ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಬಹುನಿರೀಕ್ಷಿತ ಟಿಆರ್‌ಕೆ 502 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.79 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಬಿಡುಗಡೆಗೊಂಡ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಮೆಟಾಲಿಕ್ ಡಾರ್ಕ್ ಗ್ರೇ ಮತ್ತು ರೆಡ್ ಮತ್ತು ಪ್ಯೂರ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಬೆನೆಲ್ಲಿ ಬೆನೆಲ್ಲಿ ಟಿಆರ್‌ಕೆ 502 ಬೈಕಿನ ಬುಕ್ಕಿಂಗ್ ಅನ್ನು ಆರಂಭಿಸಲಾಗಿದೆ. ಈ ಹೊಸ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನ ಬೆಲೆಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ರೂ.30,000 ಕಡಿಮೆಯಾಗಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಇನ್ನು ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ 500ಸಿಸಿ ಲಿಕ್ವಿಡ್-ಕೂಲ್ಡ್ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಎಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಈ ಬೈಕಿನ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ಬೆನೆಲ್ಲಿ ಮರುವಿನ್ಯಾಸಗೊಳಿಸಿದ ಸೈಡ್ ಮೀರರ್ ಗಳನ್ನು ಅಳವಡಿಸಿದ್ದಾರೆ. ಇನ್ನು ಅಲ್ಯೂಮಿನಿಯಂ ಫ್ರೇಮ್ ನಕಲ್ ಗಾರ್ಡ್‌ಗಳನ್ನು ಸಹ ಅಳವಡಿಸಿದ್ದಾರೆ.

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಈ ಹೊಸ ಬೈಕ್ ಬಿಡುಗಡೆ ಸಂದರ್ಭದಲ್ಲಿ ಬೆನೆಲ್ಲಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಜಾಬಾಕ್ ಮಾತನಾಡಿ, ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ನವೀನ ತಾಂತ್ರಿಕ ವಿದ್ಯಮಾನ, ಸಾಟಿಯಿಲ್ಲದ ಕಾರ್ಯಕ್ಷಮತೆ ಮತ್ತು ರಾಜಿಯಾಗದ ಗುಣಮಟ್ಟದೊಂದಿಗೆ ಪರಿಪೂರ್ಣವಾದ ಸಂಯೋಜನೆಯಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಬಿಎಸ್ 6 ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿರುವುದು ಪ್ರೀಮಿಯಂ ಟೂರಿಂಗ್ ವಿಭಾಗದಲ್ಲಿ ನಮ್ಮ ಹೆಜ್ಜೆಗುರುತನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವಿದೆ. ಅಲ್ಲದೇ ನಮ್ಮ ಡೀಲರುಗಳ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಇನ್ನು ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ವೈಟ್ ಮತ್ತು ಅರೇಂಜ್ ಬಣ್ಣದ ಸೆಮಿ-ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬ್ಯಾಕ್‌ಲಿಟ್, ಹೊಸ ಹ್ಯಾಂಡಲ್‌ಬಾರ್, ಪರಿಷ್ಕೃತ ಬಾಡಿ ಗ್ರಾಫಿಕ್ಸ್ ಮತ್ತು ಇದರ ಕಂಫರ್ಟ್ ಲೆವೆಲ್ ಕೂಡ ಹೆಚ್ಚಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇನ್ನು ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಿಡುಗಡೆ

ಇನ್ನು ಇದರ ಬ್ರೇಕಿಂಗ್ ಸಿಸ್ಟಂನಲ್ಲಿಯು ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‌ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್‌ ಅನ್ನು ನೀಡಿದೆ. ಇದರೊಂದಿದೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಹೊಂದಿದೆ.

Most Read Articles

Kannada
English summary
BS6 Benelli TRK 502 Launched. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X