ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕನ್ನು ಬಿಡುಗಡೆಗೊಳಿಸಲಿದೆ. ಇದೀಗ ಟ್ರಯಂಫ್ ಕಂಪನಿಯು ತನ್ನ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕಿನ ಡಿಸೈನ್ ಕಾನ್ಸೆಪ್ಟ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಈ ಟೀಸರ್ ಮುಂಬರುವ ಪ್ರೊಡಕ್ಷನ್-ಸ್ಪೆಕ್ ಸೂಪರ್ ಬೈಕ್ ಆಗಿರಬಹುದು. ಹೊಸ ಟೀಸರ್ ಬ್ರಿಟಿಷ್ ಪ್ರೀಮಿಯಂ ಬ್ರ್ಯಾಂಡ್ ಡ್‌ನ ಫೇರ್ಡ್ ಸ್ಪೋರ್ಟ್ಸ್‌ಬೈಕ್‌ಗಾಗಿ ಕಾಯುತ್ತಿರುವ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ, ಹೊಸ ಟೀಸರ್ ವೀಡಿಯೊದಲ್ಲಿ ಡಾರ್ಕ್ ಆಗಿ ಲೂಯೆಟ್‌ನಲ್ಲಿ ಕೆಲವು ತುಣುಕುಗಳನ್ನು ಪ್ರದರ್ಶಿಸಿದೆ. ಈ ಬೈಕಿನ ಮುಂಭಾಗದ ಫಾಸಿಕ ರೆಟ್ರೊ ಸಿಂಗಲ್ ಹೆಡ್‌ಲೈಟ್ ಅನ್ನು ಮುಂಚಿತವಾಗಿ ಹೊಂದಿದೆ, ಇದು ಎಂವಿ ಅಗಸ್ಟಾ ಸೂಪರ್‌ವೊಲೋಸ್ 800 ಅನ್ನು ನೆನಪಿಸುವಂತಿದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಟೀಸರ್ ಪೆಟ್ರೋಲ್ ಟ್ಯಾಂಕ್ ಕೆಳಗೆ ಇರಿಸಿದ ಕಾರ್ಬನ್ ಫೈಬರ್ ಅಸ್ಸೆಂಟ್ ಗಳನ್ನು ಹೊಂದಿದೆ, ಜೊತೆಗೆ ಸೀಟಿನ ಮೇಲೆ ಹೊಲಿದ ವಿನ್ಯಾಸವಿದೆ. ಬೈಕ್‌ನಲ್ಲಿ ಎಲೆಕ್ಟ್ರಾನಿಕ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಫೋರ್ಕ್ಸ್ ಮತ್ತು ಟಿಎಫ್ಟಿ ಸ್ಕ್ರೀನ್ ಡ್ಯಾಶ್ ಇರುತ್ತದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಹೊಸ ಫೇರ್ಡ್ ಟ್ರಯಂಫ್ ಅನ್ನು ಸ್ಪೀಡ್ ಟ್ರಿಪಲ್ 1200ಆರ್‌ಆರ್ ಎಂದು ಕರೆಯಲಾಗುತ್ತದೆ. ಇದು ಮೊದಲೇ ಇರುವ ಸ್ಪೀಡ್ ಟ್ರಿಪಲ್ 1200ಆರ್‌ಎಸ್‌ನಿಂದ ಸ್ಫೂರ್ತಿ ಪಡೆದಂತೆ ತೋರುತ್ತದೆ. ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ಹಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆಯಬಹುದು.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದೇ ರೀತಿ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಕೂಡ ಅಗ್ರೇಸಿವ್ ಲುಕ್ ಅನ್ನು ಹೊಂದಿರುತ್ತದೆ. ಈ ಬೈಕಿನಲ್ಲಿ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಡ್ಯುಯಲ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಇದರೊಂದಿಗೆ ಈ ಬೈಕ್ ತೀಕ್ಷ್ಣವಾದ ಬೆಲ್ಲಿ ಪ್ಯಾನ್, ಕಾರ್ಬನ್-ಫೈಬರ್ ಫ್ರಂಟ್ ಫೆಂಡರ್, ಹಿಂಭಾಗದ ಸೀಟ್ ಕೌಲ್ ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಕಾಂಪ್ಯಾಕ್ಟ್ ಟೈಲ್ ವಿಭಾಗದಿಂದ ಈ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ನೀಡಿದೆ. ಈ ಹೊಸ ಬೈಕ್ ಎಲ್ಲಾ ಹೊಸ ಅಲ್ಯೂಮಿನಿಯಂ ಚಾಸಿಸ್ ಬಳಸಿ ನಿರ್ಮಿಸಲಾಗಿದ್ದು, ಹಳೆಯ ಮಾದರಿಗಿಂತ 10 ಕಿಲೋಗ್ರಾಂಗಳಷ್ಟು ಹಗುರವಾಗಿದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಈಗ ಒಟ್ಟು 198 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ ಫುಲ್ ಎಲ್ಇಡಿ ಲೈಟ್ ಹೊರತಾಗಿ, 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಸಹ ಇತರ ಫೀಚರ್ ಗಳೊಂದಿಗೆ ಬರುತ್ತದೆ. ಇದು 5 ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಸ್ವಿಚ್‌ಗಿಯರ್, ಕೀ ಲೆಸ್ ಇಗ್ನಿಷನ್, ಇಂಟಿಗ್ರೇಟೆಡ್ ಗೋಪ್ರೊ ಕಂಟ್ರೋಲ್ಸ್ ಮತ್ತು ಮೈಟ್ರಿಯಂಫ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನಲ್ಲಿ ಹೊಸ 1160 ಸಿಸಿ ಮೂರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,750 ಆರ್‌ಪಿಎಂನಲ್ಲಿ 178 ಬಿಹೆಚ್‌ಪಿ ಪವರ್ ಮತ್ತು 9000 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಬೈ-ಡೈರಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಪೀಡ್ ಟ್ರಿಪಲ್ ತನ್ನ ಹಿಂದಿನ ಮಾದರಿಗೆ ಹೋಲಿಸಿದರೆ 30 ಬಿಹೆಚ್‌ಪಿ ಪವರ್ ಮತ್ತು 8 ಎನ್ಎಂ ಹೆಚ್ಚು ಟಾರ್ಕ್ ಉತ್ಪಾದಿಸುತದೆ. ಹೊಸ ಎಂಜಿನ್ 7 ಕಿಲೋಗ್ರಾಂಗಳಷ್ಟು ಹಗುರವಾಗಿದೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟಾಪ್-ಸ್ಪೆಕ್ ಓಹ್ಲಿನ್ಸ್ ಎನ್ಐಎಕ್ಸ್ 30 ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಎರಡು ಪ್ರಿ-ಲೋಡ್ ಆಗಿ ಸಂಪೂರ್ಣವಾಗಿ ಹೊಂದಿಸಬಹುದಾಗಿದೆ,

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಇನ್ನು ಈ ಹೊಸ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್, ಕಾರ್ನರಿಂಗ್ ಎಬಿಎಸ್, 6-ಆಕ್ಸಿಸ್ ಐಎಂಯು, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ಸ್,ಟ್ರ್ಯಾಕ್ ಮತ್ತು ರೈಡರ್ ಎಂಬ ರೈಡಿಂಗ್ ಮೋಡ್ ಗಳನ್ನು ಕೂಡ ಒಳಗೊಂಡಿದೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಇನ್ನು ಟ್ರಯಂಫ್ ಮೋಟರ್‌ಸೈಕಲ್ ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಈ ಟ್ರಯಂಫ್ ತನ್ನ ಈ ಹೊಸ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕಿನ ವಿತರಣೆಯನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಪ್ರಾರಂಭಿಸಿದ್ದಾರೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.

ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಟೀಸರ್ ಬಿಡುಗಡೆ

ಇನ್ನು ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಕೂಡ ಅದೇ ರೀತಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಈ ಬೈಕಿನ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಈ ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆಯಿಡಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Triumph motorcycles teased new speed triple 1200rr design prototype details
Story first published: Wednesday, August 18, 2021, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X