ಸುಧಾರಿತ ಬ್ಯಾಟರಿ ಪ್ರೇರಿತ ಈಸಿ ಪ್ಲಸ್ ಇವಿ ಮೊಪೆಡ್ ಬಿಡುಗಡೆ ಮಾಡಲಿದೆ ಡೆಟೆಲ್
ಬಜೆಟ್ ಬೆಲೆಯ ಈಸಿ ಎಲೆಕ್ಟ್ರಿಕ್ ಮೊಪೆಡ್ ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿರುವ ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಶೀಘ್ರದಲ್ಲೇ ಸುಧಾರಿತ ಬ್ಯಾಟರಿ ಹೊಂದಿರುವ ಈಸಿ ಪ್ಲಸ್ ಮೊಪೆಡ್ ಬಿಡುಗಡೆಗೆ ಸಿದ್ದವಾಗಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಈಸಿ ಪ್ಲಸ್ ಮೊಪೆಡ್ ಆವೃತ್ತಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಡೆಟೆಲ್ ಕಂಪನಿಯು ಶೀಘ್ರದಲ್ಲೇ ಹೊಸ ಈಸಿ ಪ್ಲಸ್ ಮೊಪೆಡ್ ಆವೃತ್ತಿಯನ್ನು ಸ್ವಂತ ಬಳಕೆಯ ಜೊತೆಗೆ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗೂ ಬಿಡುಗಡೆ ಮಾಡುತ್ತಿದ್ದು, ಈಸಿ ಮೊಪೆಡ್‌ಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಈಸಿ ಪ್ಲಸ್ ಆವೃತ್ತಿಯು ವಿಸ್ತರಿತ ಬ್ಯಾಟರಿ ಪಡೆದುಕೊಳ್ಳಲಿದೆ.

ಈಸಿ ಪ್ಲಸ್ ಮೊಪೆಡ್ ಎಲೆಕ್ಟ್ರಿಕ್ ಆವೃತ್ತಿಯು ನಗರಗಳ ಪ್ರದೇಶಗಳಲ್ಲಿನ ಸಂಚಾರಕ್ಕೆ ಸಾಕಷ್ಟು ಅನುಕೂಲಕರವಾದ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಮೊಪೆಡ್ ಶೀಘ್ರದಲ್ಲೇ ಖರೀದಿ ಲಭ್ಯವಾಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಈಸಿ ಮೊಪೆಡ್ ಮಾದರಿಯನ್ನು ರೂ.19,999ಕ್ಕೆ ಮಾರಾಟ ಮಾಡುತ್ತಿದ್ದು, ಪ್ರತಿ ಗಂಟೆಗೆ 25 ಕಿ.ಮೀಗಳಾಗಿರುವುದರಿಂದ ಈ ಮೊಪೆಡ್ ಅನ್ನು ರಿಜಿಸ್ಟರ್ ಇಲ್ಲದೆಯೇ ರೈಡ್ ಮಾಡಬಹುದಾಗಿದೆ.

ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು 2017ರಲ್ಲಿ ಸ್ಥಾಪನೆಯಾಗಿದ್ದು, ಇದಕ್ಕೂ ಮುನ್ನ ಕಂಪನಿಯು ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು. ಡೆಟೆಲ್ ವಿಶ್ವದ ಅಗ್ಗದ ಎಲ್ಇಡಿ ಟೆಲಿವಿಷನ್ ಅನ್ನು ಕೇವಲ ರೂ.4,000ಗಳಿಗೆ ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ಕಂಪನಿಯು ವಿಶ್ವದ ಅಗ್ಗದ ಫೀಚರ್ ಫೋನ್ ಅನ್ನು ಸಹ ಬಿಡುಗಡೆಗೊಳಿಸಿತ್ತು. ಕಂಪನಿಯು ಬಿಡುಗಡೆಗೊಳಿಸಿದ ಫೀಚರ್ ಫೋನ್ ಬೆಲೆ ರೂ.299 ಗಳಾಗಿತ್ತು.

2020ರಲ್ಲಿ ಮೊದಲ ಬಾರಿಗೆ ಡೆಟೆಲ್ ಕಂಪನಿಯು ಈಸಿ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಸಾಕಷ್ಟು ಉಪಯುಕ್ತವಾಗಿದೆ. ಈ ಮೊಪೆಡ್ ಅನ್ನು ಕಚೇರಿ, ಶಾಪಿಂಗ್ ಅಥವಾ ಸಿಟಿಯೊಳಗಿನ ಪ್ರಯಾಣಕ್ಕಾಗಿ ಬಳಸಬಹುದಾಗಿದೆ.

ಈ ಮೊಪೆಡ್ ಅನ್ನು ನಿರ್ವಹಣೆ ಮಾಡುವುದು ಕೂಡಾ ಬಹಳ ಸುಲಭವಾಗಿದ್ದು, ಈ ಮೊಪೆಡ್ ವೇಗವಾಗಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಮೊಪೆಡ್ ಸಣ್ಣ ಬೈಸಿಕಲ್ ಆಕಾರವನ್ನು ಹೊಂದಿದ್ದು, ಹಗುರವಾದ ತೂಕವನ್ನು ಹೊಂದಿದೆ.

ಈಸಿ ಮೊಪೆಡ್ ನಲ್ಲಿರುವ ಚೈನ್ ಪ್ಯಾಡಲ್ ಸಹಾಯದಿಂದ ಚಾರ್ಜ್ ಮುಗಿದ ನಂತರವೂ ಸಹ ಈ ಮೊಪೆಡ್ ಅನ್ನು ಚಲಾಯಿಸಬಹುದು. ಈಸಿ ಮೊಪೆಡ್ ನಲ್ಲಿ 48 ವೋಲ್ಟ್ ನ 12 ಆಂಪಿಯರ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಈಸಿ ಮೊಪೆಡ್ 6-7 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಮೊಪೆಡ್ 60 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಮೊಪೆಡ್‌ನಲ್ಲಿ ವಸ್ತುಗಳನ್ನು ಕೊಂಡೊಯ್ಯಲು ಮುಂಭಾಗದಲ್ಲಿ ಬಾಸ್ಕೆಟ್ ನೀಡಲಾಗಿದೆ.

ಈ ಮೊಪೆಡ್ ನ ಮುಂಭಾಗದಲ್ಲಿ ಹೆಡ್‌ಲ್ಯಾಂಪ್ ಸಹ ಅಳವಡಿಸಲಾಗಿದೆ. ಈ ಮೊಪೆಡ್ ನಲ್ಲಿ ಇಬ್ಬರು ಆರಾಮವಾಗಿ ಸವಾರಿ ಮಾಡಬಹುದು. ಜೊತೆಗೆ ಸವಾರನ ಸೀಟ್ ಅನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಸಸ್ಪೆಂಷನ್ ಗಳನ್ನು ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಆನ್, ಆಫ್ ಹಾಗೂ ಲಾಕ್ ಮಾಡಲು ಕೀಗಳನ್ನು ಸಹ ನೀಡಲಾಗಿದ್ದು, ಈ ಸ್ಕೂಟರ್ ಅನ್ನು ಡೆಟೆಲ್ ಕಂಪನಿಯ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಇದೀಗ ಬಿಡುಗಡೆಯಾಗಲಿರುವ ಈಸಿ ಪ್ಲಸ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಬ್ಯಾಟರಿ ಹೊಂದಲಿದ್ದು, ಶೀಘ್ರದಲ್ಲೇ ಈಸಿ ಪ್ಲಸ್ ಕೂಡಾ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications