ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಇಂಧನ ಆಧಾರಿತ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯ ತಿದ್ದುಪಡಿ ತಂದಿದ್ದು, ಹೊಸ ಯೋಜನೆ ಅಡಿಯಲ್ಲಿ ಇವಿ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಸಬ್ಸಡಿ ನೀಡಲು ಒಪ್ಪಿಗೆ ಸೂಚಿಸಿದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಇವಿ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ಫೇಮ್ 2 ಯೋಜನೆಯ ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ. 5 ಸಾವಿರದಿಂದ ರೂ. 30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿರುವುದು ಇವಿ ವಾಹನಗಳ ಮಾರಾಟ ಸುಧಾರಣೆಗೆ ಮಹತ್ವದ ನಿರ್ಧಾರವಾಗಿದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಹೊಸ ಸಬ್ಸಡಿ ತಿದ್ದುಪಡಿಯನ್ನು ಘೋಷಣೆ ಮಾಡುತ್ತಿದ್ದಂತೆ ಪ್ರಮುಖ ವಾಹನ ಕಂಪನಿಗಳು ತಮ್ಮ ಇವಿ ಸ್ಕೂಟರ್‌ಗಳ ಬೆಲೆ ಕಡಿತ ಮಾಡಿವೆ. ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಸಹ ತನ್ನ ಟಿಎನ್95, ಎಸ್ಇ ಮತ್ತು ಎಂಎಕ್ಸ್3 ಸ್ಕೂಟರ್ ಬೆಲೆಯಲ್ಲಿ ರೂ.15 ಸಾವಿರದಿಂದ ರೂ.20 ಸಾವಿರ ಇಳಿಕೆ ಮಾಡಿದ್ದು, ಸದ್ಯಕ್ಕೆ ಹೊಸ ಉಳಿತಾಯ ಅವಕಾಶವನ್ನು ದೆಹಲಿಯಲ್ಲಿ ಇವಿ ವಾಹನ ಖರೀದಿದಾರರಿಗೆ ಮಾತ್ರ ನೀಡಲಗಿದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಫೇಮ್ 2 ಸಬ್ಸಡಿ ತಿದ್ದುಪಡಿಯಲ್ಲಿ ಹೆಚ್ಚುವರಿ ಸಬ್ಸಡಿ ಪಡೆದುಕೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡ್ಡಾಯವಾಗಿ ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ ಟಾಪ್ ಸ್ಪೀಡ್ ಜೊತೆಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬೇಕೆಂಬ ಮಾನದಂಡವನ್ನು ಜಾರಿಗೆ ತಂದಿದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಹೊಸ ಮಾನದಂಡಗಳಿಗೂ ಪೂರಕವಾದ ವೈಶಿಷ್ಟ್ಯತೆ ಹೊಂದಿರುವ ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ದರಗಳೊಂದಿಗೆ ಇತರೆ ರಾಜ್ಯಗಳಲ್ಲೂ ಮಾರಾಟ ಆರಂಭಿಸುವುದಾಗಿ ಹೇಳಿಕೊಂಡಿದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ದೆಹಲಿಯಲ್ಲಿ ಇತ್ತೀಚೆಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಕೊಮಾಕಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಿಎನ್95 ಸ್ಕೂಟರ್, ಎಂಎಕ್ಸ್3, ಎಂ5 ಬೈಕ್ ಮತ್ತು ಎಸ್ಇ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಕೊಮಾಕಿ ಟಿಎನ್95 ಸ್ಕೂಟರ್ ಮಾದರಿಯು ಸದ್ಯ ಕಂಪನಿಯು ಹೈ ಎಂಡ್ ಪ್ರೀಮಿಯಂ ಮಾದರಿಯಾಗಿದ್ದು, ಕಂಪನಿಯು ಇತ್ತೀಚೆಗೆ ಎಂಎಕ್ಸ್3 ಎನ್ನುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿತ್ತು.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಸಾಮಾನ್ಯ ಮಾದರಿಯ 125 ಸಿಸಿ ಬೈಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಎಂಎಕ್ಸ್3 ಇವಿ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ವಿವಿಧ ರೈಡಿಂಗ್ ಮೋಡ್‌ಗಳಿಗೆ ಅನುಗುಣವಾಗಿ 85 ಕಿ.ಮೀ ನಿಂದ 100 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಪೂರ್ಣ ಪ್ರಮಾಣದಲ್ಲಿ ಒಂದು ಬಾರಿ ಚಾರ್ಜಿಂಗ್ ಮಾಡಲು 1.5 ಯುನಿಟ್ ವಿದ್ಯುತ್ ಬಳಕೆ ಮಾಡುತ್ತದೆ.

ಫೇಮ್ 2 ಸಬ್ಸಡಿ ನಂತರ ಇವಿ ಸ್ಕೂಟರ್‌ಗಳ ದರ ಪರಿಷ್ಕರಣೆ ಮಾಡಿದ ಕೊಮಾಕಿ

ಹೀಗಾಗಿ ಒಂದು ಬಾರಿ ಚಾರ್ಜ್ ಮಾಡಲು ವಿವಿಧ ಪ್ರದೇಶಕ್ಕೆ ಮತ್ತು ಯುನಿಟ್ ದರಗಳಿಗೆ ಅನುಗುಣವಾಗಿ ಗರಿಷ್ಠ ರೂ.20 ವೆಚ್ಚ ಮಾಡಿದ್ದಲ್ಲಿ 100 ಕಿ.ಮೀ ಮೈಲೇಜ್ ಹಿಂಪಡೆದುಕೊಳ್ಳಬಹುದಾಗಿದ್ದು, ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಉಳಿತಾಯವಾಗಲಿದೆ.

Most Read Articles

Kannada
Read more on ಕೊಮಾಕಿ komaki
English summary
Komaki Announces Price Subsidy For Its Electric Two Wheelers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X