2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಜಗತ್ತಿನ ಅತಿ ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ ಡಕಾರ್ ರ‍್ಯಾಲಿಯ 44ನೇ ಆವೃತ್ತಿಯು ಆರಂಭಗೊಳ್ಳಲು ದಿನಗಣನೆ ಆರಂಭವಾಗಿದ್ದು, ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯ ಮೋಟಾರ್‌ಸ್ಪೋರ್ಟ್ ವಿಭಾಗವಾದ ಮಾನ್‌ಸ್ಟರ್ ಎನರ್ಜಿ ಹೋಂಡಾ ತಂಡವು ತನ್ನ ರೈಡರ್ ಮಾಹಿತಿ ಪ್ರಕಟಿಸಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಕೋವಿಡ್ ಅಬ್ಬರದ ನಡುವೆಯೂ 2021ರ ಆವೃತ್ತಿಯನ್ನು ಆಯೋಜಿಸಿದ್ದ ಡಕಾರ್ ರ‍್ಯಾಲಿ ಆಯೋಜಕರು ಇದೀಗ 2022ರ ಜನವರಿ 2ರಿಂದ ಆರಂಭವಾಗಲಿರುವ 44ನೇ ಆವೃತ್ತಿಯನ್ನು ನಡೆಸುವ ಸಿದ್ದತೆಯಲ್ಲಿದ್ದು, ಮಾನ್‌ಸ್ಟರ್ ಎನರ್ಜಿ ಹೋಂಡಾ ತಂಡವು ಕೂಡಾ ನಾಲ್ವರು ಸದಸ್ಯರ ತಂಡವನ್ನು ಪ್ರಕಟಿಸಿದೆ. 2021ರ ಡಕಾರ್ ರ‍್ಯಾಲಿ ಆವೃತ್ತಿಯನ್ನು ಜಯಸಿರುವ ಹೋಂಡಾ ತಂಡವು ಈ ಬಾರಿಯೂ ಗೆಲ್ಲುವ ಪ್ರಮುಖ ತಂಡಗಳಲ್ಲಿ ಒಂದಾಗಿದ್ದು, ಪ್ರತಿಸ್ಪರ್ಧಿ ತಂಡಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಮಾನ್‌ಸ್ಟರ್ ಎನರ್ಜಿ ಹೋಂಡಾ ತಂಡದಲ್ಲಿ ಕಳೆದ ವರ್ಷದ ವಿಜೇತ ಸ್ಪರ್ಧಿ ರಿಕಿ ಬ್ರಾಬೆಕ್ ತಂಡವನ್ನು ಮುನ್ನಡೆಸಲಿದ್ದು, ರಿಕಿ ಬ್ರಾಬೆಕ್ ಜೊತೆಗೆ ಕಾರ್ನೆಜೊ, ಜೋನ್ ಬ್ಯಾರೆಡಾ ಮತ್ತು ಹೊಸ ಸೇರ್ಪಡೆಯಾಗಿ ಪ್ಯಾಬ್ಲೋ ಕ್ವಿಂಟನಿಲ್ಲಾ ಸ್ಪರ್ಧಿಸಲಿದ್ದಾರೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಕಳೆದ ಬಾರಿ ತಂಡದಲ್ಲಿದ್ದ ಜೋಸ್ ಇಗ್ನಾಸಿಯೊ ಅವರು ವ್ಯಯಕ್ತಿಕ ಕಾರಣಗಳಿಂದ ಸ್ಪರ್ಧೆಯಿಂದ ಹಿಂದಿ ಸರಿದಿದ್ದು, ಜೋಸ್ ಇಗ್ನಾಸಿಯೊ ಸ್ಥಾನಕ್ಕೆ 2016 ಡಕಾರ್ ರ‍್ಯಾಲಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದ ಚಿಲಿ ರೈಡರ್ ಪ್ಯಾಬ್ಲೋ ಕ್ವಿಂಟನಿಲ್ಲಾ ಆಯ್ಕೆಮಾಡಲಾಗಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಮಾನ್‌ಸ್ಟರ್ ಎನರ್ಜಿ ಹೋಂಡಾ ತಂಡವು 2020 ಮತ್ತು 2021ರ ಡಕಾರ್ ರ‍್ಯಾಲಿಗಳನ್ನು ಜಯಸುವ ಮೂಲಕ ಇದೀಗ 2022ರ ಆವೃತ್ತಿಯನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಗುರಿಸಾಧನೆಗೆ ಸಿದ್ದತೆ ನಡೆಸಿದ್ದು, ಅನುಭವಿ ಸ್ಪರ್ಧಿಗಳನ್ನು ಹೊಂದಿರುವ ಹೋಂಡಾ ತಂಡವು ಯಮಹಾ ಮತ್ತು ಕೆಟಿಎಂ ತಂಡಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಸೌದಿ ಅರೇಬಿಯಾದಲ್ಲಿ ಆರಂಭವಾಗಲಿರುವ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯು ಜನವರಿ 2ರಿಂದ 14ರ ತನಕ ನಡೆಯಲಿದ್ದು, ರಿಯಾದ್ ಸನೀಹದಲ್ಲಿರುವ ಹೈಲ್ ನಗರದಿಂದ ಆರಂಭವಾಗಿ ಪ್ರಮುಖ 12 ಹಂತಗಳೊಂದಿಗೆ ಜೆದ್ದಾದಲ್ಲಿ ಪೂರ್ಣಗೊಳ್ಳಲಿದೆ. ‌

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

43ನೇ ಆವೃತ್ತಿಯ ರ‍್ಯಾಲಿಯಲ್ಲಿನ ಕೆಲವು ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗುತ್ತಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಕಳೆದ ಬಾರಿಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿರುವ ಮಾನ್ಸ್ಟರ್ ಎನರ್ಜಿ ಹೋಂಡಾ, ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಗಳು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಸಿದ್ದತೆಯಲ್ಲಿದ್ದು, 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಜಗತ್ತಿನ ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯು ತನ್ನದೇ ವೈಶಿಷ್ಟ್ಯತೆಗಳೊಂದಿಗೆ ಹಲವಾರು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಈ ಸ್ಪರ್ಧೆಯಲ್ಲಿ ಕೆಲವೇ ಕೆಲವು ಭಾರತೀಯ ರೈಡರ್‌ಗಳು ಮಾತ್ರ ಉತ್ತಮ ಪ್ರದರ್ಶನ ತೋರಿದ್ದಾರೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಹೀರೋ ಮೋಟಾರ್‌ಸ್ಪೋರ್ಟ್ ತಂಡದ ಸಿಎಸ್ ಸಂತೋಷ್ ಸೇರಿ ಕೆಲವೇ ಸ್ಪರ್ಧಿಗಳು ಟಾಪ್ 20ರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಸಾವಿರಾರು ಕಿ.ಮೀ ಅಂತರ ಕ್ರಮಿಸಬೇಕಿರುವ ಈ ಸ್ಪರ್ಧೆಯಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ಪರ್ಧಿಗಳು ಪ್ರಾಣಕಳೆದುಕೊಂಡಿದ್ದಾರೆ.

2022ರ ಡಕಾರ್ ರ‍್ಯಾಲಿ ಜಯಿಸಲು ಸಜ್ಜಾದ ಮಾನ್‌ಸ್ಟರ್ ಎನರ್ಜಿ ಹೋಂಡಾ

ಮೋಟಾರ್‌ಸ್ಪೋರ್ಟ್‌ನಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಡಕಾರ್ ರ‍್ಯಾಲಿ ಆಯೋಜನೆಯನ್ನು ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಲಾಗುತ್ತಿದ್ದು, ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ರೋಚಕತೆಯಿಂದ ಕೂಡಿರುತ್ತವೆ.

Most Read Articles

Kannada
English summary
Honda has revealed its team for the 2022 edition of the dakar rally
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X