 ಸಿಸಿ ಬೈಕ್‌ಗಳು ಉತ್ತಮವಾಗಿ ಮಾರಾಟವಾಗುತ್ತಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ 125 ಸಿಸಿ ವಿಬಾಗದಲ್ಲಿ ಒಟ್ಟು 1,71,102 ಬೈಕ್‌ಗಳನ್ನು ದೇಶಾದ್ಯಂತ ಮಾರಾಟ ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ 2,42,676 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.29.49 ರಷ್ಟು ಇಳಿಕೆ ಕಂಡಿದೆ. ಕಳೆದ ತಿಂಗಳು ಬಹುತೇಕ ವಿಭಾಗದ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಇನ್ನು ಕಳೆದ ತಿಂಗಳು ಕುಸಿತ ಇನ್ನು ಕಳೆದ ತಿಂಗಳು 125 ಸಿಸಿ ವಿಬಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಹೋಂಡಾ ಸಿಬಿ ಶೈನ್

ಕಳೆದ ತಿಂಗಳು 125 ಸಿಸಿ ವಿಬಾಗದ ಮಾರಾಟದಲ್ಲಿ ಹೋಂಡಾ ಸಿಬಿ ಶೈನ್ ಅಗ್ರಸ್ಥಾನವನ್ನು ಪಡೆದಿದೆ. ಕಳೆದ ತಿಂಗಳು ಹೋಂಡಾ ಸಿಬಿ ಶೈನ್ ಮಾದರಿಯ 83,622 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಸಿಬಿ ಶೈನ್ ಮಾದರಿಯ 94,413 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.11.43 ರಷ್ಟು ಇಳಿಕೆಯಾಗಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಈ ಹೋಂಡಾ ಶೈನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 90 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟವಾಗಿವೆ. ಈ ಹೋಂಡಾ ಶೈನ್ ಬೈಕಿನಲ್ಲಿ 124 ಸಿಸಿ, ಸಿಂಗಲ್-ಸಿಲಿಂಡರ್, ನಾಲ್ಕು-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಹೋಂಡಾ ಶೈನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಯುನಿಟ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿವೆ. ಇದರೊಂದಿಗೆ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಬಜಾಜ್‌ ಪಲ್ಸರ್

ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಬಜಾಜ್‌ನ ಪಲ್ಸರ್ ಶ್ರೇಣಿಯ ಮೋಟಾರ್‌ಸೈಕಲ್‌ಗಳು ಪಡೆದುಕೊಂಡಿದೆ. ಈ ವಿಭಾಗದಲ್ಲಿ ಎರಡು ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತವೆ. ಇದು ಪಲ್ಸರ್ 125 ಮತ್ತು ಪಲ್ಸರ್ ಎನ್ಎಸ್125 ಆಗಿದೆ. ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಎರಡೂ ಮಾದರಿಗಳ ಒಟ್ಟು 42,311 ಯುನಿಟ್‌ಗಳು ಮಾರಾಟವಾಗಿವೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಪಲ್ಸರ್ ಮಾದರಿಗಳ 56,549 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.25.18 ರಷ್ಟು ಇಳಿಕೆಯಾಗಿದೆ. ಬಜಾಜ್‌ ಪಲ್ಸರ್ ಸರಣಿಯಲ್ಲಿ 125 ಮಾದರಿಗಳು ಕೂಡ ಉತ್ತಮ ಜನಪ್ರಿಯತೆಯನ್ನು ಹೊಂದಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಹೀರೋ ಗ್ಲ್ಯಾಮರ್

ಕಳೆದ ತಿಂಗಳು ಹೀರೋ ಗ್ಲ್ಯಾಮರ್ ಮಾದರಿಯ 21,901 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಗ್ಲ್ಯಾಮರ್ ಮಾದರಿಯ 39,899 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45.11 ರಷ್ಟು ಇಳಿಕೆ ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಹೀರೋ ಸೂಪರ್ ಸ್ಪ್ಲೆಂಡರ್

ಗ್ಲಾಮರ್ ಬೈಕಿನ ಸಹೋದರ ಮಾದರಿ ಹೀರೋ ಸೂಪರ್ ಸ್ಪ್ಲೆಂಡರ್ ನಂತರ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಹೀರೋ ಸೂಪರ್ ಸ್ಪ್ಲೆಂಡರ್ ಮಾದರಿಯ 12,299 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಗ್ಲ್ಯಾಮರ್ ಮಾದರಿಯ 50,499 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.75.65 ರಷ್ಟು ಇಳಿಕೆ ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಟಿವಿಎಸ್ ರೈಡರ್

ಈ ವಿಭಾಗಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಹೊಸ ಟಿವಿಎಸ್ ರೈಡರ್ ಆಗಿದೆ. ಇದು ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿದೆ. ಹೊಸೂರು ಮೂಲದ ಬೈಕ್‌ ತಯಾರಕ ಕಂಪನಿಯು ಕಳೆದ ತಿಂಗಳು ರೈಡರ್ ಮಾದರಿಯ 10,040 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಈ ಮಾದರಿಯ 10,553 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.4.86 ರಷ್ಟು ಇಳಿಕೆ ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಈ ಹೊಸ ಬೈಕ್ ಮಾದರಿಯು ಟಿವಿಎಸ್ ಕಂಪನಿಯ ಇತರೆ ಕಮ್ಯುಟರ್ ಬೈಕ್ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ತಂತ್ರಜ್ಞಾನ ಸೌಲಭ್ಯಗಳ ಆಧಾರದ ಮೇಲೆ ಪ್ರಮುಖ ಮೂರು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ಕನೆಕ್ಟೆಡ್ ವೆರಿಯೆಂಟ್ ಖರೀದಿಸಬಹುದಾಗಿದೆ.

ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್‌ಗಳಿವು..

ಕೆಟಿಎಂ

ಡ್ಯೂಕ್ 125 ಮತ್ತು RC 125 ಅನ್ನು ಒಳಗೊಂಡಿರುವ ಕೆಟಿಎಂನ 125 ಸರಣಿಯು ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಆಸ್ಟ್ರಿಯನ್ ಬ್ರಾಂಡ್‌ನಿಂದ ಕೇವಲ 929 ಯೂನಿಟ್‌ಗಳ 125 ಸಿಸಿ ಮೋಟಾರ್‌ಸೈಕಲ್‌ಗಳನ್ನು ಕಳೆದ ತಿಂಗಳು ದೇಶಾದ್ಯಂತ ಮಾರಾಟಗೊಳಿಸಿದೆ, ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 1,316 ಯುನಿಟ್‌ಗಳಿಗೆ ಹೋಲಿಸಿದರೆ. ಇದು ಶೇ.29.41 ರಷ್ಟು ಕುಸಿತ ಕಂಡಿದೆ.

Most Read Articles

Kannada
English summary
Best selling 125cc motorcycles in november 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X