ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

ಕಳೆದ ವರ್ಷ ಕರೋನಾ ವೈರಸ್ ಸಾಂಕ್ರಾಮಿಕವು ದೀಪಾವಳಿಯ ಸಂಭ್ರಮವನ್ನು ಮಸುಕಾಗಿಸಿತ್ತು. ಈ ಬಾರಿ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಹಬ್ಬದ ಉತ್ಸಾಹವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೋಟಾರ್‌ಸೈಕಲ್ ತಯಾರಕ ಕಂಪನಿಗಳು ಹಲವು ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರು ಖರೀದಿಸಬಹುದಾದ 6 ಬೈಕ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

1. 2021 Royal Enfield Classic 350

Royal Enfield ಕಂಪನಿಯು ಅಪ್ ಡೇಟ್ ಮಾಡಿ ಬಿಡುಗಡೆಗೊಳಿಸಿರುವ Classic 350 ಬೈಕ್ ಯುಸಿಇ ಎಂಜಿನ್‌ನೊಂದಿಗೆ ಹಿಂದಿನ ಮಾದರಿಗಿಂತ ಹೆಚ್ಚು ಮುಂದಿದೆ. 2021ರ Classic 350 ಬೈಕ್ ಅನ್ನು ಹೊಸ ಜೆ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿದೆ. Royal Enfield ಕಂಪನಿಯು Meteor 350 ಬೈಕಿನ ನಂತರ Classic 350 ಬೈಕ್ ಅನ್ನು ಈ ಪ್ಲಾಟ್‌ಫಾರಂನಲ್ಲಿ ನಿರ್ಮಿಸಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

ಹೊಸ ತಲೆಮಾರಿನ Classic 350 ಬೈಕ್ ಐಕಾನಿಕ್ ಸಿಲೂಯೆಟ್‌ ಹೊಂದಿದೆ. ಈ ಬೈಕಿನಲ್ಲಿರುವ ಎಲ್ಲಾ ಹೊಸ ಮೆಕ್ಯಾನಿಕಲ್‌ಗಳು ಪ್ರಯಾಣವನ್ನು ಹೆಚ್ಚು ಶ್ರಮವಿಲ್ಲದಂತೆ ಮಾಡುತ್ತವೆ. ಈ ಬೈಕ್ ಮೂರು ಅಂಕಿಗಳ ವೇಗವನ್ನು ಸುಲಭವಾಗಿ ನಿರ್ವಹಿಸುತ್ತದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,84,374 ಗಳಾಗಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

2. KTM RC 200

ಹೊಸ ತಲೆಮಾರಿನ KTM RC 200 ಬೈಕ್ ವಿನ್ಯಾಸ ಹಾಗೂ ಮೆಕ್ಯಾನಿಕಲ್‌ಗಳೆರಡರಲ್ಲೂ ಹಲವಾರು ನವೀಕರಣಗಳನ್ನು ಹೊಂದಿದೆ. ಈ ಬೈಕಿನಲ್ಲಿರುವ ಹೊಸ ಫೇರಿಂಗ್ ಅನ್ನು ಹಳೆಯ ಮಾದರಿಗಿಂತ ಹೆಚ್ಚು ಏರೋ ಡೈನಾಮಿಕ್ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

KTM ಕಂಪನಿಯು ಹೊಸ ಮಾದರಿಯು ರೇಸ್ ಟ್ರ್ಯಾಕ್‌ನ ಅಡಿಯಲ್ಲಿ ಹಗುರ ಹಾಗೂ ಹೆಚ್ಚು ಚುರುಕಾಗಿರುತ್ತದೆ ಎಂದು ಹೇಳಿದೆ. ಈ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.09 ಲಕ್ಷಗಳಾಗಿದೆ. ಈ ಬೈಕ್ ತೀಕ್ಷ್ಣವಾದ ನಿರ್ವಹಣೆ, ಭಾವಪೂರ್ಣ ಮಧ್ಯಮ ಶ್ರೇಣಿಯ ಕಾರ್ಯಕ್ಷಮತೆಯನ್ನು ಹೊಂದಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

3. Yamaha R15 V4

ಈ ದೀಪಾವಳಿಯಲ್ಲಿ ಹೊಸ ಬೈಕ್ ಖರೀದಿಸಲು ಬಯಸುವವರು ಮತ್ತೊಂದು ಹೆಚ್ಚು ಸಾಮರ್ಥ್ಯದ ಫೇರ್ಡ್ ಹೊಸ Yamaha R15 V4 ಬೈಕ್ ಅನ್ನು ಸಹ ಖರೀದಿಸಬಹುದು. ಈ ಬೈಕಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,70,800 ಗಳಾಗಿದೆ. ಹೊಸದಾಗಿ ನವೀಕರಿಸಲಾದ R15 V4 ಬೈಕಿನ ಹೊಸ ವಿನ್ಯಾಸವು Yamaha R15 V3 ಬೈಕಿಗಿಂತ ಹೆಚ್ಚು ಏರೋ ಡೈನಾಮಿಕ್ ಆಗಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

ಆದರೆ ಅಪ್ ಡೇಟ್ ನಂತರ ಈ ಬೈಕಿನ ಪವರ್ ಉತ್ಪಾದನೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಈ ಬೈಕಿನಲ್ಲಿರುವ ಇನ್ವರ್ಟೆಡ್ ಫ್ರಂಟ್ ಫೋರ್ಕ್‌ಗಳು ಈ ಬೈಕಿನ ನಿರ್ವಹಣೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಈ ಬೈಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಕ್ವಿಕ್‌ಶಿಫ್ಟರ್‌ಗಾಗಿ ಕ್ವಿಕ್‌ಶಿಫ್ಟರ್ ಹಾಗೂ ಟ್ರ್ಯಾಕ್‌ನಲ್ಲಿ ಎಷ್ಟು ವೇಗವಾಗಿ ಚಲಿಸಲಾಗಿದೆ ಎಂಬುದನ್ನು ನೋಡಲು ಲ್ಯಾಪ್ ಟೈಮರ್ ಅನ್ನು ಸಹ ಹೊಂದಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

4. TVS Rider

ಪ್ಯಾಸೆಂಜರ್ ಬೈಕ್ ಖರೀದಿಸಲು ಬಯಸುವವರು TVS Motor ಕಂಪನಿಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ Rider ಬೈಕ್ ಅನ್ನು ಖರೀದಿಸಬಹುದು. ಈ ಬೈಕ್‌ನ ಡ್ರಮ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 77,500 ಗಳಾದರೆ, ಡಿಸ್ಕ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 85,469 ಗಳಾಗಿದೆ. TVS Motor ಕಂಪನಿಯು ಈ ಬೈಕಿನಲ್ಲಿ ಹಲವಾರು ಫೀಚರ್ ಗಳನ್ನು ನೀಡಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

TVS ಕಂಪನಿಯು Rider ಬೈಕಿನಲ್ಲಿ ಇಕೋ ಹಾಗೂ ಪವರ್ ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 67 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಅಂಕಿ ಅಂಶಗಳೊಂದಿಗೆ Rider ಬೈಕ್ ಈ ಸೆಗ್ ಮೆಂಟಿನಲ್ಲಿರುವ ಪ್ರಭಾವಶಾಲಿ ಬೈಕ್ ಆಗಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

5. 2021 TVS Apache RTR 200 4V

TVS Apache RTR 200 4V ಸಮರ್ಥವಾದ ಬೈಕ್ ಆಗಿದೆ. 2021 ರಲ್ಲಿ ಅಪ್ ಡೇಟ್ ಮಾಡಲಾದ ಬೈಕ್ ಬಿಡುಗಡೆಗೊಳಿಸುವ ಮೂಲಕ TVS Motor ಕಂಪನಿಯು ಈ ಸರಣಿಯನ್ನು ಮುಂದುವರೆಸಿದೆ. ಈ ಬೈಕ್ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ರೇನ್, ಸಿಟಿ ಹಾಗೂ ಸ್ಪೋರ್ಟ್ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಅಡ್ಜಸ್ಟಬಲ್ ಫ್ರಂಟ್ ಸಸ್ಪೆಂಷನ್, ಅಡ್ಜಸ್ಟಬಲ್ ಬ್ರೇಕ್, ಕ್ಲಚ್ ಲಿವರ್‌ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿಗೆ ಸೂಕ್ತವಾದ ಟಾಪ್ 5 ಬೈಕುಗಳಿವು

ಈ ಹೊಸ ಬೈಕಿನ ಬ್ರೇಕ್‌ಗಳನ್ನು ಸಹ ಸುಧಾರಿಸಲಾಗಿದೆ. ಇವುಗಳು 2021 TVS Apache RTR 200 4V ಬೈಕ್ ಅನ್ನು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿಸಿವೆ.2021 TVS Apache RTR 200 4V ಡ್ಯುಯಲ್ ಚಾನೆಲ್ ಎಬಿಎಸ್ ಆವೃತ್ತಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,38,115 ಗಳಾಗಿದೆ. 2021 TVS Apache RTR 200 4V ಸಹ ಖರೀದಿಗೆ ಸೂಕ್ತವಾದ ಬೈಕ್ ಆಗಿದೆ.

Most Read Articles

Kannada
English summary
Top 5 bikes one could buy during festive season details
Story first published: Friday, November 5, 2021, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X