ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಡೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇನ್ನು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ಪಾರುಪತ್ಯ ಸಾಧಿಸಲಿದೆ ಎಂದು ಅರಿತ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿಲ್ಲದ ವಾಹನ ತಯಾರಕ ಕಂಪನಿಗಳು ಭವಿಷ್ಯದಲಿ ಹಿಂದೇ ಉಳಿಯಬಹುದು. ಹೋಂಡಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಹು ಪೇಟೆಂಟ್‌ಗಳನ್ನು ಸಲ್ಲಿಸಿದ್ದರೂ, ಅವುಗಳಲ್ಲಿ ಯಾವುದೂ ಅಂತಿಮವಾಗಿ ಉತ್ಪಾದನಾ ಮಟ್ಟವನ್ನು ತಲುಪುವುದು ಎಂಬುದರ ಮಾಹಿತಿಗಳು ಬಹಿರಂಗವಾಗಿಲ್ಲ. ಮತ್ತೊಂದೆಡೆ ಚೀನಾದಲ್ಲಿ ಹೋಂಡಾ ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೋಂಡಾದ ಚೀನಾದ ಅಂಗಸಂಸ್ಥೆ ವುಯಾಂಗ್ ಹೋಂಡಾ ಚೀನೀ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಸಿಕಲ್‌ಗಳು, ಎಲೆಕ್ಟ್ರಿಕ್ ಮೊಪೆಡ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಳಗೊಂಡಂತೆ ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹೊಂದಿದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಕಂಪನಿಯು ಇತ್ತೀಚೆಗೆ ಎರಡು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿದೆ, ಅದರಲ್ಲಿ ಒಂದು ಯು-ಗೋ ಮತ್ತು ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಗಳಾಗಿವೆ. ಹೋಂಡಾ ಯು-ಬಿ ಸಿಂಗಲ್ ಸೀಟ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಸ್ಟ್ಯಾಂಡರ್ಡ್ ಎಲೆಕ್ಟ್ರಿಕ್ ಸ್ಕೂಟರ್‌ನಂತೆ ಕಾಣುತ್ತದೆ,

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಆರಂಬಿಕ ಬೆಲೆಯು ಸಿಎನ್‌ವೈ 3,099 ಗಳಾಗಿದೆ. ಇದು ಬಾರತದ ಕರೆನ್ಸಿಯಲ್ಲಿ ಸುಮಾರು ರೂ.35,567 ಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹಿಂಭಾಗದಲ್ಲಿ ಪಿಲಿಯನ್ ಸೀಟ್ ಅನ್ನು ಹೊಂದಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್ ವಿಭಿನ್ನ ವಿನ್ಯಾಸವನ್ನು ಹೊಂದಿದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸ್ಕೂಟರ್‌ನ ಒಟ್ಟಾರೆ ತೂಕವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಹೋಂಡಾ ಯು-ಬಿ ದೊಡ್ಡ ಫ್ಲೋರ್‌ಬೋರ್ಡ್‌ನೊಂದಿಗೆ ಬರುತ್ತದೆ, ಇದರಲ್ಲಿ ಕೆಲವು ವಸ್ತುಗಳನ್ನು ಇಡಬಹುದು. ಭಾರವಾದ ವಸ್ತುಗಳನ್ನು ಸಾಗಿಸಲು ಕೂಡ ಬಳಸಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಆಂಟಿ-ಥೆಫ್ಟ್ ಕೀ ಲಾಕ್ ಮತ್ತು ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಕೆಲವು ಪ್ರಮುಖ ಸ್ಟೈಲಿಂಗ್ ಬಿಟ್‌ಗಳಲ್ಲಿ ಟ್ರೆಂಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು, ಚೂಪಾದ ಟೈಲ್ ಲ್ಯಾಂಪ್ ಮತ್ತು ಕ್ವಿಲ್ಟೆಡ್ ಪ್ಯಾಟರ್ನ್ ಮತ್ತು ಡ್ಯುಯಲ್-ಟೋನ್ ಸೆಡಲ್ ಹೊಂದಿದೆ. ಇನ್ನು ಈ ಸ್ಕೂಟರ್ ಸೊಗಸಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದ್ದು, ಇದು ಸ್ಪೀಡ್, ಓಡೋಮೀಟರ್, ಮೈಲೇಜ್, ವೋಲ್ಟೇಜ್ ಮತ್ತು ಬ್ಯಾಟರಿ ಸ್ಟೇಟಸ್ ಮಾಹಿತಿಯನ್ನು ಒದಗಿಸುತ್ತದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ತಮ್ಮ ಅಗತ್ಯಗಳಿಗೆ ಅನುಗುಣವಾಗಿ, ಗ್ರಾಹಕರು ಮೂರು ಬ್ಯಾಟರಿ ಪ್ಯಾಕ್‌ಗಳಿಂದ ಆಯ್ಕೆ ಮಾಡಬಹುದು. ಇದು 48V-15Ah, 48V-20Ah ಮತ್ತು 48V-24Ah ಗಳಾಗಿದೆ, ಈ ಬ್ಯಾಟರಿ ಪ್ಯಾಕ್‌ಗಳು ಕ್ರಮವಾಗಿ 55 ಕಿಮೀ, 70 ಕಿಮೀ ಮತ್ತು 85 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಸ್ಕೂಟರ್ ಹೆಚ್ಚಿನ ಸಾಮರ್ಥ್ಯದ ಮೋಟಾರ್ ಅನ್ನು ಬಳಸುತ್ತದೆ

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಒಟ್ಟಾರೆ ರೈಡ್ ಡೈನಾಮಿಕ್ಸ್ ಅನ್ನು ಕಾರ್ಯಕ್ಷಮತೆಯ ಮತ್ತಷ್ಟು ಹೆಚ್ಚಿಸಲಾಗಿದೆ. ಇದು ಸುಗಮ ಪವರ್ ಡೆಲಿವೆರಿ ಮಾಡಲು ಮತ್ತು ಅತಿಯಾದ ವೋಲ್ಟೇಜ್, ಅತಿಯಾದ ಪವರ್ ಮತ್ತು ಅಧಿಕ ತಾಪಮಾನದಂತಹ ಸಮಸ್ಯೆಗಳನಲ್ಲಿಯು ನೆರವಾಗುತ್ತದೆ. ಹೋಂಡಾ ಯು-ಬಿ 12 ಡಿಗ್ರಿ ವರೆಗಿನ ಸುಲಭವಾಗಿ ನಿಭಾಯಿಸಬಹುದು, ಈ ಸ್ಕೂಟರ್ ಕೇವಲ 54 ಕೆಜಿ ಹೊಂದಿದೆ. ಇನ್ನು ಈ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ 25 ಕಿಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಇತ್ತೀಚೆಗೆ ಹೋಂಡಾ ಯು-ಗೋ ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ಆರಂಬಿಕ ಬೆಲೆಯು ರೂ ಸಿಎನ್‌ವೈ 7,499 ಭಾರತೀಯ ಕರೆನ್ಸಿ ಪ್ರಕಾರ ಅಂದಾಜು ರೂ.86,000 ಆಗಿದೆ. ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ರೆಗ್ಯೂಲರ್ ಮತ್ತು ಲೋ-ಸ್ಫೀಡ್ ಎಂಬ ಎರಡು ರೂಪಾಂತಗಳಲ್ಲಿ ಲಭ್ಯವಿದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಎಥರ್ 450ಎಕ್ಸ್ ಮಾದರಿಯಂತೆ ಕಾಣುತ್ತದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಸಿಂಪಲ್ ಮತ್ತು ಬೋಲ್ಡ್ ವಿನ್ಯಾಸವನ್ನು ನೀಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದ ಏಪ್ರನ್‌ನಲ್ಲಿ ಟ್ರಿಪಲ್ ಕಿರಣಗಳನ್ನು ಹೊಂದಿರುವ ನಯವಾದ ಎಲ್‌ಇಡಿ ಹೆಡ್‌ಲೈಟ್ ಮತ್ತು ಮುಖ್ಯ ಕ್ಲಸ್ಟರ್ ಅನ್ನು ಸುತ್ತುವರಿದ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ಹೊಂದಿದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ 48ವಿ 30ಎಹೆಚ್ ಲಿಥಿಯಂ-ಐಯಾನ್ ತೆಗೆಯಬಹುದಾದ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಇದನ್ನು ಸಾಮಾನ್ಯ ಮಾದರಿಯಲ್ಲಿ 1.2 ಕಿವ್ಯಾಟ್ ಹಬ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಲೋ-ಸ್ಪೀಡ್ ರೂಪಾಂತರವು 800ವ್ಯಾಟ್ ಮೋಟಾರ್ ಅನ್ನು ಪಡೆಯುತ್ತದೆ. ಇದು ಪವರ್‌ಟ್ರೇನ್ ಗರಿಷ್ಠ 65 ಕಿ.ಮೀ ರೇಂಜ್ ಅನ್ನು ನೀಡಿದರೆ ಇನ್ನೊಂದು ರೂಪಾಂತರವು 130 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಎರಡನೇ ಬ್ಯಾಟರಿಯ ಸೇರ್ಪಡೆಯು ಕಡಿಮೆ ಸೀಟಿನ ಸ್ಟೋರೆಜ್ ಸ್ಪೇಸ್ ನೀಡುತ್ತದೆ. ಇನ್ನು ಇದರಲ್ಲಿ ಸ್ಪೀಡ್, ರೇಂಜ್, ಬ್ಯಾಟರಿ ಸ್ಟೇಟಸ್ ಮತ್ತು ರೈಡಿಂಗ್ ಮೋಡ್ ನಂತಹ ಮೂಲ ಮಾಹಿತಿಯನ್ನು ಒದಗಿಸುವ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ.

ಕಡಿಮೆ ಬೆಲೆ, ಸಿಂಗಲ್ ಸೀಟ್ ಹೊಂದಿರುವ ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೋಂಡಾ ಯು-ಬಿ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಭಾರತದಲ್ಲಿ ಕಂಪನಿಯು ವಿಭಿನ್ನವಾದದ್ದನ್ನು ಯೋಜಿಸುತ್ತಿದೆ. ಇವುಗಳಲ್ಲಿ ಒಂದು ಬೆನ್ಲಿ ಇ ಎಲೆಕ್ಟ್ರಿಕ್ ಆಗಿರಬಹುದು, ಇದನ್ನು ಇತ್ತೀಚೆಗೆ ಎಆರ್ಎಐ ಪರೀಕ್ಷೆಗೆ ಒಳಪಡಿಸಲಾಗಿದೆ. 2024 ರ ವೇಳೆಗೆ ಹೋಂಡಾ ಭಾರತದಲ್ಲಿ ಕನಿಷ್ಠ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

Most Read Articles

Kannada
English summary
Honda introduced new single seat u be electric scooter details
Story first published: Saturday, August 14, 2021, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X