ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ದ್ವಿಚಕ್ರ ಮಾರಾಟದಲ್ಲಿ ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾಗಿದ್ದು, 2021ರ ಜನವರಿಯಲ್ಲಿ ಹೋಂಡಾ ಕಂಪನಿಯು ಶೇ.29 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಹೋಂಡಾ ಕಂಪನಿಯು ಕಳೆದ ತಿಂಗಳು ಅತಿ ಹೆಚ್ಚು ಮಾರಾಟ ಮಾಡಿದ ಬೈಕ್ ಸಿಬಿ ಶೈನ್ ಆಗಿದೆ. 2021ರ ಜನವರಿಯಲ್ಲಿ ಸಿಬಿ ಶೈನ್‌ನ ಒಟ್ಟು 1,16,222 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಸಿಬಿ ಶೈನ್‌ನ ಒಟ್ಟು 66,832 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸಿಬಿ ಶೈನ್ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ.74 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಹೋಂಡಾ ಶೈನ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಮ್ಯೂಟರ್ ಬೈಕುಗಳಲ್ಲಿ ಒಂದಾಗಿದೆ. ಈ ಸಿಬಿ ಶೈನ್ ಬೈಕನ್ನು ಭಾರತದಲ್ಲಿ 2006ರಲ್ಲಿ ಮೊಟ್ಟ ಮೊದಲ ಬಾರಿಗೆ ಹೋಂಡಾ ಕಂಪನಿಯು ಬಿಡುಗಡೆಗೊಳಿಸಿತ್ತು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಹೋಂಡಾ ಸಿಬಿ ಶೈನ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಡ್ರಮ್ ರೂಪಾಂತರದ ಬೆಲೆಯು ರೂ.70,478 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.75,274 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಇನ್ನು ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೋಂಡಾ ಸಿಬಿ ಶೈನ್ ಬೈಕಿನಲ್ಲಿ 124 ಸಿಸಿ, ಸಿಂಗಲ್-ಸಿಲಿಂಡರ್, ನಾಲ್ಕು-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಹೋಂಡಾ ಶೈನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಮಾದರಿಯ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಇದರೊಂದಿಗೆ ಹೊಸ ಹೋಂಡಾ ಎಸ್‌ಪಿ 125 ಬೈಕಿನ ಖರೀದಿಯ ಮೇಲೆ ರೂ.5000 ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ಕೊಡುಗೆ ಕ್ರೆಡಿಟ್/ಡೆಬಿಟ್ ಕಾರ್ಡ್ ಇಎಂಐಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಹೊಸ ಹೋಂಡಾ ಎಸ್‌ಪಿ 125 ಬೈಕ್ ಶೇ.100 ರಷ್ಟು ಫೈನಾನ್ಸ್ ಮತ್ತು ಆರ್‌ಒಐ ಶೇ.6.5 ರಷ್ಟು ಲಭ್ಯವಿದೆ.

ಜನವರಿ ತಿಂಗಳಿನಲ್ಲಿ ಹೋಂಡಾ ಸಿಬಿ ಶೈನ್ ಬೈಕ್ ಮಾರಾಟದಲ್ಲಿ ಶೇ.74ರಷ್ಟು ಹೆಚ್ಚಳ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತದೆ. ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳು ಭಾರತದಲ್ಲಿ ಉತ್ತಮವಾಗಿ ಮಾರಟವಾಗುತ್ತಿವೆ. ಇನ್ನು ಹೋಂಡಾ ಶೈನ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

Most Read Articles

Kannada
English summary
Honda CB Shine Sales Up By 74% In January 2021. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X