750ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಕೆಟಿಎಂ
ಡ್ಯೂಕ್ ಸೂಪರ್ ಸರಣಿ ಬೈಕ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಉತ್ಸುಕವಾಗಿರುವ ಕೆಟಿಎಂ ಕಂಪನಿಯು 750 ಸಿಸಿ ಸಾಮರ್ಥ್ಯ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿದೆ.

ಸ್ಟ್ರೀಟ್ ಫೈಟರ್, ಅಡ್ವೆಂಚರ್, ಸೂಪರ್‌ಮೊಟೊ ಬೈಕ್ ಮಾದರಿಯ ಮಾರಾಟವನ್ನು ಹೊಂದಿರುವ ಕೆಟಿಎಂ ಕಂಪನಿಯು ಹೊಸದಾಗಿ 750 ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಬೈಕ್‌ಗಳು 490 ಸಿಸಿ ಮತ್ತು 890 ಸಿಸಿ ಸಾಮರ್ಥ್ಯದ ಬೈಕ್‌ಗಳ ಮಧ್ಯದ ಸ್ಥಾನದಲ್ಲಿ ಮಾರಾಟಗೊಳ್ಳಲಿವೆ.

750 ಸಿಸಿ ಹೊಸ ಬೈಕ್ ಮಾದರಿಗಳನ್ನು ಸದ್ಯ ಚೀನಿ ಮಾರುಕಟ್ಟೆಯಲ್ಲಿ ಸಿಎಫ್ ಮೊಟೊ ಜೊತೆಗೂಡಿ ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಬೈಕ್ ಮಾದರಿಗಳು ಭಾರತದಲ್ಲೂ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಚೀನಿ ಮಾರುಕಟ್ಟೆಯಲ್ಲಿ ಸಿಎಫ್ ಮೊಟೊ ಜೊತೆಗೆ ಸಹಭಾಗಿತ್ವ ಹೊಂದಿರುವ ಕೆಟಿಎಂ ಕಂಪನಿಯು ಭಾರತದಲ್ಲಿ ಬಜಾಜ್ ಆಟೋ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಬೈಕ್ ಮಾದರಿಗಳನ್ನು ಸದ್ಯ ಸಿಎಫ್ ಮೊಟೊ ಬೈಕ್ ಉತ್ಪಾದನಾ ಘಟಕದಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ.

750 ಸಿಸಿ ಎಂಜಿನ್ ಪ್ರೇರಿತ ಹೊಸ ಬೈಕ್‌ಗಳನ್ನು ಮೂರು ಮಾದರಿಯಲ್ಲೂ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಬೈಕ್ ಮಾದರಿಯನ್ನು ಏಷ್ಯಾದ ಪ್ರಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿ ಅಭಿವೃದ್ದಿಗೊಸಲಾಗುತ್ತಿದೆ. ಚೀನಾದಲ್ಲಿ ಕೆಟಿಎಂ ಜೊತೆಗೂಡಿ ಕಾರ್ಯನಿರ್ವಹಿಸುವ ಸಿಎಫ್ ಮೊಟೊ ಕಂಪನಿಯು ಭಾರತದಲ್ಲಿ ಮಾತ್ರ ಪ್ರತ್ಯೇಕ ಮಾರಾಟ ಪ್ರಕ್ರಿಯೆ ಹೊಂದಿದ್ದು, ಸಿಎಫ್ ಮೊಟೊ ಬೈಕ್ ಮಾದರಿಗಳನ್ನು ಆಧಾರವಾಗಿಟ್ಟುಕೊಂಡು ಕೆಟಿಎಂ ಕಂಪನಿಯು ಬಜಾಜ್ ಜೊತೆಗೂಡಿ ಭಾರತದಲ್ಲಿ ನಿರ್ಮಾಣ ಮಾಡುತ್ತದೆ.

ಕೆಟಿಎಂ 750 ಸಿಸಿ ಬೈಕ್ ಮಾದರಿಗಳು 2022ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೆಚ್ಚುತ್ತಿರುವ ಪ್ರೀಮಿಯಂ ಬೈಕ್ ಬೇಡಿಕೆಯನ್ನು ಪೂರೈಸಲು ಹೊಸ ಬೈಕ್ ಮಾದರಿಗಳು ಸಹಕಾರಿಯಾಗಲಿವೆ.

ಹೊಸ ಬೈಕ್ ಮಾದರಿಗಳು ಟ್ವಿನ್ ಸಿಲಿಂಡರ್ ಎಂಜಿನ್ ಪ್ರೇರಿತ ಮಧ್ಯಮ ಕ್ರಮಾಂಕದ ಬೈಕ್ ಮಾದರಿಗಳಾಗಿದ್ದು, ಕೆಟಿಎಂ ಕಂಪನಿಯು ಹೊಸ ಬೈಕ್‌ಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 125 ಆರ್‌ಸಿ 200, ಆರ್‌ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಜೊತೆಗೆ 500ಸಿಸಿ, 750 ಸಿಸಿ ವಿಭಾಗದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

ಹೊಸ ಯೋಜನೆಗೆ ಪೂರಕವಾಗಿ ಈಗಾಗಲೇ ಪುಣೆಯಲ್ಲಿರುವ ಬಜಾಜ್ ಆಟೋ ಬೈಕ್ ಉತ್ಪಾದನಾ ಘಟಕದಲ್ಲಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮಾದರಿಗಳಿಗೆ ಟ್ವಿನ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸಿಂಗಲ್ ಸಿಲಿಂಡರ್ ವೈಶಿಷ್ಟ್ಯತೆ ಹೊಂದಿರುವ 390 ಬೈಕ್ ಮಾದರಿಗಳಿಂತಲೂ ಸಾಕಷ್ಟು ಭಿನ್ನತೆ ಹೊಂದಲಿರುವ 490 ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳು 390 ನಂತರ ಅಪ್‌ಗ್ರೆಡ್ ಹೊಂದಲು ಬಯಸುವ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ಡ್ಯೂಕ್, ಆರ್‌ಸಿ ಮತ್ತು ಅಡ್ವೆಂಚರ್ ಮಾದರಿಗಳು ನಿರ್ಮಾಣಗೊಳ್ಳಲಿವೆ.


Click it and Unblock the Notifications








