ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಿವೋಲ್ಟ್ ಕಂಪನಿಯು ತನ್ನ ರಿವೋಲ್ಟ್ ಆರ್‌ವಿ 400 ಎಲೆಕ್ಟ್ರಿಕ್ ಬೈಕಿಗಾಗಿ ಎರಡನೇ ಸುತ್ತಿನ ಬುಕ್ಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಎಲ್ಲಾ ಯುನಿಟ್'ಗಳು ಮಾರಾಟವಾಗಿವೆ ಎಂದು ಕಂಪನಿ ಪ್ರಕಟಿಸಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಈ ಸುತ್ತಿನ ಬುಕ್ಕಿಂಗ್‌ನಲ್ಲಿ ಕಂಪನಿಯು ಎಲ್ಲಾ ಯುನಿಟ್'ಗಳನ್ನು 2 ಗಂಟೆಗಳಲ್ಲಿ ಮಾರಾಟ ಮಾಡಿದೆ. ಆದರೆ ಈ ಬೈಕಿನ ಎಷ್ಟು ಯುನಿಟ್'ಗಳನ್ನು ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಕಂಪನಿಯು ಮಾಹಿತಿ ನೀಡಿಲ್ಲ. ರಿವೋಲ್ಟ್ ಆರ್‌ವಿ 400 ಬೈಕ್ ಹೆಚ್ಚು ಜನಪ್ರಿಯವಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ರಿವೋಲ್ಟ್ ಕಂಪನಿಯು ಆನ್‌ಲೈನ್‌ ಮೂಲಕ ಈ ಬೈಕ್‌ ಅನ್ನು ಬುಕ್ಕಿಂಗ್ ಮಾಡಿಕೊಳ್ಳುತ್ತದೆ. ಸದ್ಯಕ್ಕೆ ಆರ್‌ವಿ 400 ಬೈಕ್ ಅನ್ನು ದೆಹಲಿ, ಮುಂಬೈ, ಪುಣೆ, ಚೆನ್ನೈ, ಅಹಮದಾಬಾದ್ ಹಾಗೂ ಹೈದರಾಬಾದ್ ಸೇರಿದಂತೆ ಒಟ್ಟು ಆರು ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಹೊಸ ರಿವೋಲ್ಟ್ ಬೈಕ್ ಬುಕ್ಕಿಂಗ್ ಮಾಡುವ ಗ್ರಾಹಕರು ಈ ಬೈಕಿನ ವಿತರಣೆ ಪಡೆಯಲು ನಾಲ್ಕು ತಿಂಗಳು ಕಾಯಬೇಕಾಗುತ್ತದೆ. ಬೈಕಿನ ಕಾಯುವ ಸಮಯವನ್ನು ಕಡಿಮೆ ಮಾಡಲು ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲು ಒತ್ತು ನೀಡುತ್ತಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಭಾರತೀಯ ಮೂಲದ ರಿವೋಲ್ಟ್ ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕುಗಳನ್ನು 2019ರಲ್ಲಿ ಬಿಡುಗಡೆಗೊಳಿಸಿತು. ಕಂಪನಿಯು ಆರ್‌ವಿ 400 ಹಾಗೂ ಆರ್‌ವಿ 300 ಎಲೆಕ್ಟ್ರಿಕ್ ಬೈಕುಗಳನ್ನು ಮಾರಾಟ ಮಾಡುತ್ತದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ರಿವೋಲ್ಟ್ ಆರ್‌ವಿ 400 ಕಂಪನಿಯ ಪ್ರಮುಖ ಬೈಕ್ ಆಗಿದೆ. ಭಾರೀ ಬೇಡಿಕೆ ಹೊಂದಿರುವ ಕಾರಣಕ್ಕೆ ಈ ಬೈಕ್ ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಪೂರ್ತಿಯಾಗಿ ಮಾರಾಟವಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಈ ಬೈಕಿನ ಮೂಲಕ ರೂ.50 ಕೋಟಿ ವಹಿವಾಟು ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಮಾತಿಗೆ ರಿವೋಲ್ಟ್ ಆರ್‌ವಿ 400 ಬೈಕಿನ ಬುಕ್ಕಿಂಗ್ ಪುಷ್ಟಿ ನೀಡಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ದೇಶದಲ್ಲಿ ಪೆಟ್ರೋಲ್ ಬೆಲೆ ರೂ.100 ಗಡಿ ದಾಟಿರುವುದರಿಂದ ಗ್ರಾಹಕರು ಎಲೆಕ್ಟ್ರಿಕ್ ಬೈಕ್ ಖರೀದಿಸುವ ಮೂಲಕ ಭಾರಿ ಉಳಿತಾಯ ಮಾಡಬಹುದು. ಎಲೆಕ್ಟ್ರಿಕ್ ವಾಹನಗಳಿಗೆ ವಿವಿಧ ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿ ಸಹ ಎಲೆಕ್ಟ್ರಿಕ್ ಬೈಕ್‌ಗಳ ಮಾರಾಟ ಹೆಚ್ಚಾಗಲು ಕಾರಣವಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಫೇಮ್ 2 ಯೋಜನೆಯಡಿ ಕೇಂದ್ರ ಸರ್ಕಾರವು ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿರುವುದರಿಂದ ರಿವೋಲ್ಟ್ ಬೈಕಿನ ಬೆಲೆ ರೂ.28,000 ಗಳಷ್ಟು ಕಡಿಮೆಯಾಗಿದೆ. ಬೆಲೆ ಇಳಿಕೆಯ ನಂತರ ರಿವೋಲ್ಟ್ ಆರ್‌ವಿ 400 ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ಬೆಲೆ ರೂ.90,799 ಗಳಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಈ ಹಿಂದೆ ಈ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1,18,999 ಗಳಾಗಿತ್ತು. ಗುಜರಾತ್ ಸರ್ಕಾರದ ಹೊಸ ಎಲೆಕ್ಟ್ರಿಕ್ ವಾಹನ ನೀತಿಯಡಿಯಲ್ಲಿ ಈ ಬೈಕಿನ ಬೆಲೆ ಅಹಮದಾಬಾದ್‌ನಲ್ಲಿ ಎಕ್ಸ್ ಶೋರೂಂ ದರದಂತೆ ರೂ.87,000 ಗಳಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳ ಮೇಲೆ ಸುಮಾರು ರೂ. 25 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಗುಜರಾತ್‌ನಲ್ಲಿ ರೂ.20,000 ಸಬ್ಸಿಡಿ ನೀಡಲಾಗುತ್ತದೆ. ದೆಹಲಿ ಸರ್ಕಾರವು ಎಲೆಕ್ಟ್ರಿಕ್ ಬೈಕ್‌ಗಳ ಮೇಲೆ ಸುಮಾರು ರೂ.16,000 ಗಳ ಸಬ್ಸಿಡಿ ನೀಡಿದರೆ, ಮೇಘಾಲಯದಲ್ಲಿ ರೂ.32,000 ಗಳ ಸಬ್ಸಿಡಿ ನೀಡಲಾಗುತ್ತದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಈ ಬೈಕಿನಲ್ಲಿ ರಿವೋಲ್ಟ್ ಕಂಪನಿಯು 5 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಿದೆ. ಈ ಬೈಕಿನಲ್ಲಿ 3.24 ಕಿ.ವ್ಯಾನ ಸ್ವಾಪಬಲ್ ಬ್ಯಾಟರಿ ಪ್ಯಾಕ್ ನೀಡಲಾಗುತ್ತದೆ. ರಿವೋಲ್ಟ್ ಆರ್‌ವಿ 400 ಬೈಕ್ ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್'ಗಳನ್ನು ಹೊಂದಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಆರ್‌ವಿ 400 ಬೈಕ್

ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 85 ಕಿ.ಮೀಗಳಾಗಿದೆ. ರಿವೊಲ್ಟ್ ಆರ್‌ವಿ 400 ಎಲೆಕ್ಟ್ರಿಕ್ ಬೈಕಿನಲ್ಲಿ ಅಳವಡಿಸಿರುವ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 156 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬ್ಯಾಟರಿ 4.5 ರಿಂದ 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಕಂಪನಿಯು ಈ ಬೈಕ್ ಮೇಲೆ 1.5 ಲಕ್ಷ ಕಿ.ಮೀಗಳ ವಾರಂಟಿ ನೀಡುತ್ತದೆ.

Most Read Articles

Kannada
English summary
RV400 completely sold out within few hours of booking opened. Read in Kannada.
Story first published: Thursday, July 15, 2021, 20:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X