ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಮಾನವನ ಚಟುವಟಿಕೆಗಳಿಂದ ಪ್ರತಿ ವರ್ಷ ಸುಮಾರು 51 ಬಿಲಿಯನ್ ಟನ್ ಹಸಿರು ಮನೆ ಅನಿಲಗಳು ಹೊರಸೂಸಲ್ಪಡುತ್ತವೆ. ಈ ಪ್ರಮಾಣವು ಇದೇ ವೇಗದಲ್ಲಿ ಸಾಗಿದರೆ 2050 ರ ವೇಳೆಗೆ ಜಾಗತಿಕ ತಾಪಮಾನವು ಈಗ ಇರುವುದಕ್ಕಿಂತ 2 ಡಿಗ್ರಿಗಳಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಅಂದಾಜು ಮಾಡಿದ್ದಾರೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಆದರೆ ಇದರಿಂದ ಭಾರೀ ಅನಾಹುತವಾಗುವುದು ಖಚಿತ. ಜಾಗತಿಕ ತಾಪಮಾನದ ತ್ವರಿತ ಏರಿಕೆಯು ಆಸ್ಟ್ರೇಲಿಯಾದ ಕಾಡ್ಗಿಚ್ಚು, ಅಂಟಾರ್ಟಿಕಾದಲ್ಲಿ ಹಿಮನದಿಗಳ ಕರಗುವಿಕೆ, ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ, ಹವಾಮಾನಗಳಲ್ಲಿ ಹಠಾತ್ ಬದಲಾವಣೆ ಹಾಗೂ ಮಹಾರಾಷ್ಟ್ರದಲ್ಲಿ ಬರಗಾಲದಂತಹ ನೈಸರ್ಗಿಕ ವಿಪತ್ತುಗಳಿಗೆ ಕಾರಣವಾಗುತ್ತಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಈ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಗಳು ಕಾರ್ಬನ್ ಡೈ ಆಕ್ಸೈಡ್ ಹೊಸ ಸೂಸುವಿಕೆಯನ್ನು ಕಡಿಮೆ ಮಾಡಬೇಕಾದ ಅವಶ್ಯಕತೆ ಎದುರಾಗಿದೆ. 2050 ರ ವೇಳೆಗೆ ಶೂನ್ಯ ಹೊರ ಸೂಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಬಹುದು. ವಾತಾವರಣದಿಂದ ಇಂಗಾಲವನ್ನು ಹೀರಿಕೊಳ್ಳುವುದು ಸೇರಿದಂತೆ ಹಲವು ವಿಧಾನಗಳನ್ನು ಪರಿಹರಿಸಬೇಕಾಗಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಹವಾಮಾನ ವಿಕೋಪಗಳನ್ನು ತಪ್ಪಿಸಬೇಕಾದರೆ ಶೂನ್ಯ ಹೊರ ಸೂಸುವಿಕೆಯನ್ನು ಸಾಧಿಸಲೇ ಬೇಕು. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಇ ಬೈಕ್ ಗೋ (eBikeGo) ಕಂಪನಿಯು ಲೋ ಸೂಟ್ ಸ್ಟಾರ್ಟ್ಅಪ್ ಕಂಪನಿಯೊಂದಿಗೆ (lowsoot.com) ಪಾಲುದಾರಿಕೆ ಮಾಡಿ ಕೊಂಡಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಶೂನ್ಯ ಹೊರ ಸೂಸುವಿಕೆಯನ್ನು ಸಾಧಿಸಲು ಹಾಗೂ ಭಾರತದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ಈ ಪಾಲುದಾರಿಕೆಯನ್ನು ಮಾಡಿ ಕೊಳ್ಳಲಾಗಿದೆ. ಅಂದ ಹಾಗೆ eBikeGo ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಪಡೆಯುವ ಭಾರತದ ಪ್ರಮುಖ ಪ್ಲಾಟ್ ಫಾರಂ ಆಗಿದೆ. ಆದರೆ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರಗಳು ವಾಹನಗಳು ಸದ್ಯಕ್ಕೆ ಚೆನ್ನೈನಲ್ಲಿ ಲಭ್ಯವಿಲ್ಲ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

eBikeGo ತನ್ನ ವ್ಯಾಪಾರವನ್ನು ದೇಶದಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಇದರಿಂದ eBikeGo ಮುಂಬರುವ ದಿನಗಳಲ್ಲಿ ತನ್ನ ವಹಿವಾಟನ್ನು ವ್ಯಾಪಾರವನ್ನು ಚೆನ್ನೈನಲ್ಲಿ ಆರಂಭಿಸುವ ನಿರೀಕ್ಷೆಗಳಿವೆ. ದೇಶದ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಹಲವು ನಗರಗಳಲ್ಲಿ ತನ್ನ ವಹಿವಾಟು ಆರಂಭಿಸಲಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಬಾಡಿಗೆಗೆ ಪಡೆಯುವ eBikeGo ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಮೊಬೈಲ್ ಫೋನ್ ಚಾರ್ಜ್ ಮಾಡಿದಷ್ಟೇ ಸುಲಭವಾಗಿ ಚಾರ್ಜ್ ಮಾಡಬಹುದು. eBikeGo ಕಂಪನಿಯ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಗ್ರಾಹಕರು ಒಂದು ತಿಂಗಳು ಅಥವಾ ಇಡೀ ವರ್ಷ ಬೈಕ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಕಂಪನಿಯು ಕೈಗೆಟುಕುವ ದರದಲ್ಲಿ ಮಾಸಿಕ ಹಾಗೂ ವಾರ್ಷಿಕ ಬಾಡಿಗೆ ಶುಲ್ಕಗಳನ್ನು ನಿಗದಿಪಡಿಸಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

eBikeGo ಕಂಪನಿಯನ್ನು ಇರ್ಫಾನ್ ಖಾನ್ ಎಂಬುವವರು ಸ್ಥಾಪಿಸಿದರು. ಕಂಪನಿಯು ಪಂಜಾಬ್‌ನ ಅಮೃತಸರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ವಹಿವಾಟು ನಡೆಸಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹೊಂದಿರುವ ಕಂಪನಿಯು ವಿತರಣಾ ಕಾರ್ಯಕ್ಕಾಗಿ Zomato, Delivery, Ferns N Petals ನಂತಹ ಕಂಪನಿಗಳೊಂದಿಗೆ ಸಹ ಭಾಗಿತ್ವವನ್ನು ಮಾಡಿಕೊಂಡಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಈ ಬಗ್ಗೆ ಮಾತನಾಡಿರುವ eBikeGo ಕಂಪನಿಯ ಸಂಸ್ಥಾಪಕರು, ನಮ್ಮ ಕಂಪನಿಯ ಕಾರ್ಯಾಚರಣೆಯು ಕಾರ್ಬನ್ ಹೊರ ಸೂಸುವಿಕೆಯನ್ನು ನಿಯಂತ್ರಿಸುವುದಲ್ಲದೆ ನಿರುದ್ಯೋಗವನ್ನು ತಪ್ಪಿಸುತ್ತದೆ ಎಂದು ಹೇಳಿದ್ದಾರೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಸುಮಾರು 21 ಮಿಲಿಯನ್ ಟನ್‌ಗಳಷ್ಟು ಕಾರ್ಬನ್ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಇತ್ತೀಚಿನ ದಿನಗಳಲ್ಲಿ ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಇದನ್ನು ಗಮನಿಸಿದಾಗ ಭಾರತದ ಆಟೋಮೊಬೈಲ್ ಉದ್ಯಮವು ವಿದ್ಯುದೀಕರಣಕ್ಕೆ ಪರಿವರ್ತನೆಯಾಗುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ ಭಾರತದ ಆಟೋ ಮೊಬೈಲ್ ಉದ್ಯಮವು ಪೂರ್ತಿಯಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದರೂ ಹೆಚ್ಚು ದೂರ ಚಲಿಸುವುದಿಲ್ಲ ಎಂಬ ಅಭಿಪ್ರಾಯಗಳಿವೆ. ಜೊತೆಗೆ ಪೆಟ್ರೋಲ್ ಬಂಕ್ ಗಳ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಈ ಕಾರಣಗಳಿಗಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಪೆಟ್ರೋಲ್, ಡೀಸೆಲ್ ಬೆಲೆ ಗಗಣಕ್ಕೆರಿವುದರಿಂದ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಸಹಜವಾಗಿಯೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕಾರ್ಬನ್ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಮುಂದಾದ eBikeGo

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾದಂತೆ ಸರ್ಕಾರಗಳೂ ಸಹ ಇವಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗುತ್ತಿವೆ. ಕೇಂದ್ರ ಸರ್ಕಾರವು ಸಹ ಹಲವೆಡೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಿದೆ. ದೆಹಲಿ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಈಗಾಗಲೇ ಹಲವೆಡೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿವೆ. ನಮ್ಮ ಕರ್ನಾಟಕ ಸರ್ಕಾರವೂ ಸಹ ಬೆಂಗಳೂರಿನ ಹಲವು ಭಾಗಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ebikego partners with lowsoot to reduce carbon emission in india details
Story first published: Thursday, September 23, 2021, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X