ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಆಕ್ಟಿವಾ 125 ಪ್ರೀಮಿಯಂ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಕ್ಟಿವಾ 125 ಪ್ರೀಮಿಯಂ(Honda Activa 125 Premium) ಎಡಿಷನ್ ಎರಡೂ ರೂಪಾಂತರಗಳಲ್ಲಿ ಬಿಡುಗಡೆಗೊಂಡಿದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಹೊಸ ಆಕ್ಟಿವಾ 125 ಪ್ರೀಮಿಯಂ ಎಡಿಷನ್ ಡ್ರಮ್ ಬ್ರೇಕ್ ಮತ್ತು ಅಲಾಯ್ ವೀಲ್ ರೂಪಾಂತರದ ಬೆಲೆಯು ರೂ.78,725 ಗಳಾದರೆ, ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ರೂ.82,280 ಗಳಾಗಿದೆ. ಈ ಎಲ್ಲಾ ಬೆಲೆಗಳು ನವದೆಹಲಿಯ ಎಕ್ಸ್ ಶೋ ರೂಂ ಪ್ರಕಾರವಾಗಿದೆ. ಈ ಪ್ರೀಮಿಯಂ ಎಡಿಷನ್ ಅನ್ನು ಸಾಮಾನ್ಯ ಆಕ್ಟಿವಾ 125 ಸ್ಕೂಟರ್ ಮಾದರಿಗೆ ಹೋಲಿಸಿದರೆ, ಇದು ಸುಮಾರು ರೂ.2,000 ಹೆಚ್ಚು ದುಬಾರಿಯಾಗಿದೆ. ಆದರೆ ಪ್ರೀಮಿಯಂ ಎಡಿಷನ್ ಡ್ಯುಯಲ್ ಟ್ಯೂನ್ ಬಣ್ಣಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಹೊಸ ಹೋಂಡಾ ಆಕ್ಟಿವಾ 125 ಪ್ರೀಮಿಯಂ ಎಡಿಷನ್ ಪರ್ಲ್ ಅಮೇಜಿಂಗ್ ವೈಟ್ ಜೊತೆಗೆ ಮ್ಯಾಟ್ ಮ್ಯಾಗ್ನಿಫಿಸೆಂಟ್ ಕಾಪರ್ ಮೆಟಾಲಿಕ್ ಮತ್ತು ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಜೊತೆಗೆ ಮ್ಯಾಟ್ ಅರ್ಲ್ ಸಿಲ್ವರ್ ಮೆಟಾಲಿಕ್ ಎಂಬ ಎರಡೂ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಹೊರತುಪಡಿಸಿ, ಹೊಸ ಹೋಂಡಾ ಆಕ್ಟಿವಾ 125 ಪ್ರೀಮಿಯಂ ಎಡಿಷನ್ ಸಾಮಾನ್ಯ ಮಾದರಿಯಂತೆಯೇ ಕಾಣುತ್ತದೆ. ಸ್ಕೂಟರ್‌ನ ಡ್ಯುಯಲ್-ಟೋನ್ ಬಾಡಿಯ ಬಣ್ಣವು ಮುಂಭಾಗದ ಕವರ್‌ಗಳಿಂದ ಸೈಡ್ ಪ್ಯಾನೆಲ್‌ಗಳ ಜೊತೆಗೆ ವಿಸ್ತರಿಸುತ್ತದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಸ್ಕೂಟರ್ ಬ್ಲ್ಯಾಕ್ ಎಂಜಿನ್ ಜೊತೆಗೆ ಬ್ಲ್ಯಾಕ್ ಮುಂಭಾಗದ ಸಸ್ಪೆಂಕ್ಷನ್ ನೊಂದಿಗೆ ಬರುತ್ತದೆ. ಸ್ಕೂಟರ್‌ನ ಎಲ್‌ಇಡಿ ಹೆಡ್‌ಲ್ಯಾಂಪ್‌ನಲ್ಲಿ ಡ್ಯುಯಲ್-ಟೋನ್ ಪರಿಣಾಮವನ್ನು ಸಹ ಸೇರಿಸಲಾಗಿದೆ. ಸ್ಕೂಟರ್ ಬಾಡಿ ಕಲರ್ ಗ್ರ್ಯಾಬ್ ರೈಲ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಪಡೆಯುತ್ತದೆ. ಆಕರ್ಷಕ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಹೊಸ ಹೋಂಡಾ ಆಕ್ಟಿವಾ 125 ಪ್ರೀಮಿಯಂ ಎಡಿಷನ್ ನಲ್ಲಿ 124 ಸಿಸಿ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 8.18 ಬಿಹೆಚ್‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಈ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಪ್ರೀಮಿಯಂ ಎಡಿಷನ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹಿಂಭಾಗದಲ್ಲಿ ಮೂರು-ಹಂತದ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಹೈಡ್ರಾಲಿಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಇನ್ನು ಪ್ರಮುಖವಾಗಿ ಈ ಹೊಸ ಸ್ಕೂಟರ್ ಸ್ಕೂಟರ್ ನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಸಿಜಿ ಸ್ಟಾರ್ಟರ್, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ನಂತಹ ಫೀಚರ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಬಿಡುಗಡೆಯ ಕುರಿತು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಶ್ರೀ ಅತ್ಸುಶಿ ಒಗಾಟಾ ಅವರು ಮಾತನಾಡಿ, ಆಕ್ಟಿವಾ ಬ್ರ್ಯಾಂಡ್ ಪ್ರಾರಂಭವಾದಾಗಿನಿಂದ ಬದಲಾವಣೆಯ ನಿಜವಾದ ದಾರಿದೀಪವಾಗಿದೆ. ಐತಿಹಾಸಿಕವಾಗಿ, ಆಕ್ಟಿವಾ ಕುಟುಂಬಕ್ಕೆ ಪ್ರತಿ ಹೊಸ ಸೇರ್ಪಡೆಯೊಂದಿಗೆ, ಉತ್ಪನ್ನದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ವಿಷಯದಲ್ಲಿ ಹೋಂಡಾ ತನ್ನ ನಾಯಕತ್ವವನ್ನು ಮುಂದುವರೆಸಿದೆ. ಹೊಸ ಆಕ್ಟಿವಾ 125 ಪ್ರೀಮಿಯಂ ಆವೃತ್ತಿಯು ತನ್ನ ಪ್ರೀಮಿಯಂ ಆಕರ್ಷಣೆಯೊಂದಿಗೆ ಗ್ರಾಹಕರನ್ನು ಪ್ರಚೋದಿಸಲು ಸಿದ್ಧವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಶ್ರೀ ಯದ್ವಿಂದರ್ ಸಿಂಗ್ ಗುಲೇರಿಯಾ ಮಾತನಾಡಿ, ಲಕ್ಷಾಂತರ ಭಾರತೀಯರಿಗೆ ನಿಜವಾದ ಒಡನಾಡಿಯಾಗಿ, ಆಕ್ಟಿವಾ ದೇಶಾದ್ಯಂತ 2 ವೀಲರ್ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಿದೆ. ಆಕ್ಟಿವಾ 125 ಪ್ರೀಮಿಯಂ ಎಡಿಷನ್ ಬಿಡುಗಡೆಯೊಂದಿಗೆ, ನಾವು ವಿಶಿಷ್ಟ ವಿನ್ಯಾಸದ ಸೂಚನೆಗಳು ಮತ್ತು ಬಣ್ಣದ ಯೋಜನೆಗಳಿಂದ ಪೂರಕವಾದ ಸೊಗಸಾದ ಮತ್ತು ಪ್ರೀಮಿಯಂ ಶೈಲಿಯನ್ನು ತರುತ್ತಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 2,80,381 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 2,56,170 ಯುನಿಟ್‌ಗಳನ್ನು ಮಾರಾಟಗೊಳಿಸಿದರೆ, ಉಳಿದ 24,211 ಯುನಿಟ್‌ಗಳನ್ನು ರಪ್ತು ಮಾಡಿದ್ದಾರೆ.

ಭಾರತದಲ್ಲಿ ಹೊಸ Honda Activa 125 Premium ಎಡಿಷನ್ ಬಿಡುಗಡೆ

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,12,641 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.38 ರಷ್ಟು ಕುಸಿತವಾಗಿದೆ. ಇನ್ನು ಹೋಂಡಾ ಕಂಪನಿಯು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 20,565 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.38 ರಷ್ಟು ಕುಸಿತವನ್ನು ಕಂಡಿದೆ. ಹೋಂಡಾ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಆಕ್ಟಿವಾ ಸ್ಕೂಟರ್ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.

Most Read Articles

Kannada
English summary
Honda launched new activa 125 premium edition price changes details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X