ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಜನಪ್ರಿಯ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಮಾದರಿಗಳು ಹೊಸ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಪಡೆಯಲಿದೆ. ಆದರೆ ಯುರೋಪಿನ ಆಫ್ರಿಕಾ ಟ್ವಿನ್ ಬೈಕ್ ಗ್ರಾಹಕರು ಮಾತ್ರ ಈ ಪೀಚರ್ ಅನ್ನು ಪಡೆಯಬಹುದಾಗಿದೆ.

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಯುರೋಪಿನ ಆಫ್ರಿಕಾ ಟ್ವಿನ್ ಬೈಕ್ ಗ್ರಾಹಕರು ಸ್ಥಳೀಯ ಹೋಂಡಾ ಡೀಲರುಗಳನ್ನು ಬಳಿ ತೆರಳಿದರೆ ಅವರು ಅಪ್ಡೇಟ್ ಮಾಡಿ ಈ ಫೀಚರ್ ಅನ್ನು ಒದಗಿಸುತ್ತದೆ. ಆಂಡ್ರಾಯ್ಡ್ ಆಟೋ ಮೊಬೈಲ್ ಮೂಲಕ ಕನೆಕ್ಟ್ ಮಾಡಿ ಗೂಗಲ್ ಮ್ಯಾಪ್, ಮ್ಯೂಸಿಕ್ ಮತ್ತು ಮೇಸೆಜ್ ಮಾಡಬಹುದಾಗಿದೆ. ಇನ್ನು ಹ್ಯಾಂಡ್ಸ್-ಫ್ರೀ ಇತರ ಮೀಡಿಯಾ ಅಪ್ಲಿಕೇಶನ್‌ಗಳಂತಹ ಫೀಚರ್ ಗಳನ್ನು ಕೂಡ ನೀಡುತ್ತದೆ.

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಎಚ್‌ಎಂಎಸ್‌ಐ) ಕಂಪನಿಯು ತನ್ನ 2021ರ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೋಂಡಾ ಮೋಟಾರ್‌ಸೈಕಲ್ಸ್ ಕಂಪನಿಯು ಇದೀಗ 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕಿನ ವಿತರಣೆಯನ್ನು ಕೂಡ ಆರಂಭಿಸಿದ್ದಾರೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಈ ಹೊಸ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಟಾಪ್ ಬಾಕ್ಸ್, ರಿಯರ್ ಕ್ಯಾರಿಯರ್, ರ್ಯಾಲಿ ಸ್ಟೆಪ್, ಡಿಸಿಟಿ ಪ್ಯಾಡಲ್ ಶಿಫ್ಟರ್, ಫಾಗ್ ಲ್ಯಾಂಪ್, ಫಾಗ್ ಲ್ಯಾಂಪ್ ಎಟಿಟಿ, ವಿಸರ್ ಮತ್ತು ಸೈಡ್ ಪೈಪ್ ಮುಂತಾದವುಗಳನ್ನು ಒಳಗೊಂಡಿವೆ.

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಇನ್ನು 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕಿನಲ್ಲಿ 1084ಸಿಸಿ ಪ್ಯಾರಲಲ್-ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಹೊಸ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಅಡ್ವೆಂಚರ್-ಟೂರರ್ ಅರ್ಬನ್, ಟೂರ್, ಗ್ರೇವೆಲ್, ಆಫ್-ರೋಡ್ ಮತ್ತು ಇತರ ಕಸ್ಟಮೈಸ್ ಮಾಡಬಹುದಾದ ಮೋಡ್‌ಗಳನ್ನು ಒಳಗೊಂಡಂತೆ ಅನೇಕ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ.

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

2021ರ ಹೋಂಡಾ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕಾರ್ನರಿಂಗ್ ಲೈಟ್ಸ್, ಕ್ರೂಸ್ ಕಂಟ್ರೋಲ್, 5-ಹಂತದ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಮತ್ತು ಹೊಂದಾಣಿಕೆ ಮಾಡಬಹುದಾದ ಸೀಟುಗಳೊಂದಿಗೆ ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಇನ್ನು 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಅಫ್‌ರ್ಸಿಯಾ ಟ್ವಿನ್ 6.5-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದೆ, ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.

ಹೊಸ ಫೀಚರ್ ಪಡೆಯಲಿದೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್

ಹೋಂಡಾ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಭಾರತದಲ್ಲಿ ಮಾರಾಟವಾಗುತ್ತಿರುವ ಬ್ರ್ಯಾಂಡ್‌ನ ಅತ್ಯಂತ ಪ್ರೀಮಿಯಂ ಮತ್ತು ಪ್ರಮುಖ ಅಡ್ವೆಂಚರ್ ಟೂರರ್ ಕೊಡುಗೆಯಾಗಿದೆ. ಹೋಂಡಾ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಆರ್ 1250 ಜಿಎಸ್, ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಮತ್ತು ಟ್ರಯಂಫ್ ಟೈಗರ್ 900 ಬೈಕುಗಳಿಗ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda Africa Twin Gets Android Auto Integration. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X