ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಭಾರತದಲ್ಲಿ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಲವಾರು ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸಿದರೂ ಚಾರ್ಜಿಂಗ್ ಮೂಲ ಸೌಕರ್ಯಗಳ ಕೊರತೆಯ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಇವುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವುದು ಸಹ ಸೇರಿದೆ. ವಿವಿಧ ಕಂಪನಿಗಳು ಸಹ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸರ್ಕಾರಗಳ ಜೊತೆಗೆ ಕೈಜೋಡಿಸಿವೆ. ಇವುಗಳಲ್ಲಿ eBikeGo ಕಂಪನಿ ಸಹ ಸೇರಿದೆ. eBikeGo ಕಂಪನಿಯು eBikeGo Charge ಹೆಸರಿನಲ್ಲಿ ದೇಶಾದ್ಯಂತ ಒಂದು ಲಕ್ಷ IoT ಸ್ಮಾರ್ಟ್ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

eBikeGo Charge ಕೇಂದ್ರಗಳನ್ನು ಎಲ್ಲಾ ಮೆಟ್ರೊ ನಗರಗಳಲ್ಲಿ ಹಾಗೂ ಇತರ ನಗರಗಳಲ್ಲಿ 500 ಮೀಟರ್ ದೂರದಲ್ಲಿ ಸ್ಥಾಪಿಸಲಾಗುವುದು. ಈ ಚಾರ್ಜಿಂಗ್ ಕೇಂದ್ರಗಳಿಂದ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳಿಗೆ ಹೆಚ್ಚು ಅನುಕೂಲವಾಗಲಿದೆ. ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಸಮಗ್ರ ಪಾವತಿ ವ್ಯವಸ್ಥೆಯ ಮೂಲಕ ಚಾರ್ಜಿಂಗ್ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

eBikeGo Charge ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಆತ್ಮ ನಿರ್ಭರ ಭಾರತ್ ಹಾಗೂ ಮೇಡ್ ಇನ್ ಇಂಡಿಯಾಗಳಿಂದ ಸ್ಪೂರ್ತಿ ಪಡೆದಿದೆ. ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟ ಪ್ರಮಾಣವು 2019 ರಲ್ಲಿ 21.2 ಮಿಲಿಯನ್ ಯೂನಿಟ್‌ಗಳಷ್ಟಿತ್ತು. ಈ ಪ್ರಮಾಣವು 2025 ರ ವೇಳೆಗೆ 2.6% ನಷ್ಟು ಏರಿಕೆಯಾಗಿ 26.6 ಮಿಲಿಯನ್ ಯೂನಿಟ್‌ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ 2021 - 22ರ ಮೊದಲ ತ್ರೈಮಾಸಿಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಹೆಚ್ಚಾಗಿದೆ. ಮಾರಾಟವಾದ ವಾಹನಗಳಲ್ಲಿ ಬಹುತೇಕ ವಾಹನಗಳು ಗ್ಯಾಸೋಲಿನ್ ಅಂದರೆ ಪೆಟ್ರೋಲ್ ಎಂಜಿನ್ ವಾಹನಗಳಾಗಿವೆ. ಇದರಿಂದ ಗಮನಾರ್ಹ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಪೆಟ್ರೋಲ್, ಡೀಸೆಲ್ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣ ಕಡಿಮೆ. ಈ ಅಸಮಾನತೆಗೆ ಮೂಲ ಕಾರಣವೆಂದರೆ ದೇಶದ ರಸ್ತೆ ಪರಿಸ್ಥಿತಿಗಳು ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ವ್ಯವಸ್ಥೆ ಇಲ್ಲದಿರುವುದು.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಅದರಲ್ಲೂ ದೇಶದ ಪ್ರಮುಖ ನಗರಗಳಲ್ಲಿಯೇ ಸಾಕಷ್ಟು ಸಂಖ್ಯೆಯಲ್ಲಿ ಚಾರ್ಜಿಂಗ್ ಕೇಂದ್ರಗಳಿಲ್ಲ ಎಂಬುದು ಗಮನಾರ್ಹ. ಈ ಸಮಸ್ಯೆಯನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಲು ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮೊಬಿಲಿಟಿ ಪ್ಲಾಟ್‌ಫಾರಂ ಆದ eBikeGo ಕೈಗೆಟುಕುವ ದರದಲ್ಲಿ IoT ಎನೆಬಲ್ ಆದ ಸ್ಮಾರ್ಟ್ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುತ್ತಿದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಈ ಚಾರ್ಜ್ ಅನ್ನು eBikeGo ಚಾರ್ಜ್ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ www.ebikego.com/charge ಮೂಲಕ ಪ್ರವೇಶಿಸಬಹುದು. ಇದರಲ್ಲಿ ವೈ-ಫೈ ಸಕ್ರಿಯಗೊಳಿಸಲಾಗಿದೆ. ಇದರಲ್ಲಿ ತಡೆರಹಿತ ಚಾರ್ಜಿಂಗ್ ಅನುಭವಕ್ಕಾಗಿ ನೈಜ ಸಮಯದ ಚಾರ್ಜಿಂಗ್ ಅಂಕಿ ಅಂಶಗಳನ್ನು ಸಹ ಮೇಲ್ವಿಚಾರಣೆ ಮಾಡಬಹುದು.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

eBikeGo ಚಾರ್ಜಿಂಗ್ ಕೇಂದ್ರಗಳನ್ನು ಪ್ರತಿ 500 ಮೀಟರ್‌ಗಳಿಗೆ ಒಂದರಂತೆ ಸ್ಥಾಪಿಸಲಾಗುವುದು. ಎಲೆಕ್ಟ್ರಿಕ್ ವಾಹನ ಸವಾರರು ಎಲ್ಲಿಂದಲಾದರೂ, ಯಾವಾಗ ಬೇಕಾದರೂ ಈ ಚಾರ್ಜಿಂಗ್ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಬಹುದು. ಈ ಚಾರ್ಜಿಂಗ್ ಕೇಂದ್ರಗಳಲ್ಲಿ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳ್ಳುತ್ತದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಈ ಚಾರ್ಜಿಂಗ್ ಕೇಂದ್ರಗಳಲ್ಲಿ ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಪೂರ್ವನಿರ್ಧರಿತ ರೀಚಾರ್ಜ್ ಯೋಜನೆಗಳನ್ನು ನೀಡಲಾಗುತ್ತದೆ. ಈ ರೀಚಾರ್ಜ್ ಯೋಜನೆಗಳು ಕೈಗೆಟುಕುವ ದರವನ್ನು ಹೊಂದಿವೆ. ಚಾರ್ಜಿಂಗ್ ಶುಲ್ಕ ಪಾವತಿಸಲು ಸಮಗ್ರ ಪಾವತಿ ಕಾರ್ಯ ವಿಧಾನವನ್ನು ನೀಡಲಾಗುತ್ತದೆ. ಬೆಂಗಳೂರು, ಮುಂಬೈ, ಇಂದೋರ್, ಪುಣೆ, ನವದೆಹಲಿ, ಅಮೃತಸರ ಹಾಗೂ ಹೈದರಾಬಾದ್‌ ಸೇರಿದಂತೆ ಒಟ್ಟು ಏಳು ನಗರಗಳಲ್ಲಿ eBikeGo ಚಾರ್ಜ್ ಲಭ್ಯವಿರುತ್ತದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಒಂದು ವರ್ಷದಲ್ಲಿ eBikeGo ಕಂಪನಿಯು 1 ಲಕ್ಷ eBikeGo ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ. ಕಂಪನಿಯು ಈಗಾಗಲೇ ಮುಂಬೈನಲ್ಲಿ ಈ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದೆ.3 ಪಿನ್ ಪವರ್ ಕನೆಕ್ಟರ್‌ನೊಂದಿಗೆ eBikeGo Charge ವಿಭಿನ್ನ ಚಾರ್ಜಿಂಗ್ ಗಳಿಗೆ ವಿಶಿಷ್ಟವಾದ ಎಲ್‌ಇಡಿ ಬೆಳಕನ್ನು ಹೊಂದಿರಲಿದೆ. ಇದರಲ್ಲಿ 190 ವೋ - 240ವೋ ಪವರ್ ಸರಣಿಯ 50 ಎಹೆಚ್‌ಝಡ್ ಎಸಿ ಔಟ್‌ಪುಟ್ 16 ಎ/3.3 ಕಿವ್ಯಾಗಳು ಸೇರಿರುತ್ತವೆ. ಇದು ಒಸಿಪಿಪಿ, ವೈ-ಫೈ, ಆರ್‌ಎಫ್‌ಐಡಿ ಹಾಗೂ ಮೊಬೈಲ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಮಿಷಿನ್ ಲರ್ನಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಪೋರ್ಟಬಲ್ ಚಾರ್ಜಿಂಗ್ ಕೇಂದ್ರಗಳನ್ನು ಎನೆಬಲ್ ಮಾಡಲಾಗುತ್ತದೆ. ಇದು ರೆವಿನ್ಯೂ ಗ್ರಾಫ್‌ಹಾಗೂ ಬಳಕೆಯ ಮಾಹಿತಿಯ ನಕ್ಷೆಯನ್ನು ಪ್ರದರ್ಶಿಸುತ್ತದೆ. ಇದು ಸರಿಯಾದ ದೋಷ ಹಾಗೂ ದೂರು ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದ್ದು ಚಾರ್ಜ್ ಮಾಡುವಾಗ ಸಮಸ್ಯೆಯಾದರೆ ಆಟೋಮ್ಯಾಟಿಕ್ ಆಗಿ ಅಲರ್ಟ್ ಮೆಸೇಜ್ ಗಳನ್ನು ಕಳುಹಿಸುತ್ತದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

ಇನ್ನು eBikeGo ಕಂಪನಿಯು ಭಾರತದ ಅತಿದೊಡ್ಡ ಸ್ಮಾರ್ಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮೊಬಿಲಿಟಿ ಪ್ಲಾಟ್ ಫಾರಂ ಆಗಿದ್ದು, ಎಲ್ಲರಿಗೂ ಆರ್ಥಿಕ ಹಾಗೂ ಪರಿಸರ ಸ್ನೇಹಿ ಪ್ರಯಾಣದ ಆಯ್ಕೆಗಳನ್ನು ನೀಡುತ್ತದೆ. eBikeGo ಸದ್ಯಕ್ಕೆ ಭಾರತದ 7 ನಗರಗಳಲ್ಲಿ ಸಕ್ರಿಯವಾಗಿದ್ದು, ಎಲ್ಲಾ ಪ್ರಮುಖ ಲಾಸ್ಟ್ ಮೈಲಿ ವಿತರಣಾ ಕಂಪನಿಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರತಿ 500 ಮೀಟರ್‌ಗಳಿಗೆ ಒಂದು ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ eBikeGo

eBikeGo ಭಾರತದ ಸುಮಾರು 100 ನಗರಗಳಲ್ಲಿ 2,00,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರಸ್ತೆಗೆ ಇಳಿಸುವ ಯೋಜನೆಯನ್ನು ಹೊಂದಿದೆ. EBikeGo ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ ತನ್ನ ಸ್ಮಾರ್ಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. 2017ರಲ್ಲಿ ಆರಂಭವಾದ ಡಾ. ಇರ್ಫಾನ್ ಖಾನ್ ರವರ ಕನಸಿನ ಕೂಸಾದ eBikeGo, 2020ರ ಜಿಟಿಎಫ್ ಸ್ಟಾರ್ಟ್ ಅಪ್ ಶೃಂಗಸಭೆಯಲ್ಲಿ ವರ್ಷದ ಅತ್ಯುತ್ತಮ ಇವಿ ಮೊಬಿಲಿಟಿ ಸ್ಟಾರ್ಟ್ ಅಪ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ.

Most Read Articles

Kannada
English summary
Ebikego to open ev charging stations at every 500 meter distance details
Story first published: Tuesday, September 28, 2021, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X