ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ಲಿಮಿಟೆಡ್ ಕಂಪನಿಯು ತನ್ನ ಹೊಸ ಕಚೇರಿಯನ್ನು ಇಂಗ್ಲೆಂಡಿನಲ್ಲಿ ತೆರೆಯುವ ಮೂಲಕ ತನ್ನ ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿದೆ. ಲಂಡನ್‌ನಲ್ಲಿ ಹೊಸ ಕೇಂದ್ರ ಕಚೇರಿಯನ್ನು ಸ್ಥಾಪಿಸುವುದರಿಂದ ಕಂಪನಿಯ ಜಾಗತಿಕ ವ್ಯಾಪಾರ ವ್ಯವಸ್ಥೆಗೆ ಉತ್ತೇಜನ ಸಿಗಲಿದೆ ಎಂದು ಕಂಪನಿ ಹೇಳಿದೆ.

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಲಂಡನ್ ಪ್ರಧಾನ ಕಚೇರಿಯಲ್ಲಿ, ಕಂಪನಿಯು ತನ್ನ ಉತ್ಪನ್ನಗಳಿಗೆ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ. ಜೊತೆಗೆ ಯುರೋಪಿಯನ್ ದೇಶಗಳಲ್ಲಿ ಉತ್ಪಾದನೆಯನ್ನು ವಿಸ್ತರಿಸಲು ಸಹಾಯ ಮಾಡಲಿದೆ.

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಯುರೋಪಿಯನ್ ವ್ಯವಹಾರಗಳನ್ನು ತನ್ನ ಲಂಡನ್ ಪ್ರಧಾನ ಕಚೇರಿಯಿಂದ ಒಂದೇ ಸೂರಿನಡಿ ತರಲಾಗುವುದು ಎಂದು ಕಂಪನಿ ಹೇಳಿದ್ದು, ಇಲ್ಲಿಂದ ಕಂಪನಿಯು ತನ್ನ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಮಾರುಕಟ್ಟೆಗಳನ್ನು ಸಹ ಒದಗಿಸಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಯುರೋಪಿಯನ್ ದೇಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸೈಕಲ್ ಹಾಗೂ ಇ-ಸೈಕಲ್'ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೈಸಿಕಲ್ ಕಂಪನಿಗಳಿಗೆ ಯುರೋಪ್ ಪ್ರಮುಖಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಈ ಬಗ್ಗೆ ಮಾತನಾಡಿದ ಹೀರೋ ಸೈಕಲ್ಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಮುಂಜಾಲ್, ಯುರೋಪಿನಲ್ಲಿ ಎಲೆಕ್ಟ್ರಿಕ್ ಸೈಕಲ್‌ಗಳ ಮಾರಾಟವು ಈ ವರ್ಷ 30 ದಶಲಕ್ಷದವರೆಗೆ ಇರಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

2024ರಿಂದ ಯುರೋಪಿನ ಬೈಸಿಕಲ್ ಮಾರುಕಟ್ಟೆಯು 26%ನಷ್ಟು ಬೆಳೆಯುತ್ತಿದೆ. ಬೆಳೆಯುತ್ತಿರುವ ಯುರೋಪಿನ ಮಾರುಕಟ್ಟೆಯಲ್ಲಿ ಕಂಪನಿಯು ತನ್ನ ಪಾಲನ್ನು ಹೊಂದಲಿದೆ ಎಂದು ಹೇಳಿದರು.

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಸದ್ಯಕ್ಕೆ ಹೀರೋ ಸೈಕಲ್ಸ್ ಕಂಪನಿಯು ದೇಶದಲ್ಲಿ ವರ್ಷಕ್ಕೆ 6 ಮಿಲಿಯನ್ ಸೈಕಲ್'ಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ಪಂಜಾಬ್, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಸೈಕಲ್'ಗಳನ್ನು ಉತ್ಪಾದಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಕಂಪನಿಯು ಶ್ರೀಲಂಕಾದಲ್ಲಿಯೂ ಉತ್ಪಾದನಾ ಘಟಕವನ್ನು ಹೊಂದಿದೆ. ಹೀರೋ ಸೈಕಲ್ಸ್ ಭಾರತದ ಹೊರಗೆ ಇಂಗ್ಲೆಂಡಿನಲ್ಲಿ ವಿನ್ಯಾಸ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸೈಕಲ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ಕಂಪನಿಯು ಕಳೆದ ವರ್ಷ ಚೀನಾದಿಂದ ರೂ.900 ಕೋಟಿಗಳ ವ್ಯವಹಾರ ಒಪ್ಪಂದವನ್ನು ರದ್ದುಗೊಳಿಸಿತು. ಚೀನಾದೊಂದಿಗಿನ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಿ ಕಂಪನಿಯು ಜರ್ಮನಿಯಿಂದ ಉಪಕರಣಗಳನ್ನು ಖರೀದಿಸಲು ನಿರ್ಧರಿಸಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಸೈಕಲ್'ಗಳಲ್ಲಿ ಬಳಸುವ ಬಿಡಿಭಾಗಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಕಂಪನಿಯು ಕೆಲಸ ಮಾಡುತ್ತಿದೆ. ಇದಕ್ಕಾಗಿ ಕಂಪನಿಯು ಭಾರತದಲ್ಲಿನ ಸಣ್ಣ ಹಾಗೂ ಮಧ್ಯಮ ಬಿಡಿಭಾಗಗಳ ಉತ್ಪಾದಕರನ್ನು ತನ್ನ ಪೂರೈಕೆ ಸರಪಳಿಯೊಂದಿಗೆ ಸಂಪರ್ಕಿಸಿದೆ.

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಭಾರತದಲ್ಲಿ ಲಾಕ್'ಡೌನ್ ಮುಗಿದ ನಂತರ ಸೈಕಲ್ ಮಾರಾಟವು ಹೆಚ್ಚಾಗಿದೆ. ಲಾಕ್ ಡೌನ್ ನಂತರ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಚೇರಿ, ಪಾರ್ಕ್ ಅಥವಾ ಜಿಮ್‌ಗಳಿಗೆ ಜನರು ಸೈಕಲ್ ಮೂಲಕ ಪ್ರಯಾಣಿಸಲು ಬಯಸುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲಂಡನ್‌ನಲ್ಲಿ ಕೇಂದ್ರ ಕಚೇರಿ ತೆರೆಯಲು ಮುಂದಾದ ಹೀರೋ ಸೈಕಲ್ಸ್

ಸೈಕಲ್'ಗಳು ಈಗ ಭಾರತದಲ್ಲಿ ಫಿಟ್ನೆಸ್ ಸಂಕೇತವಾಗಿವೆ. ಭಾರತದಲ್ಲಿ ಮಕ್ಕಳ ಬೈಸಿಕಲ್ ಮಾರುಕಟ್ಟೆಯು ಸಾಕಷ್ಟು ದೊಡ್ಡದಾಗಿದೆ. ಈ ಸೆಗ್'ಮೆಂಟಿನಲ್ಲಿ ಬೇಡಿಕೆ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತದಲ್ಲಿ ಹೀರೋ ಸೈಕಲ್ಸ್ ಕಂಪನಿಯ ಮಾರುಕಟ್ಟೆ ಪಾಲು 44%ನಷ್ಟಿದ್ದು, ಈ ವರ್ಷದ ಕೊನೆಗೆ ಈ ಪಾಲು 50%ಗಳಿಗೆ ಏರಿಕೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Hero cycles limited to start headquarters in London. Read in Kannada.
Story first published: Wednesday, March 17, 2021, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X