ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಎಕ್ಸ್‌ಎಸ್‌ಆರ್125 ಬೈಕಿನ ಮೂಲಕ 125 ಸಿಸಿ ಪೋರ್ಟ್ಫೋಲಿಯೊವನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಮುಂದಾಗಿದೆ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಎಂಟಿ -125 ಮತ್ತು ಆರ್125 ಮಾದರಿಗಳ ಅದೇ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಯಮಹಾ ಎಕ್ಸ್‌ಎಸ್‌ಆರ್125 ಬೈಕಿನಲ್ಲಿ ಹೈಟೆಕ್ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ವೃತ್ತಾಕಾರದ ಹೆಡ್‌ಲ್ಯಾಂಪ್, ರೌಂಡರ್ಡ್ ಡಿಸೈನ್ ಫ್ಯೂಯಲ್ ಟ್ಯಾಂಕ್, ಮಾರ್ಡನ್ ಶೈಲಿಯ ಫುಲ್ ಎಲ್ಇಡಿ ಹೆಡ್ ಲೈಟ್ ಮತ್ತು ಸ್ನ್ಯಾಜಿ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ. ಬಾಡಿ ಪ್ಯಾನೆಲಿಂಗ್ ಎಂಜಿನ್, ರೇಡಿಯೇಟರ್ ಮತ್ತು ಇತರ ಯುನಿಟ್ ಗಳನ್ನು ಒಳಗೊಂಡಿವೆ.

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಇನ್ನು ಹೊಸ ಯಮಹಾ ಎಕ್ಸ್‌ಎಸ್‌ಆರ್125 ಬೈಕಿನಲ್ಲಿ ಪ್ರಮುಖ ಎಂಜಿನ್ ಗಾರ್ಡ್ ಅನ್ನು ಕಾಣಬಹುದು, ಇದು ಬೈಕ್‌ನ ಒರಟಾದ ಪ್ರೊಫೈಲ್ ಅನ್ನು ಹೆಚ್ಚಿಸುತ್ತದೆ. ಯಮಹಾ ಎಕ್ಸ್‌ಎಸ್‌ಆರ್125 ರೆಟ್ರೊ ಅಲ್ಯೂಮಿನಿಯಂ ಬ್ರಾಕೆಟ್ ಗಳು, ಟಕ್ ಮತ್ತು ರೋಲ್ ಸೀಟ್ ಮತ್ತು ಚಿತ್ರಿಸಿದ ಮಡ್‌ಗಾರ್ಡ್‌ಗಳಂತಹ ಫೀಚರ್ಸ್ ಗಳನ್ನು ಹೊಂದಿವೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ರೆಡ್‌ಲೈನ್, ಇಂಪ್ಯಾಕ್ಟ್ ಯೆಲ್ಲೋ ಮತ್ತು ಟೆಕ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳನ್ನು ಹೊಂದಿವೆ. ಫ್ಯೂಯಲ್ ಟ್ಯಾಂಕ್ ನಲ್ಲಿ ನಿಫ್ಟಿ ಕಾಣುವ ಡೆಕಲ್‌ಗಳು ಬೈಕ್‌ನ ಸ್ಪೋರ್ಟಿ ಪ್ರೊಫೈಲ್ ಅನ್ನು ಹೆಚ್ಚಿಸುತ್ತವೆ.

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕಿನಲ್ಲಿನ ಸಿಂಗಲ್-ಪಾಡ್ ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್ ಜೊತೆಗೆ ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಇಂಡಿಕೇಟರ್ ಅನ್ನು ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಯಮಹಾ ಎಕ್ಸ್‌ಎಸ್‌ಆರ್125 ಬೈಕಿನಲ್ಲಿ 124 ಸಿಸಿ ಲಿಕ್ವಿಡ್ ಕೂಲ್ಡ್ ಎಸ್‌ಒಹೆಚ್‌ಸಿ ಮೋಟರ್ ಅಳವಡಿಸಲಾಗಿದೆ. ಈ ಎಂಜಿನ್ 10,000 ಆರ್‌ಪಿಎಂನಲ್ಲಿ 14.7 ಬಿಹೆಚ್‌ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 11.5 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣ€ವಾಗಿ ನವೀಕರಿಸಲಾಗುತ್ತದೆ. ಇದು ಟಾರ್ಕ್ ವಿತರಣೆಗೆ ಸುಧಾರಿತ ವೇರಿಯಬಲ್ ವಾಲ್ವ್ ಆಕ್ಟಿವೇಷನ್ ಹೊಂದಿದೆ. ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಹಗುರವಾದ ಡೆಲ್ಟಾಬಾಕ್ಸ್ ಫ್ರೇಮ್ ಅನ್ನು ಬಳಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಹೊಸ ಯಮಹಾ ಎಕ್ಸ್‌ಎಸ್‌ಆರ್125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ವಿಂಗಾರ್ಮ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿರುತ್ತದೆ.

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಇನ್ನು ಈ ಪ್ರಮುಖವಾಗಿ ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 267 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಈ ಹೊಸ ಯಮಹಾ ಬೈಕ್ ಒಟ್ಟು 140 ಕೆಜಿ ತೂಕವನ್ನು ಹೊಂದಿದೆ.

ಬಹುನಿರೀಕ್ಷಿತ 2021ರ ಯಮಹಾ ಎಕ್ಸ್‌ಎಸ್‌ಆರ್125 ಬೈಕ್ ಮಾಹಿತಿ ಬಹಿರಂಗ

ಇನ್ನು ಯಮಹಾ ಎಕ್ಸ್‌ಎಸ್‌ಆರ್125 ಬೈಕ್ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುತ್ತದೆ. ಇನ್ನು ಈ ಬೈಕಿನಲ್ಲಿ 11 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿರುತ್ತದೆ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 125 ಬೈಕ್ ಶೀಘ್ರದಲ್ಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಯಮಹಾ yamaha
English summary
2021 Yamaha XSR125 Official Specs Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X