ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಹೀಗಾಗಿ ಮಾಧ್ಯಮ ವರ್ಗದ ಜನರು ತಮ್ಮದೇ ಆದ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂಧನ ಬೆಲೆಗಳು ಮಾತ್ರವಲ್ಲದೇ ವಾಹನಗಳ ಬೆಲೆಯೂ ಏರಿಕೆಯಾಗುತ್ತಿದೆ.

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದಾಗಿ ಜನರು ಸಾರ್ವಜನಿಕ ಸಾರಿಗೆಯಲ್ಲಿಯೂ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ವಿವಿಧ ಕಾರಣಗಳಿಗಾಗಿ ಜನರು ಸೈಕಲ್'ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಆರಂಭಿಸಿದ್ದಾರೆ. ಬಡವರು ಮಾತ್ರವಲ್ಲದೆ ಮಧ್ಯಮ ವರ್ಗದವರೂ ಸಹ ಸೈಕಲ್ ಬಳಕೆಗೆ ಮುಂದಾಗಿದ್ದಾರೆ.

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಭಾರತದಲ್ಲಿ ರೂ.30,000ಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಪ್ರೀಮಿಯಂ ಗುಣಮಟ್ಟದ ಬೈಸಿಕಲ್'ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಫೈರ್‌ಫಾಕ್ಸ್ ಟೊಮ್ಯಾಡೊ 27.5 ಡಿ, ಬೆಲೆ: ರೂ.25,000

ಫೈರ್‌ಫಾಕ್ಸ್ ಟೊಮ್ಯಾಡೊ 27.5 ಡಿ ಬೈಸಿಕಲ್'ನಲ್ಲಿ ಚಾರಣದಂತಹ ಸಾಹಸಮಯ ಪ್ರವಾಸಗಳನ್ನು ಕೈಗೊಳ್ಳಬಹುದು. ಈ ಬೈಸಿಕಲ್'ನಿಂದ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಯ ಒರಟು ರಸ್ತೆಗಳಲ್ಲಿಯೂ ಸುಲಭವಾಗಿ ಪ್ರಯಾಣಿಸಬಹುದು.

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಈ ಬೈಸಿಕಲ್'ನಲ್ಲಿ ವಿಶೇಷ ಟಯರ್ ಹಾಗೂ ಸಸ್ಪೆಂಷನ್'ಗಳನ್ನು ನೀಡಲಾಗಿದೆ. ಈ ಬೈಸಿಕಲ್'ನಲ್ಲಿ ಅಲಾಯ್ ಫ್ರೇಮ್, ಶಿಮಾನೋ ಆಲ್ಟಸ್ ಇಎಫ್ 500 ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಬಿಟ್ವಿನ್ ರಾಕ್ ರೈಡರ್ 520 ಎಂಟಿಬಿ, ಬೆಲೆ: ರೂ. 23,999

ಬಿಟ್ವಿನ್ ರಾಕ್ ರೈಡರ್ 520 ಎಂಟಿಬಿ ಬೈಸಿಕಲ್ ಅನ್ನು ಕ್ರೀಡಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಕಾರಣಕ್ಕಾಗಿಯೇ ಕಂಪನಿಯು ಈ ವಾಹನವನ್ನು ಬಿಟ್ವಿನ್ ಇವೊ ಅಲಾಯ್ ಫ್ರೇಮ್‌ನೊಂದಿಗೆ ನಿರ್ಮಿಸಿದೆ.

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಈ ಬೈಸಿಕಲ್'ನಲ್ಲಿ ಹೆಚ್ಚಿನ ಸುರಕ್ಷತಾ ಬ್ರೇಕ್'ಗಾಗಿ ಡ್ಯುಯಲ್ ಹಿಯಾಸ್ ಎಂಎಕ್ಸ್ 5 ಡಿಸ್ಕ್ ಬ್ರೇಕ್'ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಅಡ್ಜಸ್ಟಬಲ್ ಸ್ಯಾಂಟರ್ ಎಕ್ಸ್‌ಸಿಡಿ ಫೋರ್ಕ್ ಅನ್ನು ಆಫ್-ರೋಡ್ ಪ್ರಯಾಣಕ್ಕಾಗಿ ವಿಶೇಷವಾಗಿ ಅಳವಡಿಸಲಾಗಿದೆ. ಈ ಬೈಸಿಕಲ್ ಆಲ್-ರೋಡ್ ಟಯರ್ ಹಾಗೂ 27.5 ಇಂಚಿನ ವ್ಹೀಲ್ ಅನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಫೈರ್‌ಫಾಕ್ಸ್ ರೋಡ್ ರನ್ನರ್ ಪ್ರೊ ಟಿ ಪ್ಲಸ್, ಬೆಲೆ:ರೂ.29,500

ಹದಿಹರೆಯದವರಿಗಾಗಿ ನಿರ್ಮಿಸಲಾದ ಫೈರ್‌ಫಾಕ್ಸ್ ರೋಡ್ ರನ್ನರ್ ಪ್ರೊ ಟಿ ಪ್ಲಸ್ ಹೈಬ್ರಿಡ್ ಬೈಸಿಕಲ್ ನಗರ ಹಾಗೂ ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಈ ಬೈಸಿಕಲ್'ನಲ್ಲಿ ಕಚ್ಚಾ ರಸ್ತೆ, ಹಳ್ಳ ಕೊಳ್ಳ ಹಾಗೂ ಗುಡ್ಡಗಾಡು ರಸ್ತೆಗಳಲ್ಲಿ ಪ್ರಯಾಣಿಸುವುದು ಸುಲಭ. ಈ ಬೈಸಿಕಲ್'ನ ಮುಂಭಾಗದಲ್ಲಿ 40 ಎಂಎಂ ಸಸ್ಪೆಂಷನ್ ಅಳವಡಿಸಲಾಗಿದೆ.

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಈ ಬೈಸಿಕಲ್ ಅನ್ನು 4 ವಿಭಿನ್ನ ಗಾತ್ರದ ಫ್ರೇಮ್'ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಸಿಕಲ್ ಅಡ್ಜಸ್ಟಬಲ್ ಸೀಟ್ ಹಾಗೂ ಹೆಚ್ಚು ಗ್ರಿಪ್ ಹೊಂದಿರುವ ಗ್ರಿಪ್ ಬಾರ್ ಹೊಂದಿದೆ. ಈ ಬೈಸಿಕಲ್ ಅನ್ನು ಕಸರತ್ತು ಮಾಡಲು ಸಹ ಬಳಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಮಾಂಟ್ರಾ ಟ್ರಾನ್ಸ್ 700 ಎಕ್ಸ್ 35 ಸಿ, ಬೆಲೆ:ರೂ.18,350

ಮಾಂಟ್ರಾ ಟ್ರಾನ್ಸ್ 700 ಎಕ್ಸ್ 35 ಸಿ ಬಜೆಟ್ ಹೈಬ್ರಿಡ್ ಬೈಸಿಕಲ್ ಮೊದಲ ಬಾರಿ ಸೈಕಲ್ ತುಳಿಯುವವರಿಗೆ ಸೂಕ್ತವಾಗಿದೆ. ಈ ಬೈಸಿಕಲ್ ಶಿಮಾನೋ ಅಲ್ಟಾಸ್, ಎಸ್‌ಡಿ-ಇಎಫ್ 500, (3 ಎಕ್ಸ್ 7-ಸ್ಪೀಡ್) 27 ಸ್ಪೀಡ್ ಶಿಫ್ಟರ್ ನಂತಹ ವಿವಿಧ ಫೀಚರ್'ಗಳನ್ನು ಹೊಂದಿದೆ.

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಈ ಬೈಸಿಕಲ್ ಹಗುರವಾದ ಅಲ್ಯೂಮಿನಿಯಂ ಅಲಾಯ್ ಫ್ರೇಮ್, 700 ಸಿ ಅಲಾಯ್ ರಿಮ್ ಹಾಗೂ 50 ಎಂಎಂ ಫ್ರಂಟ್ ಸಸ್ಪೆನ್ಷನ್‌ನಂತಹ ವಿಶೇಷ ಘಟಕಗಳನ್ನು ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೂವತ್ತು ಸಾವಿರ ರೂಪಾಯಿಯೊಳಗೆ ಲಭ್ಯವಿರುವ ಪ್ರೀಮಿಯಂ ಬೈಸಿಕಲ್'ಗಳಿವು

ಈ ಬೈಸಿಕಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿಲ್ಲ. ಬದಲಿಗೆ ವಿ ಶೇಪಿನ ಮೆಕಾನಿಕಲ್ ಬ್ರೇಕ್‌ಗಳನ್ನು ಹೊಂದಿದೆ. ಇದರಿಂದಾಗಿ ಈ ಬೈಸಿಕಲ್ ಅನ್ನು ಎಲ್ಲಾ ರೀತಿಯ ರಸ್ತೆಗಳಲ್ಲಿಯೂ ಬಳಸಬಹುದು.

Most Read Articles

Kannada
English summary
Premium bicycles available in India under Rs.30000. Read in Kannada.
Story first published: Saturday, February 13, 2021, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X