ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ಕಾರಣಕ್ಕೆ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಒಲವು ತೋರುತ್ತಿದ್ದಾರೆ. ಆದರೆ ಪೆಟ್ರೋಲ್, ಡೀಸೆಲ್ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣ ಅತ್ಯಲ್ಪ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಈ ಬೆಳವಣಿಗೆಯನ್ನು ಸಾಧಿಸಬೇಕಾದರೆ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಬೇಕು. ಆದರೂ ಎಲ್ಲಾ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದು ಸದ್ಯಕ್ಕೆ ಅಸಾಧ್ಯವೆಂದೇ ಹೇಳ ಬಹುದು.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಭಾರತದಲ್ಲಿ ಕೆಲವರು ತಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸುತ್ತಿದ್ದಾರೆ. ಆದರೆ ಎಲ್ಲಾ ವಾಹನ ಸವಾರರು ಹೀಗೆ ಮಾಡಿಫೈ ಮಾಡುವುದು ಅಸಾಧ್ಯ. ನಾನಾ ಕಾರಣಗಳಿಗಾಗಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಇನ್ನೂ ಕೆಲವರು ಭಾರೀ ಮೊತ್ತವನ್ನು ಖರ್ಚು ಮಾಡಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಿದ್ದರಿಲ್ಲ. ಕೆಲವು ವಾಹನ ರಿಪೇರಿ ಕೇಂದ್ರಗಳಲ್ಲಿ ಪೆಟ್ರೋಲ್ ಎಂಜಿನ್ ತೆಗೆದು ಎಲೆಕ್ಟ್ರಿಕ್ ಮೋಟರ್ ಗಳನ್ನು ಅಳವಡಿಸಲಾಗುತ್ತದೆ. ಆದರೆ ಬಹುತೇಕ ಜನರು ಈ ರೀತಿಯ ಬದಲಾವಣೆಗೆ ಮುಂದಾಗುವುದಿಲ್ಲ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಸರಿಸಮಾನವಾಗಿ ಮಾರಾಟವಾಗುತ್ತಿವೆ. ಇತ್ತೀಚಿಗೆ ಕಂಪನಿಯೊಂದು ಇಂಗ್ಲೆಂಡಿನಲ್ಲಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಭಿವೃದ್ಧಿಪಡಿಸಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಇದಕ್ಕೆ ಸಂಬಂಧಿಸಿದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. ಕಾಂಟಿನೆಂಟಲ್ ಜಿಟಿ ಬೈಕಿನ ಎಲೆಕ್ಟ್ರಿಕ್ ಮೋಟರ್ ಅನ್ನು ಇಂಗ್ಲೆಂಡ್ ಮೂಲದ ಸಯೆಟಾ ಗ್ರೂಪ್ ಅಭಿವೃದ್ಧಿಪಡಿಸಿದೆ. ಸಯೆಟಾ ಗ್ರೂಪ್ ಎಲೆಕ್ಟ್ರಿಕ್ ವಾಹನಗಳಿಗೆ ಎಲೆಕ್ಟ್ರಿಕ್ ಡ್ರೈವ್ ಸಿಸ್ಟಂ ಅಭಿವೃದ್ಧಿಪಡಿಸುವಲ್ಲಿ ಪರಿಣತಿ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ರಾಯಲ್ ಎನ್ ಫೀಲ್ಡ್ ಬೈಕಿನ ಒಟ್ಟಾರೆ ಕಾರ್ಯಕ್ಷಮತೆ ಹಾಗೂ ವಿಶ್ವಾಸಾರ್ಹತೆಯನ್ನು ಮೌಲ್ಯಮಾಪನ ಮಾಡಲು ಈ ಮಾರ್ಪಡಕವನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತದೆ. ನಿರೀಕ್ಷೆಯಂತೆ ಪರೀಕ್ಷಾ ಫಲಿತಾಂಶಗಳು ಬಂದರೆ ಕಂಪನಿಯು ಇಂತಹ ಹಲವು ಎಲೆಕ್ಟ್ರಿಕ್ ಮೋಟರ್‌ಗಳನ್ನು ಉತ್ಪಾದಿಸಲು ಚಿಂತನೆ ನಡೆಸಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಈ ಎಲೆಕ್ಟ್ರಿಕ್ ಮೋಟರ್‌ಗಳನ್ನು ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ಮಾರಾಟ ಮಾಡಲು ಸಯೆಟಾ ಗ್ರೂಪ್ ನಿರ್ಧರಿಸಿದೆ. ಚೆನ್ನೈನಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ರಾಯಲ್ ಎನ್ ಫೀಲ್ಡ್ ಕಂಪನಿಯು ಸಹ ಎಲೆಕ್ಟ್ರಿಕ್ ಬೈಕ್ ಉತ್ಪಾದಿಸಲು ಸಿದ್ಧತೆ ನಡೆಸುತ್ತಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಈ ಹೊಸ ಎಲೆಕ್ಟ್ರಿಕ್ ಬೈಕ್‌ಗಳು ರಾಯಲ್ ಎನ್‌ಫೀಲ್ಡ್‌ ಬೈಕಿನಂತೆಯೇ ರೆಟ್ರೊ ಲುಕ್ ಹೊಂದುವ ನಿರೀಕ್ಷೆಗಳಿವೆ. ಆದರೆ ರಾಯಲ್ ಎನ್ ಫೀಲ್ಡ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಯಾವಾಗ ಬಿಡುಗಡೆಗೊಳಿಸುತ್ತದೆ ಎಂಬುದು ದೃಢಪಟ್ಟಿಲ್ಲ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ರಾಯಲ್ ಎನ್ ಫೀಲ್ಡ್ ಕಂಪನಿಯು ಸದ್ಯಕ್ಕೆ 350 ಸಿಸಿ - 650 ಸಿಸಿ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಅದೇ ಮಟ್ಟದ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಬೈಕ್‌ಗಳನ್ನು ಉತ್ಪಾದಿಸುತ್ತದೆಯೇ ಎಂಬುದನ್ನು ಕಾದು ನೋಡ ಬೇಕಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ರಾಯಲ್ ಎನ್ ಫೀಲ್ಡ್ ಬೈಕ್ ಗಳ ಪ್ರಮುಖ ಲಕ್ಷಣವೆಂದರೆ ಅವುಗಳ ಶಬ್ದ. ಆದರೆ ಎಲೆಕ್ಟ್ರಿಕ್ ಬೈಕ್‌ಗಳು ಅಷ್ಟು ಶಬ್ದ ಮಾಡುವುದಿಲ್ಲ. ರಾಯಲ್ ಎನ್ ಫೀಲ್ಡ್ ಕಂಪನಿಯು ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಬೇಕು.

ಇನ್ನು ಸಯೆಟಾ ಗ್ರೂಪ್ ಬಗ್ಗೆ ಹೇಳುವುದಾದರೆ, ಕಂಪನಿಯು ಎಲೆಕ್ಟ್ರಿಕ್ ಮೋಟರ್ ಅನ್ನು ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕಿನಲ್ಲಿ ಮಾತ್ರವಲ್ಲದೆ ಭಾರತದಲ್ಲಿ ಮಾರಾಟವಾಗುವ ಹೀರೋ ಎಕ್ಸ್ಟ್ರೀಮ್ ಬೈಕಿನಲ್ಲಿಯೂ ಪರೀಕ್ಷಿಸಿದೆ. ಹೊರ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಸಯೆಟಾದ ಎಲೆಕ್ಟ್ರಿಕ್ ಮೋಟರ್‌ಗಳಲ್ಲಿ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕಿಗಾಗಿ ಎಲೆಕ್ಟ್ರಿಕ್ ಮೋಟರ್ ಅಭಿವೃದ್ಧಿಪಡಿಸಿದ ಸಯೆಟಾ ಗ್ರೂಪ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಹೊರ ತೆಗೆಯಬಹುದಾದ ಬ್ಯಾಟರಿಯನ್ನು ಒದಗಿಸುವುದು ಒಳ್ಳೆಯದು. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಯಾವಾಗಲೂಚಾರ್ಜಿಂಗ್ ಕೇಂದ್ರದ ಬಳಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ ಹೊರ ತೆಗೆಯುವ ಬ್ಯಾಟರಿ ನೀಡುವುದು ಉತ್ತಮ.

Most Read Articles

Kannada
English summary
Saietta develops electric motor for royal enfield continental gt bike details
Story first published: Saturday, August 7, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X