ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ನಹಾಕ್ ಮೋಟಾರ್ಸ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಹೊಸ ಎಲೆಕ್ಟ್ರಿಕ್ ಸೈಕಲ್‌ಗಳ ಮಾರಾಟವನ್ನು ಆರಂಭಿಸಿತ್ತು. ಕಂಪನಿಯ ಗರುಡ ಹಾಗೂ ಜಿಪ್ಪಿ ಹೆಸರಿನ ಎಲೆಕ್ಟ್ರಿಕ್ ಸೈಕಲ್‌ಗಳ ಮಾರಾಟಕ್ಕೆ ಆನ್‌ಲೈನ್‌ ಮೂಲಕ ಬುಕ್ಕಿಂಗ್ ಆರಂಭಿಸಲಾಗಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಗರುಡ ಎಲೆಕ್ಟ್ರಿಕ್ ಸೈಕಲ್ ಬೆಲೆ ರೂ.31.999ಗಳಾದರೆ, ಜಿಪ್ಪಿ ಎಲೆಕ್ಟ್ರಿಕ್ ಸೈಕಲ್ ಬೆಲೆ ರೂ.33,499ಗಳಾಗಿದೆ. ಈ ಎಲೆಕ್ಟ್ರಿಕ್ ಸೈಕಲ್‌ಗಳು ನಿರೀಕ್ಷಿಗೂ ಮೀರಿ ಬುಕ್ಕಿಂಗ್ ಪಡೆದುಕೊಂಡಿವೆ ಎಂದು ನಹಾಕ್ ಕಂಪನಿ ಹೇಳಿಕೊಂಡಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಎರಡೂ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಬುಕ್ಕಿಂಗ್ ಆರಂಭಿಸಿದ ಕೆಲವೇ ದಿನಗಳಲ್ಲಿ ಒಂದು ಸಾವಿರಕ್ಕೊ ಹೆಚ್ಚು ಯುನಿಟ್'ಗಳು ಬುಕ್ಕಿಂಗ್ ಆಗಿವೆ. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಗ್ರಾಹಕರಿಂದ ಅದ್ಭುತ ಸ್ವಾಗತ ದೊರೆತಿದೆ ಎಂದು ಹೇಳಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಎರಡೂ ಎಲೆಕ್ಟ್ರಿಕ್ ಸೈಕಲ್‌ಗಳೂ ದಕ್ಷಿಣ ಭಾರತದಿಂದ ಹೆಚ್ಚು ಬುಕ್ಕಿಂಗ್ ಪಡೆದಿವೆ ಎಂದು ಹೇಳಲಾಗಿದೆ. ಕಂಪನಿಯು ಸ್ವೀಕರಿಸಿರುವ ಒಟ್ಟು ಬುಕ್ಕಿಂಗ್'ನಲ್ಲಿ 38%ನಷ್ಟು ಬುಕ್ಕಿಂಗ್ ದಕ್ಷಿಣ ಭಾರತದಿಂದ ಬಂದಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಎಲೆಕ್ಟ್ರಿಕ್ ಸೈಕಲ್‌ಗಳ ಖರೀದಿಗೆ ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಉಂಟಾಗಿದೆ ಎಂದು ನಹಾಕ್ ಕಂಪನಿ ಮಾಹಿತಿನೀಡಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಜರ್ಮನಿ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದಿಂದ 100ಕ್ಕೂ ಹೆಚ್ಚು ಬುಕ್ಕಿಂಗ್'ಗಳನ್ನು ಸ್ವೀಕರಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಅಧ್ಯಕ್ಷರಾದ ಪ್ರವತ್ ನಹಾಕ್, ನಮ್ಮ ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಕೆಲವೇ ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬುಕ್ಕಿಂಗ್'ಗಳನ್ನು ಪಡೆದಿರುವುದು ನಿಜಕ್ಕೂ ಪ್ರೋತ್ಸಾಹದಾಯಕವಾಗಿದೆ. ನಮ್ಮಲ್ಲಿ ಈಗಾಗಲೇ ರೂ.3 ಕೋಟಿಗೂ ಹೆಚ್ಚು ವ್ಯವಹಾರ ಮೌಲ್ಯವಿದೆ. ಹಲವಾರು ಜನರು ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಿದ್ದಾರೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಬುಕ್ಕಿಂಗ್ ಇನ್ನೂ ಕೆಲವು ದಿನಗಳವರೆಗೆ ಮಾತ್ರ ಲಭ್ಯವಿರಲಿದೆ. ಗ್ರಾಹಕರು ಈ ತಿಂಗಳ 11ರವರೆಗೆ ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬುಕ್ಕಿಂಗ್ ಮಾಡಬಹುದು ಎಂದು ಅವರು ಹೇಳಿದರು. ರೂ.2,999 ಪಾವತಿಸಿ ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬುಕ್ಕಿಂಗ್ ಮಾಡಬಹುದು.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಸೈಕಲ್‌ಗಳನ್ನು ಯಾವಾಗ ತಲುಪಿಸಲಾಗುತ್ತದೆ ಎಂಬುದನ್ನು ಇ-ಮೇಲ್ ಹಾಗೂ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. 13ರಿಂದ ವಿತರಣಾ ಕಾರ್ಯ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ವಿಶೇಷವೆಂದರೆ ಎಲ್ಲಾ ಗ್ರಾಹಕರಿಗೂ ಮನೆ ಬಾಗಿಲಲ್ಲೆ ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ವಿತರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ 40 ಕಿ.ಮೀಗಳವರೆಗೆ ಚಲಿಸುತ್ತವೆ.

ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದ ನಹಾಕ್ ಕಂಪನಿಯ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಸೈಕಲ್‌ಗಳನ್ನು 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕ್ ಸೈಕಲ್‌ಗಳಲ್ಲಿ ಎಲ್‌ಸಿ‌ಡಿ ಸ್ಕ್ರೀನ್, ಪೆಡಲ್ ಸೆನ್ಸಾರ್ ಟೆಕ್ನಾಲಜಿ, ಹೋಮ್ ಚಾರ್ಜಿಂಗ್ ಸೌಲಭ್ಯದಂತಹ ವಿಶೇಷ ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Nahak Electric bicycles receives overwhelming response. Read in Kannada.
Story first published: Friday, July 9, 2021, 20:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X