ಫಸ್ಟ್ ಲುಕ್ ರಿವ್ಯೂ: ಅಡ್ವೆಂಚರ್ ಬೈಕ್ ವಿಭಾಗಕ್ಕೆ ಎಂಟ್ರಿ ಕೊಟ್ಟ Honda CB200X ವಿಶೇಷತೆ ಏನು?

Honda Motorcycle ಕಂಪನಿಯು ತನ್ನ CB200X ಅಡ್ವೆಂಚರ್ ಟೂರರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.44 ಲಕ್ಷಗಳಾಗಿದೆ.

Honda CB200X ಫಸ್ಟ್ ಲುಕ್ ರಿವ್ಯೂ

ಆನ್‌ಲೈನ್ ಮೂಲಕ ಅಥವಾ ಕಂಪನಿಯ ಶೋರೂಂಗಳಲ್ಲಿ ರೂ. 2,000 ಗಳನ್ನು ಪಾವತಿಸಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಇತ್ತೀಚಿಗೆ Honda ಡೀಲರ್‌ಶಿಪ್‌ನಲ್ಲಿ ಈ ಬೈಕ್ ಅನ್ನು ವೈಯಕ್ತಿಕವಾಗಿ ಪರೀಕ್ಷಿಸಲು ನಮಗೆ ಅವಕಾಶ ದೊರೆತಿತ್ತು. ಈ ಅಡ್ವೆಂಚರ್ ಬೈಕಿನ ಕುರಿತ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.

Honda CB200X ಫಸ್ಟ್ ಲುಕ್ ರಿವ್ಯೂ

ವಿನ್ಯಾಸ ಹಾಗೂ ಶೈಲಿ

ಮೊದಲ ನೋಟದಲ್ಲಿಯೇ CB200X ಬೈಕ್ CB500X ಬೈಕಿನಲ್ಲಿರುವ ವಿನ್ಯಾಸವನ್ನು ಹೊಂದಿರುವಂತೆ ಕಾಣುತ್ತದೆ. ಆದರೆ ಈ ಬೈಕ್ Horner 2.0 ಬೈಕ್ ಅನ್ನುಆಧರಿಸಿದೆ. ಈ ಬೈಕ್ ಡೈಮಂಡ್ ಟೈಪ್ ಫ್ರೇಮ್ ಬಳಕೆಯನ್ನು ಮುಂದುವರೆಸಿದೆ. ಈ ಫ್ರೇಮ್ ಅಡ್ವೆಂಚರ್ ಟೂರರ್‌ ಬೈಕಿಗೆ ನೇರ ರಸ್ತೆಗಳಲ್ಲಿ ಹಾಗೂ ಕಾರ್ನರ್ ಗಳಲ್ಲಿ ಸ್ಥಿರ ಸವಾರಿಯನ್ನು ನೀಡುತ್ತದೆ.

Honda CB200X ಫಸ್ಟ್ ಲುಕ್ ರಿವ್ಯೂ

ಈ ಬೈಕಿನ ಮುಂಭಾಗದಲ್ಲಿ ಸಾಕಷ್ಟು ಪ್ರಕಾಶಮಾನವಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. Honda CB200X ಬೈಕಿನಲ್ಲಿರುವ ಎಲ್ಲಾ ಲೈಟ್ ಗಳು LED ಯುನಿಟ್'ಗಳಾಗಿವೆ. ಸವಾರರನ್ನು ಗಾಳಿಯ ಹೊಡೆತದಿಂದ ರಕ್ಷಿಸಲು ಬೈಕಿನಲ್ಲಿ ಎತ್ತರದ ವಿಂಡ್ ಸ್ಕ್ರೀನ್ ಅಳವಡಿಸಲಾಗಿದೆ.

Honda CB200X ಫಸ್ಟ್ ಲುಕ್ ರಿವ್ಯೂ

ಈ ಬೈಕಿನಲ್ಲಿ ನೀಡಿರುವ ಅಪ್‌ಸೈಡ್ ಡೌನ್ (ಯುಎಸ್‌ಡಿ) ಫ್ರಂಟ್ ಫೋರ್ಕ್‌ಗಳು ನಿಖರವಾದ ಸ್ಟೀಯರಿಂಗ್ ಹಾಗೂ ಸಾಫ್ಟ್ ಅನುಭವವನ್ನು ನೀಡುತ್ತವೆ. ಇದೇ ವೇಳೆ ಗೋಲ್ಡ್ ಶೇಡ್ ಫಿನಿಷಿಂಗ್ ಹೊಂದಿರುವ ಕಾರಣಕ್ಕೆ ಈ ಬೈಕ್ ಸ್ಪೋರ್ಟಿಯಾಗಿ ಕಾಣುತ್ತದೆ.

Honda CB200X ಫಸ್ಟ್ ಲುಕ್ ರಿವ್ಯೂ

ಫೀಚರ್'ಗಳು

ಈ ಬೈಕಿನಲ್ಲಿರುವ ಡಿಟಲ್ ನೆಗೆಟಿವ್ ಎಲ್‌ಸಿ‌ಡಿ ಇನ್ಸ್ಟ್ರುಮೆಂಟೇಶನ್, ಗೇರ್ ಪೊಸಿಷನ್ ಇಂಡಿಕೇಟರ್, ಡಿಜಿಟಲ್ ಕ್ಲಾಕ್, ಸರ್ವಿಸ್ ಡ್ಯೂ ಇಂಡಿಕೇಟರ್ ಹಾಗೂ ಬ್ಯಾಟರಿ ವೋಲ್ಟ್ ಮೀಟರ್ ನಂತಹ ಫೀಚರ್ ಗಳನ್ನು ಹೊಂದಿದೆ.

Honda CB200X ಫಸ್ಟ್ ಲುಕ್ ರಿವ್ಯೂ

ಎಲ್‌ಸಿಡಿ ಸ್ಪಷ್ಟವಾದ ರೀಡ್‌ಔಟ್‌ಗಳನ್ನು ಹೊಂದಿದ್ದರೂ ಸೂರ್ಯನ ಬೆಳಕಲ್ಲಿ ಓದುವುದು ಸ್ವಲ್ಪ ಕಷ್ಟವಾಗಬಹುದು. ಎರ್ಗೋನಾಮಿಕ್ ಡಿಸೈನ್ ಗಾಗಿ ಈ ಬೈಕಿನ ಟ್ಯಾಂಕ್ ಮೇಲೆ ಇಗ್ನಿಷನ್ ಕೀಹೋಲ್ ಅನ್ನು ಇರಿಸಲಾಗಿದೆ.

Honda CB200X ಫಸ್ಟ್ ಲುಕ್ ರಿವ್ಯೂ

ಈ ಬೈಕಿನಲ್ಲಿ ಇಂಟಿಗ್ರೇಟೆಡ್ ಬ್ಲಿಂಕರ್ ಹೊಂದಿರುವ ನಕಲ್ ಗಾರ್ಡ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರಗಡ್ ನೆಸ್ ಹೆಚ್ಚಿಸುವ ಹ್ಯಾಂಡಲ್‌ಬಾರ್‌ಗಳನ್ನು ನೀಡಲಾಗಿದೆ. CB200X ಬೈಕಿನಲ್ಲಿರುವ ಎಕ್ಸಾಸ್ಟ್ ಈ ಬೈಕಿನ ರಗಡ್ ನೆಸ್ ಅನ್ನು ಹೆಚ್ಚಿಸುತ್ತವೆ.

Honda CB200X ಫಸ್ಟ್ ಲುಕ್ ರಿವ್ಯೂ

ಎಂಜಿನ್ ವಿಶೇಷತೆಗಳು

Honda CB200X ಅಡ್ವೆಂಚರ್ ಬೈಕಿನಲ್ಲಿ ಏರ್ ಕೂಲ್ಡ್, 184 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿ‌ಎಂನಲ್ಲಿ 17 ಬಿ‌ಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿ‌ಎಂನಲ್ಲಿ 16.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

Honda CB200X ಫಸ್ಟ್ ಲುಕ್ ರಿವ್ಯೂ

ಸುರಕ್ಷತೆಗಾಗಿ ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್‌ ನೀಡಲಾಗಿದೆ. CB200X ಬೈಕಿನಲ್ಲಿರುವ ಸ್ಪ್ಲಿಟ್ ಸೀಟ್ ಮೂಲಕ ಬೈಕ್ ಸವಾರ 810 ಎಂಎಂ ಎತ್ತರದಲ್ಲಿ ಕುಳಿತು ಕೊಳ್ಳಬಹುದು.

Honda CB200X ಫಸ್ಟ್ ಲುಕ್ ರಿವ್ಯೂ

ಕುಳ್ಳಗಿರುವ ಸವಾರರು ಬೈಕ್ ಅನ್ನು ನಿಲ್ಲಿಸಲು ಕಾಲಿನ ಸಹಾಯ ಪಡೆಯ ಬೇಕಾಗುತ್ತದೆ. ಈ ಬೈಕ್ ಅನ್ನು ನಾವು ಸವಾರಿ ಮಾಡಲಿಲ್ಲ ಬದಲಿಗೆ ಕೇವಲ ವೀಕ್ಷಿಸಿದೆವು. ಈ ಬೈಕ್ ಅನ್ನು ನಾವು ಶೀಘ್ರದಲ್ಲೇ ಚಾಲನೆ ಮಾಡಿ ಅದರ ರಿವ್ಯೂ ಬಗೆಗಿನ ವಿವರಗಳನ್ನು ನೀಡುತ್ತೇವೆ.

Honda CB200X ಫಸ್ಟ್ ಲುಕ್ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

CB200X ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೂಲಕ Honda Motorcycle ಕಂಪನಿಯು ತನ್ನ ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರರ್ಬೈಕ್ ಅನ್ನು ಹೊರ ತಂದಿದೆ.

Honda CB200X ಫಸ್ಟ್ ಲುಕ್ ರಿವ್ಯೂ

ಸಾಕಷ್ಟು ಆಕರ್ಷಕವಾಗಿರುವ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.44 ಲಕ್ಷಗಳಾಗಿದೆ. ಈ ಮೂಲಕ Honda Motorcycle ಕಂಪನಿಯು ತನ್ನಅಡ್ವೆಂಚರ್ ಬೈಕ್ ಅನ್ನು ಕೈಗೆಟುಕುವಂತೆ ಮಾಡಿದೆ. Honda CB200X ಬೈಕ್ ದೇಶಿಯ ಮಾರುಕಟ್ಟೆಯಲ್ಲಿ Hero Xpulse 200 ಹಾಗೂ Hero Xpulse 200Tಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda cb200x first look review style design features engine and other specifications details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X