ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಜಾವಾ ಕಂಪನಿಯ ಹೊಸ ಸ್ಕ್ರಾಂಬ್ಲರ್ ಬೈಕಿನ ಚಿತ್ರಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿವೆ. ಇದೀಗ ಜಾವಾ ಕಂಪನಿಯು ಆರ್‌ವಿಎಂ 500 ಎಂದು ಕರೆಯಲ್ಪಡುವ ಅಡ್ವೆಂಚರ್- ಟೂರರ್ ಬೈಕ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಸ್ಕ್ರ್ಯಾಂಬ್ಲರ್ ನಂತೆಯೇ ಈ ಬೈಕ್ ಬ್ರಿಸ್ಟಲ್ ಮಾದರಿಯನ್ನು ಆಧರಿಸಿದೆ ಹೊಸ ಜಾವಾ ಬೈಕ್ ವಿಶಿಷ್ಟವಾದ ಎಡಿವಿ ಸ್ಟೈಲಿಂಗ್ ಅನ್ನು ಹೊಂದಿದ್ದು, ದೊಡ್ಡ ಫ್ಯೂಯಲ್ ಟ್ಯಾಂಕ್ ಮತ್ತು ವಿಂಡ್‌ಸ್ಕ್ರೀನ್ ಮತ್ತು ಸ್ಪ್ಲಿಟ್-ಸೀಟ್‌ಗಳನ್ನು ಹೊಂದಿದೆ. ಇನ್ನು ವಾ ಆರ್‌ವಿಎಂ 500 ಕ್ರ್ಯಾಶ್ ಗಾರ್ಡ್, ಸಂಪ್ ಗಾರ್ಡ್ ಮತ್ತು ನಕಲ್ ಗಾರ್ಡ್‌ಗಳು ಮತ್ತು ಟೈಲ್ ರ್ಯಾಕ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಸ್ಟೈಲಿಂಗ್ ವಿಷಯದಲ್ಲಿ ಹೊಸ ಜಾವ ಬೈಕ್ ಬೆನೆಲ್ಲಿ ಟಿಆರ್ಕೆ 502 ಮತ್ತು ಬಿಎಂಡಬ್ಲ್ಯು ಜಿ 310 ಜಿಎಸ್ ಮಾದರಿಗಳ ಸಂಯೋಜನೆಯಂತೆ ತೋರುತ್ತದೆ. ಇನ್ನು ಅಡ್ವೆಂಚರ್-ಟೂರರ್ ಬೈಕ್ ಜಾವಾ ಸ್ಕ್ರ್ಯಾಂಬ್ಲರ್‌ನಂತೆಯೇ 471 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 43 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, ಜಾವಾ ಆರ್‌ವಿಎಂ 500 ಸ್ಪೋಕ್ ವ್ಹೀಲ್ ಗಳನ್ನು ನೀಡಲಾಗಿದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಇನ್ನು ಹೊಸ ಬೈಕಿನ ಮುಂಭಾಗದಲ್ಲಿ 18-ಇಂಚಿನ ಮತ್ತು ಹಿಂಭಾಗದಲ್ಲಿ ಮೆಟ್ಜೆಲರ್‌ನಿಂದ ಡ್ಯುಯಲ್-ಸ್ಪೋರ್ಟ್‌ ಟೈರ್‌ಗಳನ್ನು ಹೊಂದಿದೆ. ಇನ್ನು ಒಟ್ಟಾರೆ ವಿನ್ಯಾಸವು ಅಡ್ವೆಂಚರ್ ಬೈಕ್ ಆಗಿರುವುದರಿಂದ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಹೊಸ ಜಾವಾ ಆರ್‌ವಿಎಂ 500 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟ್ವಿನ್ ಡಿಸ್ಕ್‌ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.ಇನ್ನು ಜಾವಾ ಆರ್‌ವಿಎಂ 500 ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿವೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಇನ್ನೊಂದು ಪ್ರಮುಖ ವಿಷಯವೆಂದರೆ, ಮಹೀಂದ್ರಾ ಒಡೆತನದ ಜಾವಾ ಮೋಟಾರ್‌ಸೈಕಲ್‌ಗಳಿಗೂ ಜಾವಾ ಆರ್‌ವಿಎಂ 500 ಬೈಕಿಗೂ ಯಾವುದೇ ಸಂಬದವಿಲ್ಲ, ಬದಲಾಗಿ ಜೆಕ್ ಗಣರಾಜ್ಯ ಮೂಲದ ಜಾವಾ ಬ್ರ್ಯಾಂಡ್ ಅಡಿಯಲ್ಲಿ ರ್‌ವಿಎಂ 500 ಬೈಕ್ ಬರುತ್ತದೆ. ಕಂಪನಿಯು ತನ್ನ ಇತ್ತೀಚಿನ ಮಾದರಿಗಳಿಗಾಗಿ ಫಿಲಿಪೈನ್ಸ್ ಮೂಲದ ಬೈಕು ತಯಾರಕ ಬ್ರಿಸ್ಟಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಅನಾವರಣವಾಯ್ತು ಹೊಸ ಜಾವಾ ಆರ್‌ವಿಎಂ 500 ಅಡ್ವೆಂಚರ್ ಟೂರರ್ ಬೈಕ್

ಆದ್ದರಿಂದ ಈ ಅಡ್ವಂಚರ್-ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಆದರೆ ಭಾರತೀಯ ಮಾರುಕಟ್ಟೆಲ್ಲಿ ಅಡ್ವೆಂಚರ್ ಟೂರರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗುವ ಸಣ್ಣ ಸಾಧ್ಯತೆಗಳು ಕೂಡ ಇದೆ. ಆದರೆ ಈ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಯಶಶ್ವಿಯಾಗುತ್ತದೆ ಎಂಬುದನ್ನು ಕೂಡ ಕಾದು ನೋಡಬೇಕು.

Most Read Articles

Kannada
English summary
Jawa 500cc Adventure-touring Motorcycle Revealed | ಜಾವಾ ಕಂಪನಿಯ ಹೊಸ ಸ್ಕ್ರಾಂಬ್ಲರ್ ಬೈಕಿನ ಚಿತ್ರಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿವೆ. ಇದೀಗ ಜಾವಾ ಕಂಪನಿಯು ಆರ್‌ವಿಎಂ 500 ಎಂದು ಕರೆಯಲ್ಪಡುವ ಅಡ್ವೆಂಚರ್- ಟೂರರ್ ಬೈಕ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.
Story first published: Friday, July 30, 2021, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X