Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ಕಳೆದ ವರ್ಷ ಫೆಬ್ರವರಿಯಲ್ಲಿ ಹೀರೋ ಕನೆಕ್ಟ್ ಎಂಬ ತನ್ನ ಕನೆಕ್ಟಿವಿಟಿ ಫೀಚರ್ ಅನ್ನು ಪರಿಚಯಿಸಿತ್ತು. ಹೀರೋ ಕನೆಕ್ಟಿವಿಟಿ ಫೀಚರ್ಸ್ ದ್ವಿಚಕ್ರ ವಾಹನಗಳ ಮಾರಾಟವನ್ನು ಹೆಚ್ಚಿಸಲು ನೆರವಾಗಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಕನೆಕ್ಟಿವಿಟಿ ಫೀಚರ್ ಪರಿಚಯಿಸಿದ ಸಂದರ್ಭದಲ್ಲಿ ಒಂದು ವರ್ಷದ ಚಂದಾದಾರಿಕೆಗಾಗಿ ಆಯ್ದ ಮಾದರಿಗಳಿಗೆ ರೂ.4,999ಕ್ಕೆ ನೀಡಲಾಗುತ್ತಿತ್ತು. ಆಯ್ದ ನಗರಗಳಲ್ಲಿನ ಡೀಲರ್‌ಶಿಪ್‌ಗಳಲ್ಲಿ ಇದು ಲಭ್ಯವಿತ್ತು. ಹೀರೋ ಕನೆಕ್ಟ್ ಹಲವಾರು ಕನೆಕ್ಟಿವಿಟಿ ಫೀಚರ್ಸ್ ಗಳನ್ನು ನೀಡುತ್ತದೆ. ಟಾಪ್ಲ್ ಅಲರ್ಟ್ ಫೀಚರ್ ಈಗ ಎಕ್ಸ್‌ಪಲ್ಸ್ 200 ನೊಂದಿಗೆ ಲಭ್ಯವಿದೆ. ಬೈಕಿ ಉರುಳಿದಲ್ಲಿ ಆಟೋಮ್ಯಾಟಿಕ್ ಅಪ್ಲಿಕೇಶನ್ ನೋಟಿಫಿಕೇಶನ್ ಕಳುಹಿಸಿ ಮತ್ತು ಎಸ್‌ಎಂಎಸ್ ಅನ್ನು ತುರ್ತು ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ವಾಹನ ಉರುಳಿಬಿದ್ದಾಗ ಬಳಕೆದಾರರು ತಮಗೆ ನೋಟಿಫಿಕೇಶನ್ ಗಾಗಿ ತುರ್ತು ಸಂಪರ್ಕಗಳನ್ನು ಆಯ್ಕೆ ಮಾಡಬಹುದು. ಅಪಘಾತದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಸಹಾಯವು ನಿರ್ಣಾಯಕವಾಗಿರುವುದರಿಂದ ಈ ವೈಶಿಷ್ಟ್ಯವು ಜೀವ ರಕ್ಷಕವಾಗಬಹುದು. ವಾಹನ ಉರುಳಿ ಬಿದ್ದಾಗ ನೋಟಿಫಿಕೇಶನ್ ಸ್ವೀಕರಿಸಿದ ನಂತರ, ತುರ್ತು ಸಂಪರ್ಕಗಳು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಪರಿಸ್ಥಿತಿ ಅಗತ್ಯವಿದ್ದಲ್ಲಿ ವೈದ್ಯಕೀಯ ಸಹಾಯವನ್ನು ಕೋರಬಹುದು. ಇನ್ನು ಹೀರೋ ಕನೆಕ್ಟ್ ಅಪ್ಲಿಕೇಶನ್ ಟಾಪಲ್ ಅಲರ್ಟ್, ಟ್ರಿಪ್ ಅನಾಲಿಸಿಸ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟೌ ಅಲರ್ಟ್, ಜಿಯೋ-ಫೆನ್ಸ್ ಅಲರ್ಟ್, ಹೀರೋ ಲೊಕೇಟ್, ಸ್ಪೀಡ್ ಅಲರ್ಟ್ ಮುಂತಾದ ಫೀಚರ್ ಗಳನ್ನು ಒಳಗೊಂಡಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಹೀರೋ ಕನೆಕ್ಟ್ ಫೀಚರ್ ಎಕ್ಟ್ರೀಮ್ 160ಆರ್, ಎಕ್ಸ್‌ಪಲ್ಸ್ 200, ಪ್ಲೆಷರ್ ಪ್ಲಸ್ ಮತ್ತು ಪ್ಲೆಷರ್ ಪ್ಲಸ್ ಪ್ಲಾಟಿನಂ ಮಾದರಿಗಳಲ್ಲಿಯು ಲಭ್ಯವಿದೆ. ಈ ಹೀರೋ ಕನೆಕ್ಟ್ ಫೀಚರ್ ಹೆಚ್ಚು ಉಪಯುಕ್ತ ಫೀಚರ್ ಆಗಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಮೊದಲು ಕಾರುಗಳೊಂದಿಗೆ ಪರಿಚಯಿಸಲಾಯಿತು, ಕನೆಕಕ್ಟಿವಿಟಿ ಫೀಚರ್ಸ್ ದ್ವಿಚಕ್ರ ವಾಹನಗಳಿಗೂ ದಾರಿ ಮಾಡಿಕೊಟ್ಟಿತು. ಗ್ರಾಹಕರಲ್ಲಿ ಹೆಚ್ಚುತ್ತಿರುವ ಆದ್ಯತೆಯೊಂದಿಗೆ ಅನೇಕ ಸ್ಕೂಟರ್‌ಗಳು ಮತ್ತು ಬೈಕ್ ಗಳಿಗೆ ಈಗ ಮೀಸಲಾದ ಕನಕ್ಟಿವಿಟಿ ಫೀಚರ್ಸ್ ಗಳನ್ನು ನೀಡಲಾಗುತ್ತಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಇನ್ನು ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 199.6 ಸಿಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 17.8 ಬಿಹೆಚ್‌ಪಿ ಪವರ್ ಮತ್ತು 6,400 ಆರ್‌ಪಿಎಂನಲ್ಲಿ 16.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಈ ಬೈಕಿನಲ್ಲಿ ಏರ್/ಆಯಿಲ್-ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಹಿಂದಿನ ಮಾದರಿಗಿಂತ ತೂಕ ಹೆಚ್ಚಾಗಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 ಬೈಕ್ 157 ಕೆಜೆ ತೂಕವನ್ನು ಹೊಂದಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಇನ್ನು ಈ ಹೀರೋ ಎಕ್ಸ್‌ಪಲ್ಸ್ ಬೈಕಿನಲ್ಲಿ ಎಕ್ಸಾಸ್ಟ್ ಪೈಪಿನ ಸ್ಥಾನವನ್ನು ಬದಲಾಯಿಸಲಾಗಿದೆ. ಈ ಬೈಕಿನ ಎಂಜಿನ್ ಬೆಲ್ಲಿ-ಪ್ಯಾನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಬಿಎಸ್-6 ಎಕ್ಸ್‌ಪಲ್ಸ್ ಮೊದಲಿನಂತೆಯೇ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಹೊಸ ಎಕ್ಸ್‌ಪಲ್ಸ್ 200 ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ. ಇನ್ನು ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಾಹನದ ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ.3,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.ಇದರಿಂದ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಬೆಲೆ ಏರಿಕೆ ಪಡೆದುಕೊಂಡಿದೆ. ಬೆಲೆ ಏರಿಕೆ ಪಡೆದುಕೊಂಡ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯು ರೂ,1,23,150 ಗಳಾದರೆ,2021ರ ಏಪ್ರಿಲ್ ತಿಂಗಳಿನಿಂದ ಈ ಬೈಕ್ ಮೂರನೇ ಬಾರಿ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

Xpulse 200 ಬೈಕ್‍‍ಗಾಗಿ ಹೊಸ ಫೀಚರ್ ಪರಿಚಯಿಸಿದ Hero MotoCorp

ಈ ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್, ಬ್ಲೂಟೂತ್ ಕನೆಕ್ಟ್ ಆಗಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಎಕ್ಸ್‌ಪಲ್ಸ್ 200 ಬೈಕ್ ವೈಟ್, ಮ್ಯಾಟ್ ಗ್ರೀನ್, ಮ್ಯಾಟ್ ಗ್ರೇ, ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯುತ್ತದೆ.

Most Read Articles

Kannada
English summary
Hero motocorp introduced topple alert feature for xpulse 200 details
Story first published: Thursday, September 30, 2021, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X