ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಕ್ಲಾಸಿಕ್ ಬೈಕುಗಳ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಹೊರ ಬಿದ್ದಿದೆ. ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಮಾಲೀಕತ್ವದ ಬೈಕ್ ತಯಾರಕ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್ ಇಂಗ್ಲೆಂಡಿನಲ್ಲಿ ಜನಪ್ರಿಯ ಬೈಕ್ ಆದ ಬಿಎಸ್‌ಎ ಮೋಟಾರ್‌ಸೈಕಲ್ಸ್ ಅನ್ನು ಮರಳಿ ತರಲು ಸಿದ್ಧವಾಗಿದೆ. ಅಂದ ಹಾಗೆ ಈ ಕಂಪನಿಯ ಕಾರ್ಯಾಚರಣೆಯನ್ನು 1972 ರಿಂದ ಸ್ಥಗಿತಗೊಳಿಸಲಾಗಿದೆ ಎಂಬುದು ಗಮನಾರ್ಹ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಕ್ಲಾಸಿಕ್ ಲೆಜೆಂಡ್ಸ್ ಮುಂದಿನ ವರ್ಷದ ಮಧ್ಯಭಾಗದಲ್ಲಿ ಇಂಗ್ಲೆಂಡಿನಲ್ಲಿ ಬಿಎಸ್‌ಎ ಬೈಕುಗಳ ಜೋಡಣೆಯನ್ನು ಆರಂಭಿಸಲು ಉದ್ದೇಶಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರ ರವರು ಕ್ಲಾಸಿಕ್ ಲೆಜೆಂಡ್ಸ್‌ನಲ್ಲಿ 60% ನಷ್ಟು ಪಾಲನ್ನು ಹೊಂದಿದ್ದು, ಈ ಯೋಜನೆಯ ಪ್ರಾಥಮಿಕ ಬೆಂಬಲಿಗರಾಗಿದ್ದಾರೆ ಎಂದು ವರದಿಯಾಗಿದೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಆಕ್ಸ್‌ಫರ್ಡ್‌ಶೈರ್‌ನ ಬ್ಯಾನ್‌ಬರಿಯಲ್ಲಿ ತಂತ್ರಜ್ಞಾನ ಹಾಗೂ ವಿನ್ಯಾಸ ಕೇಂದ್ರವನ್ನು ಅಭಿವೃದ್ಧಿಪಡಿಸುವ ಮೂಲಕ ಕ್ಲಾಸಿಕ್ ಲೆಜೆಂಡ್ಸ್ ತನ್ನ ಕೆಲಸವನ್ನು ಆರಂಭಿಸಲಿದೆ. ನಂತರ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಬಿಎಸ್‌ಎ ಘಟಕದಲ್ಲಿ ಹೊಸ ಮೋಟಾರ್‌ಸೈಕಲ್‌ಗಳನ್ನು ಜೋಡಿಸಲಾಗುತ್ತದೆ. ಬಿಎಸ್‌ಎ ಮೋಟಾರ್‌ಸೈಕಲ್ಸ್ ಅನ್ನು ಪುಣೆಯಲ್ಲಿ ಪರೀಕ್ಷಿಸಲಾಗಿದೆ ಎಂಬುದು ವಿಶೇಷ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಭಾರತದಲ್ಲಿ ಕ್ಲಾಸಿಕ್ ಲೆಜೆಂಡ್ಸ್‌ನಿಂದ ಹೊಸ ಸರಣಿಯ ಬೈಕುಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ ಎಂಬುದು ಇದರಿಂದ ಸಾಬೀತಾಗಿದೆ. ಬಿಎಸ್‌ಎ ಮೋಟಾರ್‌ಸೈಕಲ್ಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೊಸ ಖಾತೆಗಳನ್ನು ತೆರೆದಿದೆ. ಅಲ್ಲಿ ಕಂಪನಿಯು ತನ್ನ ಪುನರಾಗಮನದ ಬಗ್ಗೆ ಘೋಷಿಸಿದೆ. ಇದರ ಜೊತೆಗೆ ಕಂಪನಿಯು ತನ್ನ ಹೊಸ ಲೋಗೋವನ್ನು ಸಹ ಶೇರ್ ಮಾಡಿದೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಇಂಗ್ಲೆಂಡ್ ಸರ್ಕಾರವು ಈಗಾಗಲೇ ಕ್ಲಾಸಿಕ್ ಲೆಜೆಂಡ್ಸ್‌ ಕಂಪನಿಗೆ 4.6 ಮಿಲಿಯನ್ ಯುರೋ ಅಂದರೆ ಸುಮಾರು ರೂ. 45.2 ಕೋಟಿ ಅನುದಾನವನ್ನು ನೀಡಿದೆ. ಇದು ಕೋವೆಂಟ್ರಿ ಬಳಿಯ ಬ್ಯಾನ್‌ಬರಿಯಲ್ಲಿ ಆರ್ ಅಂಡ್ ಡಿ ಕೇಂದ್ರವನ್ನು ತೆರೆಯಲು ಅಗತ್ಯವಿರುವ ಅರ್ಧದಷ್ಟು ಮೊತ್ತವಾಗಿದೆ. ಇದರಿಂದ ಸುಮಾರು 255 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಬೈಕ್‌ಗಳನ್ನು ಅಭಿವೃದ್ಧಿಪಡಿಸಲು ಈ ಘಟಕವನ್ನು ಪ್ರತ್ಯೇಕವಾಗಿ ಬಳಸಲಾಗುವುದು. ಇವುಗಳಲ್ಲಿ ಮೊದಲ ಬೈಕ್ ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಅರ್ಥಾತ್ ಬಿಎಸ್‌ಎ ಕಂಪನಿಯನ್ನು 1861 ರಲ್ಲಿ ಬರ್ಮಿಂಗ್ಹ್ಯಾಮ್'ನ ಸ್ಮಾಲ್ ಹೀತ್'ನಲ್ಲಿ ಶಸ್ತ್ರಾಸ್ತ್ರ ಉತ್ಪಾದನಾ ಘಟಕವಾಗಿ ಆರಂಭಿಸಲಾಯಿತು.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಸ್ಮಾಲ್ ಹೀತ್‌ನ ಸೆಟ್ಟಿಂಗ್ ಅನ್ನು ಜನಪ್ರಿಯ ಬಿ‌ಬಿ‌ಸಿ ನೆಟ್‌ವರ್ಕ್ ಶೋ ಪೀಕಿ ಬ್ಲೈಂಡರ್ಸ್‌ನಲ್ಲಿ ತೋರಿಸಲಾಗಿದೆ. ಕಂಪನಿಯು 1910 ರಲ್ಲಿ ಮೋಟಾರ್‌ಸೈಕಲ್‌ಗಳ ಉತ್ಪಾದನೆಯನ್ನು ಆರಂಭಿಸಿತು. ನಂತರ 1960ರ ದಶಕದ ಮಧ್ಯಭಾಗದವರೆಗೆ ಜನಪ್ರಿಯತೆಯನ್ನು ಹೊಂದಿತ್ತು. ಜಪಾನ್ ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಮಾರಾಟದಲ್ಲಿ ಕುಸಿತ ದಾಖಲಿಸಿದ ಕಾರಣ 1972 ರಲ್ಲಿ ಕಂಪನಿಯ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕಾಯಿತು.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಬ್ರಿಟಿಷ್ ಸರ್ಕಾರದ ಉತ್ತೇಜನದ ಹೊರತಾಗಿ, ಮಹೀಂದ್ರಾ ಕಂಪನಿಯು ಬಿಎಸ್‌ಎ ಮೋಟಾರ್‌ಸೈಕಲ್‌ ಕಂಪನಿಯನ್ನು ಪುನರುಜ್ಜೀವನಗೊಳಿಸಲು ಪ್ರಮುಖ ಕಾರಣವೆಂದರೆ ಕಂಪನಿಯ ಪರಂಪರೆಯನ್ನು ಕಾಪಾಡುವುದು. ಈ ಯೋಜನೆಯನ್ನು ಮಹೀಂದ್ರಾ ಕಂಪನಿಯ ಕ್ಲಾಸಿಕ್ ಲೆಜೆಂಡ್ಸ್ ಅಂಗಸಂಸ್ಥೆಯ ಸಹ ಸಂಸ್ಥಾಪಕರಾದ ಅನುಪಮ್ ಥರೇಜಾ ನಿರ್ವಹಿಸುತ್ತಿದ್ದಾರೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಇತ್ತೀಚಿಗೆ ತನ್ನ ಗುತ್ತಿಗೆ ಹಾಗೂ ಚಂದಾದಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಕ್ವಿಕ್ಲಿಜ್ (Quiklyz) ಪ್ಲಾಟ್ ಫಾರಂ ಅನ್ನು ಅಧಿಕೃತವಾಗಿ ಆರಂಭಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್, ಮಹೀಂದ್ರಾ ಗ್ರೂಪ್‌ನ ಒಂದು ಭಾಗವಾಗಿದೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಇದು ಭಾರತದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ. ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳ ಮೇಲೆ ಗಮನಹರಿಸುತ್ತಿರುವ ಕಂಪನಿಯು 7 ಮಿಲಿಯನ್ ಅಂದರೆ 70 ಲಕ್ಷ ಗ್ರಾಹಕರನ್ನು ಹೊಂದಿದ್ದು, 11 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಮಹೀಂದ್ರಾ ಕ್ವಿಕ್ಲಿಜ್ ಬಗ್ಗೆ ಹೇಳುವುದಾದರೆ, ಈ ಪ್ಲಾಟ್‌ಫಾರಂ ಮೂಲಕ ಕಂಪನಿಯು ತನ್ನ ಗ್ರಾಹಕರಿಗೆ ವಾಹನ ಗುತ್ತಿಗೆ ಹಾಗೂ ಚಂದಾದಾರಿಕೆ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ವಾಹನ ಖರೀದಿಗೆ ಅನುಕೂಲವಾಗುವಂತೆ ಉತ್ತಮ ಆಯ್ಕೆಗಳನ್ನು ಒದಗಿಸುವುದು ಈ ಸೇವೆಯನ್ನು ಆರಂಭಿಸಿರುವುದರ ಪ್ರಮುಖ ಗುರಿಯಾಗಿದೆ. ಮಹೀಂದ್ರಾ ಕ್ವಿಕ್ಲಿಜ್ ಅಡಿಯಲ್ಲಿ ವಿವಿಧ ರೀತಿಯ ವಾಹನಗಳಿಗೆ ಗುತ್ತಿಗೆ ಹಾಗೂ ಹಣಕಾಸು ಸೇವೆಗಳನ್ನು ಒದಗಿಸಲಾಗುತ್ತದೆ. ಈ ಪ್ರಯೋಜನಗಳು ಕ್ವಿಕ್ಲಿಜ್ ಅಡಿಯಲ್ಲಿ ಲಭ್ಯವಿರಲಿವೆ. ಕ್ವಿಕ್ಲಿಜ್‌ನಿಂದ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಕಂಪನಿಯು ವಿಶೇಷ ಸೌಲಭ್ಯವನ್ನು ನೀಡಲಿದೆ.

ಹೊಸ ಲೋಗೋದೊಂದಿಗೆ ಮರಳಿ ಬರಲಿದೆ ಬಿಎಸ್‌ಎ ಮೋಟಾರ್‌ಸೈಕಲ್ಸ್

ಇದರ ಅಡಿಯಲ್ಲಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್ ಮೂಲಕ ಅಂದರೆ ಯಾವುದೇ ಶುಲ್ಕ ಪಾವತಿಸದೇ ಹೊಸ ವಾಹನ ಖರೀದಿಸಬಹುದು. ಈ ಪ್ಲಾಟ್‌ಫಾರಂನಲ್ಲಿ ವಾಹನವನ್ನು ಖರೀದಿಸುವುದು ಸುಲಭವಾಗಲಿದೆ. ಇದರಡಿಯಲ್ಲಿ ಗ್ರಾಹಕರು ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಂತರ ಕಂಪನಿಯು ಎಲ್ಲಾ ನಿರ್ವಹಣೆ ಹಾಗೂ ಸೇವಾ ವೆಚ್ಚವನ್ನು ಭರಿಸುತ್ತದೆ.

ಇದರ ಜೊತೆಗೆ ಗ್ರಾಹಕರಿಗೆ ವಾಹನವನ್ನು ಹಿಂದಿರುಗಿಸಲು, ಚಂದಾದಾರಿಕೆ ಅವಧಿಯನ್ನು ವಿಸ್ತರಿಸಲು, ವಾಹನವನ್ನು ಖರೀದಿಸಲು ಅಥವಾ ವಾಹನವನ್ನು ಬದಲಾಯಿಸುವ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಜೊತೆಗೆ ಗ್ರಾಹಕರಿಗೆ ಉತ್ತಮ ಮರು ಮಾರಾಟ ಮೌಲ್ಯವನ್ನು ನೀಡುವುದಾಗಿಯೂ ಕಂಪನಿ ಭರವಸೆ ನೀಡಿದೆ. ಕ್ವಿಕ್ಲಿಜ್ ಕಾರು ಬಳಕೆದಾರತ್ವದ ಮೊದಲ ಡಿಜಿಟಲ್ ಪ್ಲಾಟ್‌ಫಾರಂ ಆಗಿದೆ.

Most Read Articles

Kannada
English summary
Bsa motorcycles to come back with new logo details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X