Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ Triumph ಮೋಟಾರ್‌ಸೈಕಲ್ಸ್ ತನ್ನ ಹೊಸ Triumph Speed Triple 1200 RR ಬೈಕ್ ಅನ್ನು ಅನಾವರಣಗೊಳಿಸಿದೆ. ರೆಟ್ರೊ ಶೈಲಿಯ ಈ ರೇಸರ್ ಬೈಕ್ ಮೂಲಕ ಕಂಪನಿಯು ತನ್ನ Speed Triple ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. Speed Triple 1200 RR ಬೈಕ್ ಈಗ ಮಾರುಕಟ್ಟೆಯಲ್ಲಿರುವ Triumph ಕಂಪನಿಯ ನೇಕೆಡ್ Speed Triple 1200 RS ಬೈಕ್ ಅನ್ನು ಆಧರಿಸಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಆದರೆ ಕಂಪನಿಯು ಈ ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. Speed Triple 1200 RR ಬೈಕ್ ಸಂಪೂರ್ಣವಾಗಿ ವಿಭಿನ್ನ ನೋಟವನ್ನು ಹೊಂದಿದೆ. Speed Triple 1200 RS ಬೈಕಿನಲ್ಲಿರುವ 160 ಸಿಸಿ, ಇನ್ ಲೈನ್ 3 ಸಿಲಿಂಡರ್ ಎಂಜಿನ್ ಅನ್ನು Triumph Speed Triple 1200 RR ಬೈಕಿನಲ್ಲಿಅಳವಡಿಸಲಾಗಿದೆ. ಈ ಎಂಜಿನ್ 178 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

Triumph ಕಂಪನಿಯು Speed Triple 1200 RR ಬೈಕ್ ಅನ್ನು ಆಧುನಿಕ ಕೆಫೆ ರೇಸರ್ ಆಗಿ ವಿನ್ಯಾಸಗೊಳಿಸಿದೆ. ಮತ್ತೊಂದೆಡೆ Speed Triple 1200 RS ನೇಕೆಡ್ ಬೈಕ್ ಟ್ರ್ಯಾಕ್ ಫೋಕಸ್ಡ್ ಬೈಕ್ ಆಗಿದೆ. Speed Triple 1200 RS ಬೈಕಿಗೆ ಹೋಲಿಸಿದರೆ ಕಂಪನಿಯು ಈ ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಇವುಗಳಲ್ಲಿ ಸಿಂಗಲ್ ರೌಂಡ್ ಹೆಡ್‌ಲೈಟ್ ಸೇರಿದೆ. ಇದನ್ನು Speed Triple 1200 RS ಬೈಕಿನ ಟ್ವಿನ್ ಹೆಡ್‌ಲ್ಯಾಂಪ್ ಯುನಿಟ್'ನಿಂದ ಬದಲಾಯಿಸಲಾಗಿದೆ. ಇದರ ಜೊತೆಗೆ ಈ ಬೈಕ್ ಕ್ಲಿಪ್ ಆನ್ ಹ್ಯಾಂಡಲ್‌ಬಾರ್‌ ಹಾಗೂ ಸ್ಪೋರ್ಟಿ ಲುಕ್ ಗಾಗಿ ರೇರ್ ಫುಟ್‌ಪೆಗ್‌ ಹಾಗೂ ಮುಂದಕ್ಕೆ ಹೆಚ್ಚು ಓರೆಯಾಗುವ ರೈಡಿಂಗ್ ಪೊಸಿಷನ್ ಅನ್ನು ಹೊಂದಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

Speed Triple 1200 RR‌ ಬೈಕಿನಲ್ಲಿ ಕಂಪನಿಯು ಓಹ್ಲಿನ್ಸ್'ನ ಸ್ಮಾರ್ಟ್ ಇಸಿ 2.0 ಎಲೆಕ್ಟ್ರಾನಿಕ್ ಹೊಂದಾಣಿಕೆ ಮಾಡಬಹುದಾದ ಸೆಮಿ-ಆಕ್ಟಿವ್ ಸಿಸ್ಟಂನೊಂದಿಗೆ ಸಸ್ಪೆಂಷನ್ ಅನ್ನು ಅಪ್‌ಗ್ರೇಡ್ ಮಾಡಿದೆ. ಮುಂಭಾಗ ಹಾಗೂ ಹಿಂಭಾಗದ ಸಸ್ಪೆಂಷನ್'ಗಳು ಸಂಪೂರ್ಣ ಹೊಂದಾಣಿಕೆಯಾಗಿವೆ. ಸೆಮಿ ಆಕ್ಟೀವ್ ಸಿಸ್ಟಂ ನಿರಂತರವಾಗಿ ಕುಗ್ಗಿಸುವಿಕೆ ಹಾಗೂ ಮರು ಕಳಿಸುವ ಡ್ಯಾಂಪಿಂಗ್ ಅನ್ನು ರೈಡಿಂಗ್ ಶೈಲಿ, ವೇಗ ಹಾಗೂ ವೇಗವರ್ಧನೆಗೆ ಸರಿ ಹೊಂದಿಸುತ್ತದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಈ ಬೈಕಿನಲ್ಲಿರುವ 17 ಇಂಚಿನ ಕಾಸ್ಟ್ ಅಲ್ಯೂಮಿನಿಯಂ ವ್ಹೀಲ್ ಗಳು Speed Triple 1200 RS ಬೈಕ್ ಅನ್ನು ಅನ್ನು ಹೋಲುತ್ತವೆ. Triumph Speed Triple 1200 RR ಬೈಕಿನಲ್ಲಿ ಪಿರೆಲ್ಲಿ ಡಯಾಬ್ಲೊ ಸೂಪರ್‌ಕೋರ್ಸಾ ಎಸ್‌ಪಿ ವಿ 3 ಟಯರ್‌ಗಳನ್ನು ಬಳಸಲಾಗಿದೆ. ಬ್ರೇಕಿಂಗ್ ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಬೈಕಿನ ಸೀಟ್ ಎತ್ತರವನ್ನು 830 ಎಂಎಂ ನಷ್ಟು ಇರಿಸಲಾಗಿದೆ. ಈ ಬೈಕಿನ ಕರ್ಬ್ ತೂಕ 199 ಕೆ.ಜಿಗಳಾಗಿದೆ. ಈ ಬೈಕಿನಲ್ಲಿರುವ 1160 ಸಿಸಿ ಎಂಜಿನ್ 10,750 ಆರ್‌ಪಿಎಂನಲ್ಲಿ 178 ಬಿಹೆಚ್‌ಪಿ ಪವರ್ ಹಾಗೂ 9,250 ಆರ್‌ಪಿಎಂನಲ್ಲಿ 125 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಬೈಕ್‌ಗಳ ಎಕ್ಸಾಸ್ಟ್ ಸಿಸ್ಟಂ ಒಂದೇ ಆಗಿದೆ. ಆದರೆ Speed Triple 1200 RR ಬೈಕ್ ಬ್ರಶ್ ಮಾಡಿದ ಸ್ಟೇನ್ಲೆಸ್ ಸ್ಟೀಲ್ ಸೈಲೆನ್ಸರ್ ಹಾಗೂ ಕಪ್ಪು ಎಂಡ್ ಕ್ಯಾಪ್‌ಗಳನ್ನು ಹೊಂದಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್‌ಗೆ ಜೋಡಿಸಲಾಗಿದೆ. Speed Triple 1200 RR ಬೈಕ್ ಐದು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರ ಹೊರತಾಗಿ ಈ ಬೈಕ್ ಐಎಂಯು ಅನ್ನು ಹೊಂದಿದೆ. ಇದರಲ್ಲಿ ಎಬಿಎಸ್ ಕಾರ್ನರ್, ಸ್ವಿಚ್‌ಚಬಲ್ ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ಸುಧಾರಿತ ಫ್ರಂಟ್ ವೀಲ್ ಲಿಫ್ಟ್ ಕಂಟ್ರೋಲ್ ಹಾಗೂ ಅಡ್ಜಸ್ಟಬಲ್ ಕ್ರೂಸ್ ಕಂಟ್ರೋಲ್ ಸಿಸ್ಟಂ ನೀಡಲಾಗಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

ಈ ಬೈಕಿನ ಜೊತೆಗೆ Triumph ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಬೈಕುಗಳನ್ನು ಮಾರಾಟ ಮಾಡುತ್ತದೆ. ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ Triumph Motorcycles ಇತ್ತೀಚಿಗೆ ತನ್ನ ಹೊಸ Speed Twin ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ Triumph Speed Twin ಬೈಕಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 10.99 ಲಕ್ಷಗಳಾಗಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

2021ರ Triumph Speed Twin ಬೈಕ್ ಹಲವಾರು ಹೊಸ ಫೀಚರ್ ಗಳನ್ನು ಹೊಂದಿದೆ. Triumph Speed Twin ಬೈಕಿಗಾಗಿ ಪ್ರಿ ಬುಕ್ಕಿಂಗ್ ಗಳನ್ನು ಜೂನ್ ತಿಂಗಳಿನಂದಲೇ ಆರಂಭಿಸಲಾಗಿದೆ. ಈ ಬೈಕ್ ಅನ್ನು ಖರೀದಿಸ ಬಯಸುವ ಗ್ರಾಹಕರು ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಬಹುದು. ಹೊಸ Triumph Speed Twin ಬೈಕ್ ಅನ್ನು ಯುರೋ 5 ಹಾಗೂ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

Speed Triple 1200 RR ಬೈಕ್ ಅನ್ನು ಅನಾವರಗೊಳಿಸಿದ Triumph Motorcycles

Triumph Motorcycles Ltd ಬ್ರಿಟಿಷ್ ಮೂಲದ ಅತಿ ದೊಡ್ಡ ಬೈಕ್ ಕಂಪನಿಯಾಗಿದೆ. 1983 ರಲ್ಲಿ ಜಾನ್ ಬ್ಲೂರ್ ಎಂಬುವವರು ಈ ಕಂಪನಿಯನ್ನು ಸ್ಥಾಪಿಸಿದರು. ಆರಂಭದಲ್ಲಿ ಈ ಕಂಪನಿಯನ್ನು Bonneville Coventry Ltd ಎಂದು ಕರೆಯಲಾಗುತ್ತಿತ್ತು. ಕಂಪನಿಯು ಥೈಲ್ಯಾಂಡ್‌ನಲ್ಲಿ ಪ್ರಮುಖ ಉತ್ಪಾದನಾ ಘಟಕಗಳನ್ನು ಹೊಂದಿದೆ.

Most Read Articles

Kannada
English summary
Triumph motorcycles unveils speed triple 1200 rr bike details
Story first published: Wednesday, September 15, 2021, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X