15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹೆಚ್‌ಎಂಎಸ್‌ಐ) ತನ್ನ ನಾಲ್ಕು ಘಟಕಗಳಲ್ಲಿ ಮೇ 1ರಿಂದ 15 ದಿನಗಳ ಕಾಲ ಉತ್ಪಾದನೆ ನಿಲ್ಲಿಸುವುದಾಗಿ ತಿಳಿಸಿದೆ.

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಈ ಅವಧಿಯಲ್ಲಿ ವಾರ್ಷಿಕ ಮೆಂಟೆನೆನ್ಸ್ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ಹೋಂಡಾ ಮೋಟಾರ್‌ಸೈಕಲ್ ತಿಳಿಸಿದೆ. ಹೋಂಡಾ ಮೋಟಾರ್‌ಸೈಕಲ್ ಹರಿಯಾಣದ ಮನೇಸರ್, ರಾಜಸ್ಥಾನದ ತಪುಕರ, ಕರ್ನಾಟಕದ ನರಸಾಪುರ ಹಾಗೂ ಗುಜರಾತ್'ನ ವಿಠಾಪುರಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಹೀರೋ ಮೊಟೊಕಾರ್ಪ್ ಲಿಮಿಟೆಡ್ ಹಾಗೂ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಗಳು ಸಹ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸುತ್ತಿವೆ. ಹೀರೋ ಮೊಟೊಕಾರ್ಪ್ ತನ್ನ ಘಟಕಗಳನ್ನು ಏಪ್ರಿಲ್ 22ರಿಂದ ಮೇ 1ರವರೆಗೆ 10 ದಿನಗಳ ಕಾಲ ಮುಚ್ಚಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಇದೇ ವೇಳೆ ಮಾರುತಿ ಸುಜುಕಿ ಕಂಪನಿಯು ಹರಿಯಾಣ ಹಾಗೂ ಗುಜರಾತ್‌ನಲ್ಲಿರುವ ತನ್ನ ಎಲ್ಲಾ ಉತ್ಪಾದನಾ ಘಟಕಗಳನ್ನು ಮುಚ್ಚಲು ಮುಂದಾಗಿದೆ. ಮಾರುತಿ ಸುಜುಕಿ ಕಂಪನಿಯು ಮೇ 1ರಿಂದ ಮೇ 9ರವರೆಗೆ ತನ್ನ ಉತ್ಪಾದನಾ ಘಟಕಟಲಲ್ಲಿ ಮೆಡಿಕಲ್ ಆಕ್ಸಿಜನ್ ತಯಾರಿಸಲಿದೆ.

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಕರೋನಾ ವೈರಸ್‌ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಕರೋನಾ ವೈರಸ್ ಸೋಂಕಿತರು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಮಾರುತಿ ಸುಜುಕಿ ಕಂಪನಿಯ ನಿರ್ಧಾರವು ಆಕ್ಸಿಜನ್ ಕೊರತೆಯನ್ನು ನೀಗಿಸಲು ನೆರವಾಗಲಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ತನ್ನ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು, ಕೋವಿಡ್ 19 ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ದೇಶದ ವಿವಿಧ ನಗರಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್‌ಎಂಎಸ್‌ಐ ತನ್ನ ಎಲ್ಲಾ 4 ಉತ್ಪಾದನಾ ಘಟಕಗಳಲ್ಲಿ ಮೇ 1ರಿಂದ ಉತ್ಪಾದನೆಯನ್ನು ತಾತ್ಕಾಲಿಕವಾಗಿಸ್ಥಗಿತಗೊಳಿಸಲಿದೆ ಎಂದು ಹೇಳಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಮಾರುಕಟ್ಟೆ ಚೇತರಿಕೆಯ ಆಧಾರದ ಮೇಲೆ ಮುಂದಿನ ತಿಂಗಳುಗಳಲ್ಲಿ ತನ್ನ ಉತ್ಪಾದನಾ ಯೋಜನೆಗಳನ್ನು ಪರಿಶೀಲಿಸುವುದಾಗಿ ಕಂಪನಿ ತಿಳಿಸಿದೆ. ಹೀರೋ, ಹೋಂಡಾ, ಬಜಾಜ್ ಆಟೋ, ಟಿವಿಎಸ್‌ನಂತಹ ದೊಡ್ಡ ದ್ವಿಚಕ್ರ ವಾಹನಗಳ ಮಾರಾಟವು ಕಳೆದ 45 ದಿನಗಳಿಂದ 60 ದಿನಗಳವರೆಗೆ ಮಾರಾಟವಾಗದೇ ಉಳಿದಿದೆ ಎಂದು ವರದಿಯಾಗಿದೆ.

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಕೋವಿಡ್ 19 ವೈರಸ್ ಎರಡನೇ ಅಲೆ ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಮೇಲೆ ಹೆಚ್ಚು ಪರಿಣಾಮ ಬೀರಿರುವುದರಿಂದ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

15 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಕಚೇರಿ ಸಂಬಂಧಿತ ವ್ಯವಹಾರಗಳನ್ನು ನೋಡಿಕೊಳ್ಳಲು ಕಂಪನಿಯ ಎಲ್ಲಾ ಕಚೇರಿಗಳು ವರ್ಕ್ ಫ್ರಂ ಹೋಂ ಆಯ್ಕೆಯನ್ನು ಮುಂದುವರಿಸುತ್ತವೆ ಎಂದು ಹೋಂಡಾ ಮೋಟಾರ್‌ಸೈಕಲ್ ಹೇಳಿದೆ.

Most Read Articles

Kannada
English summary
Honda Motorcycle to stop production in four plants for 15 days. Read in Kannada.
Story first published: Thursday, April 29, 2021, 15:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X