ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತನ್ನ ಇತ್ತೀಚಿನ ಕ್ರೂಸರ್ ಕೊಡುಗೆಯಾದ ರೆಬೆಲ್ 250 ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ರೆಬೆಲ್ 250 ಬ್ರಾಂಡ್‌ನ ಕ್ರೂಸರ್ ಬೈಕ್‍ಗಳ ಸರಣಿಯ ಕೆಳಭಾಗದಲ್ಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಹೋಂಡಾ ಕ್ರೂಸರ್ ಮೋಟಾರ್‌ಸೈಕಲ್‌ಗಳ ಸಾಲಿನಲ್ಲಿ ರೆಬೆಲ್ 300, ರೆಬೆಲ್ 500 ಮತ್ತು ರೆಬೆಲ್ 1100 ಸೇರಿವೆ. 2022ರ ಹೋಂಡಾ ರೆಬೆಲ್ 250 ಬೈಕ್ ಜಪಾನ್‌ನಲ್ಲಿ ಹೊಸ ಪರ್ಲ್ ಸ್ಪೆನ್ಸರ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ, ಆದರೆ ಪೇಂಟ್ ಸ್ಕೀಮ್ ಅನ್ನು ಟಾಪ್-ಸ್ಪೆಕ್ ರೆಬೆಲ್ 250ಎಸ್ ಆವೃತ್ತಿಗಾಗಿ ಕಾಯ್ದಿರಿಸಲಾಗಿದೆ. ಬೈಕ್ ಡಾರ್ಕ್ ಬ್ಲೂ ಮೆಟಾಲಿಕ್ ಬಣ್ಣವನ್ನು ಆಧರಿಸಿದ್ದು, ಅದರ ಇಂಧನ ಟ್ಯಾಂಕ್ ಮತ್ತು ಹಿಂಭಾಗದ ಫೆಂಡರ್‌ನಲ್ಲಿ ಪ್ರಮುಖವಾಗಿದೆ. ಬೈಕಿನ ಎಂಜಿನ್ ಮತ್ತು ಗೇರ್‌ಬಾಕ್ಸ್ ಜೋಡಣೆ ಮತ್ತು ಹಾರ್ಡ್‌ವೇರ್ ಸೆಟಪ್ ಸೇರಿದಂತೆ ಉಳಿದ ಭಾಗಗಳಿಗೆ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಇದು ಉತ್ತಮವಾದ ಸ್ಪೋರ್ಟಿ ಕಾಂಟ್ರಾಸ್ಟ್ ಅನ್ನು ಸೃಷ್ಟಿಸುತ್ತದೆ. ಕ್ರೂಸರ್ ಬೈಕಿನ ಈ ಪ್ರೀಮಿಯಂ ರೂಪಾಂತರವು ಡೈಮೆಂಡ್-ಸ್ಟಿಜ್ ಶೈಲಿಯ ಸೀಟುಗಳು, ಫೋರ್ಕ್ ಗೈಟರ್‌ಗಳು ಮತ್ತು ಹೆಡ್‌ಲ್ಯಾಂಪ್ ಕೌಲ್ ಅನ್ನು ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ಗಳೊಂದಿಗೆ ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಈ ಹೊಸ ಹೋಂಡಾ ರೆಬೆಲ್ 250 ಬೈಕಿನ ಸ್ಟ್ಯಾಂಡರ್ಡ್ ಆವೃತ್ತಿಯು ಮ್ಯಾಟ್ ಗ್ರೇ ಶೇಡ್ ಮತ್ತು ಟ್ಯಾನ್ ಬ್ರೌನ್ ಸೀಟ್‌ಗಳೊಂದಿಗೆ ಇನ್ನೂ ಲಭ್ಯವಿದೆ. ಕೆಲವು ಇತರ ಮುಖ್ಯಾಂಶಗಳು ಒಂದು ಸುತ್ತಿನ ಹೆಡ್‌ಲ್ಯಾಂಪ್, ಹಿಂಭಾಗದ ಫೆಂಡರ್ ಮತ್ತು ವೃತ್ತಾಕಾರದ ರಿಯರ್‌ವ್ಯೂ ಮಿರರ್‌ಗಳನ್ನು ಒಳಗೊಂಡಿವೆ. ಬೈಕ್‌ನಲ್ಲಿ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ರೆಬೆಲ್ 250 ಬೈಕಿನಲ್ಲಿ ಕ್ವಾಡ್ ಪ್ರೊಜೆಕ್ಟರ್ ಹೆಡ್‌ಲೈಟ್ ಮತ್ತು ಸಂಪೂರ್ಣ ಡಿಜಿಟಲ್ ವೃತ್ತಾಕಾರದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೊಂದಿಗೆ ಸಂಪೂರ್ಣ ಎಲ್ಇಡಿ ಲೈಟ್ ಅನ್ನು ಹೊಂದಿದೆ. ಇದರೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಇನ್ನು ಹೊಸ ಹೋಂಡಾ ರೆಬೆಲ್ 250 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಸ್ವಿಂಗರ್ಮ್‌ಗೆ ಜೋಡಿಸಲಾದ ಟ್ವಿನ್ ಅಬ್ಸಾರ್ಬರ್‌ಗಳಿಂದ ನಿರ್ವಹಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಇನ್ನು ಪ್ರಮುಖವಾಗಿ ಈ ಕ್ರೂಸರ್ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ನಿಸ್ಸಿನ್‌ನಿಂದ ಕ್ಯಾಲಿಪರ್‌ಗಳೊಂದಿಗೆ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ನೀಡಲಾಗಿದೆ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಹೊಸ ಹೋಂಡಾ ರೆಬೆಲ್ 250 ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, ಈ ಎಂಜಿನ್ 25.6 ಬಿಹೆಚ್‍ಪಿ ಪವರ್ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್'ಗೆ ಜೋಡಿಸಲಾಗಿದೆ. ರೆಬೆಲ್ 250 ಅತ್ಯಂತ ಕಡಿಮೆ ಸೀಟ್ ಎತ್ತರ 690 ಎಂಎಂ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಪಡೆಯುತ್ತದೆ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಈ ಹೊಸ ಹೋಂಡಾ ರೆಬೆಲ್ 250 ಬೈಕ್ 177 ಕೆಜೆ ತೂಕವನ್ನು ಹೊಂದಿದೆ. ಈ ಹೊಸ ಹೋಂಡಾ ರೆಬೆಲ್ 250 ಕ್ರೂಸರ್ ಬೈಕ್ ಜಪಾನ್‌ನಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆಯು ಸುಮಾರು ರೂ.4 ಲಕ್ಷಗಳಾಗಿರಬಹುದು. ಇನ್ನು ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಹೋಂಡಾ ಕಂಪನಿಯು ತನ್ನ ಪ್ರೀಮಿಯಂ ರೆಬೆಲ್ 500 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 4,82,756 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 19,077 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 5,26,865 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ, ವರ್ಷದಿಂದ ವರ್ಷದ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಕುಸಿತವನ್ನು ಕಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಇನ್ನು ಕಳೆದ ವರ್ಷ ಹೋಂಡಾ 25,978 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ವರ್ಷದ ರಫ್ತಿಗೆ ಹೋಲಿಸಿದರೆ ಕುಸಿತವನ್ನು ಕಂಡಿದೆ.ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಅನ್ನು ಇತ್ತೀಚೆಗೆ ತೆರೆದಿದೆ. ಈ ಶೋರೂಂ ಮೂಲಕ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸುವಾಗ ಡಿಜಿಟಲ್ ಅನುಭವವನ್ನು ಪಡೆಯಲಿದ್ದಾರೆ. ಹೋಂಡಾ ತನ್ನ ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್‌ಗಳಿಗಾಗಿ ಈ ವರ್ಚುವಲ್ ಶೋರೂಂ ಅನ್ನು ಆರಂಭಿಸಿದೆ. ಗ್ರಾಹಕರು ಬಿಗ್ ವಿಂಗ್ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಮಾತ್ರ ಈ ವರ್ಚುವಲ್ ಶೋರೂಂ ಮೂಲಕ ಖರೀದಿಸಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Honda Rebel 250 ಕ್ರೂಸರ್ ಬೈಕ್

ಹೋಂಡಾ ಭಾರತದಲ್ಲಿ ಒಂದೇ ಒಂದು ಕ್ರೂಸರ್ ಬೈಕ್‍ಗಳ ಅನ್ನು ಬಿಡುಗಡೆಗೊಳಿಸಿಲ್ಲ, ಬದಲಿಗೆ ಸಿಬಿ 350 ರೂಪದಲ್ಲಿ ರೆಟ್ರೊ ಶೈಲಿಯ ಕ್ಲಾಸಿಕ್ ರೋಡ್‌ಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಯಶಸ್ಸನ್ನು ಕಂಡಿದೆ. ಈ ಬೈಕ್ ಪ್ರಸ್ತುತ ಎರಡು ಮಾದರಿಗಳಲ್ಲಿ ಲಭ್ಯವಿದೆ, ಆದರೆ ಮುಂದಿನ ದಿನಗಳಲ್ಲಿ ಕ್ರೂಸರ್ ಬೈಕ್‍ಗಳನ್ನು ಹೋಂಡಾ ಭಾರತದಲ್ಲಿ ಪರಿಚಯಿಸಬಹುದು. . ಹೋಂಡಾ ತಮ್ಮ ಬಿಗ್‌ವಿಂಗ್ ನೆಟ್‌ವರ್ಕ್‌ನಲ್ಲಿ ಸಿಬಿಯು ಆಗಿ ಭಾರತದಲ್ಲಿ ರೆಬೆಲ್ ಶ್ರೇಣಿಯನ್ನು ಪ್ರಾರಂಭಿಸಬಹುದು.

Most Read Articles

Kannada
English summary
New honda rebel 250 cruiser revealed features spec details
Story first published: Monday, October 25, 2021, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X