ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳು ತಮ್ಮದೇ ಆದ ಸ್ಥಾನವನ್ನು ಹೊಂದಿವೆ. ಸ್ಕೂಟರ್‌ಗಳು ಯುವಕ ಹಾಗೂ ಯುವತಿಯರಲ್ಲಿ ಜನಪ್ರಿಯವಾಗಿವೆ. ಭಾರತದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ಈ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳ ಸಂಖ್ಯೆ ತುಸು ಹೆಚ್ಚಾಗಿದೆ ಎಂದು ಹೇಳಬಹುದು. ದೇಶದಲ್ಲಿ ಹಲವು ಕಂಪನಿಗಳ ಸ್ಕೂಟರ್‌ಗಳು ಮಾರಾಟವಾದರೂ ಕೆಲವು ಮಾದರಿ ಸ್ಕೂಟರ್‌ಗಳು ಮಾತ್ರ ಭಾರತೀಯ ಗ್ರಾಹಕರ ಮನಸ್ಸನ್ನು ಸೂರೆಗೊಂಡಿವೆ. ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳು ಯಾವುವು, ಅವುಗಳ ವಿಶೇಷತೆಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

Honda Activa 6 G

Honda Activa 6 G ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಈ ಸ್ಕೂಟರ್ ಸುಮಾರು ಎರಡು ದಶಕಗಳಿಂದ ಭಾರತೀಯರ ನೆಚ್ಚಿನ ಸ್ಕೂಟರ್‌ಗಳಲ್ಲಿ ಒಂದಾಗಿದೆ. Honda Motorcycle and Scooter India ಕಂಪನಿಯು ಈ ಸ್ಕೂಟರ್ ಅನ್ನು ಭಾರತದಲ್ಲಿ 1999 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ಈಗ ಈ ಸ್ಕೂಟರಿನ ಆರನೇ ತಲೆಮಾರಿನ ಆವೃತ್ತಿಯನ್ನು ಮಾರಾಟ ಮಾಡಲಾಗುತ್ತಿದೆ. ಹೊಸ Honda Activa 6 G ಸ್ಕೂಟರ್ ಟೆಲಿಸ್ಕೋಪಿಕ್ ಸಸ್ಪೆಂಷನ್, 12 ಇಂಚಿನ ವ್ಹೀಲ್, ಎಕ್ಸ್'ಟರ್ನಲ್ ರಿಫ್ಯೂಯಲಿಂಗ್ ಮೌತ್ ಪೀಸ್, ಫ್ಯೂಯಲ್ ಇಂಜೆಕ್ಷನ್ ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

Honda Activa 6 G ಸ್ಕೂಟರ್'ನಲ್ಲಿ 110 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 7.68 ಬಿಹೆಚ್‌ಪಿ ಪವರ್ 5,250 ಆರ್‌ಪಿಎಂನಲ್ಲಿ 8.79 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ Honda Activa 6 G ಸ್ಕೂಟರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 69,645 ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

Suzuki Access 125:

Suzuki ಕಂಪನಿಯು 2007 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ Access ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿತು. Access 125 ಸ್ಕೂಟರ್, Honda Activa ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು ಜನಪ್ರಿಯ ಸ್ಕೂಟರ್ ಆಗಿದೆ. Suzuki Access 125 ಸ್ಕೂಟರ್ ಅನ್ನು ಹೆಚ್ಚು ಫೀಚರ್ ಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ಈ ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಬಿಎಸ್ 6 ಎಂಜಿನ್ ಹೊಂದಿದೆ. ಈ ಎಂಜಿನ್ 8.6 ಬಿಹೆಚ್‌ಪಿ ಪವರ್ ಹಾಗೂ 10 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 73,400 ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

TVS NTorq 125:

NTorq 125, TVS ಕಂಪನಿಯ ಅತ್ಯಂತ ಪರಿಣಾಮಕಾರಿ ಸ್ಕೂಟರ್ ಆಗಿದೆ. ಇದೇ ವೇಳೆ ಈ ಸ್ಕೂಟರ್ 125 ಸಿಸಿ ಸೆಗ್ ಮೆಂಟಿನಲ್ಲಿರುವ ಪರಿಣಾಮಕಾರಿ ಸ್ಕೂಟರ್ ಸಹ ಆಗಿದೆ. TVS ಕಂಪನಿಯು ಈ ಸ್ಕೂಟರ್‌ನಲ್ಲಿ 125 ಸಿಸಿಯ 3 ವಾಲ್ವ್ ಎಂಜಿನ್ ಅನ್ನು ಅಳವಡಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ಈ ಎಂಜಿನ್ ಗರಿಷ್ಠ 9.25 ಬಿಹೆಚ್‌ಪಿ ಪವರ್ ಹಾಗೂ 10.25 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. TVS ಕಂಪನಿಯು ಈ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಎಲ್‌ಇಡಿ ಹೆಡ್‌ಲ್ಯಾಂಪ್‌ನಂತಹ ಹೆಚ್ಚುವರಿ ಫೀಚರ್ ಗಳನ್ನು ನೀಡುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

TVS ಕಂಪನಿಯು NTorq 125 ಸ್ಕೂಟರ್ ಅನ್ನು Race XP ಎಂಬ ಮಾದರಿಯಲ್ಲಿ ಮಾರಾಟ ಮಾಡುತ್ತದೆ. ಈ ಮಾದರಿಯು ಗರಿಷ್ಠ 10.1 ಬಿಹೆಚ್‌ಪಿ ಪವರ್ ಹಾಗೂ 10.8 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. NTorq 125 ಸ್ಕೂಟರಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 72,270 ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

TVS Jupiter:

TVS Motor ಕಂಪನಿಯು ತನ್ನ Jupiter ಸ್ಕೂಟರ್ ಅನ್ನು 2013 ರಲ್ಲಿ ಭಾರತದಲ್ಲಿ ಮೊದಲ ಬಾರಿ ಬಿಡುಗಡೆಗೊಳಿಸಿತು. ಈ ಸ್ಕೂಟರ್ ಸತತ ಐದನೇ ವರ್ಷವೂ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಐದನೇ ಸ್ಕೂಟರ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಸ್ಕೂಟರ್ ಹೆಚ್ಚು ವಿಶೇಷ ಸೌಲಭ್ಯಗಳನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ಈ ಸ್ಕೂಟರಿನಲ್ಲಿ ಎಕ್ಸ್'ಟರ್ನಲ್ ಫ್ಯೂಯಲ್ ಟ್ಯಾಂಕ್, ಎಲ್ಇಡಿ ಹೆಡ್ ಲ್ಯಾಂಪ್, 21 ಲೀಟರ್ ಸ್ಟೋರೇಜ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ. TVS Jupiter ಸ್ಕೂಟರ್ ನಲ್ಲಿ ಅಳವಡಿಸಿರುವ 109.7 ಸಿಸಿ ಬಿಎಸ್ 6 ಎಂಜಿನ್ 7.8 ಬಿಹೆಚ್‌ಪಿ ಪವರ್ ಹಾಗೂ 8.8 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

TVS ಕಂಪನಿಯು ಶೀಘ್ರದಲ್ಲಿಯೇ Jupiter ಸ್ಕೂಟರ್ ಅನ್ನು 125 ಸಿಸಿ ಸಾಮರ್ಥ್ಯದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. TVS Jupiter ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 65,673 ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

Ola S 1 Pro:

Ola ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಬಿಡುಗಡೆಗೂ ಮುನ್ನವೇ ಈ ಎಲೆಕ್ಟ್ರಿಕ್ ಸ್ಕೂಟರಿನ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿತ್ತು. ಬುಕ್ಕಿಂಗ್ ಆರಂಭವಾದ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಿದ್ದರು. ಭಾರತದ ಆಟೋ ಮೊಬೈಲ್ ಇತಿಹಾಸದಲ್ಲಿ ವಾಹನವೊಂದಕ್ಕೆ ಇಷ್ಟೊಂದು ಸ್ವಾಗತ ಸಿಗುತ್ತಿರುವುದು ಇದೇ ಮೊದಲು.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಪ್ 5 ಸ್ಕೂಟರ್‌ಗಳಿವು

ಈ ಮೂಲಕ Ola S 1 Pro ದೇಶದ ಅತ್ಯಂತ ಮೆಚ್ಚುಗೆ ಪಡೆದ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 181 ಕಿ.ಮೀಗಳವರೆಗೆ ಚಲಿಸುತ್ತದೆ. Ola ಎಲೆಕ್ಟ್ರಿಕ್ ಸ್ಕೂಟರ್ 50 ಲೀಟರ್ ಸ್ಟೋರೇಜ್, 4 ಜಿ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಎಲ್ಇಡಿ ಹೆಡ್‌ಲೈಟ್‌ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

Most Read Articles

Kannada
English summary
Top five scooters that are popular in indian market details
Story first published: Tuesday, October 5, 2021, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X