ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

2021 ರ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಕೆಲವು ಹೊಸ ದ್ವಿಚಕ್ರ ವಾಹನಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ 10 ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

ಅವುಗಳಲ್ಲಿ Yamaha, Aerox 155, Royal Enfield Classic 350 ಸೇರಿದಂತೆ ಹಲವು ದ್ವಿಚಕ್ರ ವಾಹನಗಳು ಸೇರಿವೆ. ಹಾಗಾದರೆದೇಶಿಯ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ದ್ವಿಚಕ್ರ ವಾಹನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Yamaha YZF-R15 M ಹಾಗೂ Aerox 155

Yamaha ಕಂಪನಿಯು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇದರ ಜೊತೆಗೆ Aerox 155 ಸಹ ತನ್ನ ಹೊಸ ವಾಹನವನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Yamaha ಕಂಪನಿಯು ತನ್ನ YZF - R15 M ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಇನ್ನು Aerox 155 ಕಂಪನಿಯು ತನ್ನ ಮ್ಯಾಕ್ಸಿ ಮಾದರಿಯ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Yamaha ಕಂಪನಿಯು YZF-R15 M ಬೈಕ್ ಅನ್ನು ಪ್ರೀಮಿಯಂ ಬೈಕ್ ಆಗಿ ಬಿಡುಗಡೆಗೊಳಿಸಲಿದೆ. ಈ ಬೈಕ್ ಈಗ ಮಾರಾಟದಲ್ಲಿರುವ ಆರ್ 15 ಬೈಕಿನ ಪ್ರೀಮಿಯಂ ಆವೃತ್ತಿಯಾಗಿರಲಿದೆ. ಈ ಹಿನ್ನೆಲೆಯಲ್ಲಿ YZF - R15 M ಸಾಮಾನ್ಯ R 15 ಬೈಕ್ ಮಾದರಿಗಿಂತ ಸ್ವಲ್ಪ ಹೆಚ್ಚು ಫೀಚರ್ ಗಳನ್ನು ಪಡೆಯುವ ನಿರೀಕ್ಷೆಗಳಿವೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

ಅಂದ ಹಾಗೆ ಈ ಬೈಕಿನಲ್ಲಿ ಪ್ರೊಜೆಕ್ಟರ್ ಮಾದರಿಯ ಹೆಡ್ ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ರಿಡಿಸೈನ್ ಮಾಡಲಾದ ಎಕ್ಸಾಸ್ಟ್, ಮುಂಭಾಗದಲ್ಲಿ ಗೋಲ್ಡ್ ಕೋಟೆಡ್ ಯುಎಸ್‌ಡಿ ಫೋರ್ಕ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

ಇನ್ನು Aerox 155 ಕಂಪನಿಯು ತನ್ನ ಮ್ಯಾಕ್ಸಿ ಮಾದರಿಯ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಸ್ಕೂಟರ್ R 15 ಬೈಕಿನಂತೆಯೇ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್, ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲೈಟ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Bajaj ಕಂಪನಿಯ ವಾಹನಗಳು

Yamaha ಕಂಪನಿಯಂತೆಯೇ Bajaj ಕಂಪನಿಯು ತನ್ನದೇ ಆದ ಮೂರು ಹೊಸ ವಾಹನಗಳನ್ನು ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ತನ್ನ Dominor 400, Pulsar NS 250 ಹಾಗೂ Pulsar 250 F ವಾಹನಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Dominor 400

ವರದಿಗಳ ಪ್ರಕಾರ ನವೀಕರಣವಾಗಿ ಹಲವು ಹೊಸ ಫೀಚರ್ ಗಳನ್ನು ಈ ಬೈಕಿನಲ್ಲಿ ಸೇರಿಸಲಾಗಿದೆ. ಟೂರಿಂಗ್ ಶೈಲಿಯ ಈ ವಾಹನವು ಹೊಸ ಹೈ ವಿಸರ್ಸ್, ಹ್ಯಾಂಡ್ ಕ್ವಾರ್ಟ್ಸ್ ಹಾಗೂ ರೇರ್ ವೀವ್ ಮಿರರ್‌ಗಳನ್ನು ಹೊಂದಿದೆ. ಇನ್ನು ಈ ಬೈಕಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Pulsar NS 250

Bajaj ಕಂಪನಿಯು ತನ್ನ Pulsar ಸರಣಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಬೈಕ್‌ಗಳ ಪಟ್ಟಿಯನ್ನು ಹೆಚ್ಚಿಸಲು ನಿರ್ಧರಿಸಿದ್ದು, Pulsar NS 250 ನೇಕೆಡ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಈ ಬೈಕಿನಲ್ಲಿ 250 ಸಿಸಿ ಎಂಜಿನ್ ಅಳವಡಿಸಲಾಗಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Pulsar 250 F

Pulsar 250 F Bajaj ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿರುವ ಮತ್ತೊಂದು 250 ಸಿಸಿ ಬೈಕ್ ಆಗಿದೆ. ಕಂಪನಿಯು ಈ ಬೈಕ್ ಅನ್ನು ಹೊಸ ಶೈಲಿ ಹಾಗೂ ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

KTM ಕಂಪನಿಯ ದ್ವಿಚಕ್ರ ವಾಹನಗಳು

Bajaj ಕಂಪನಿಯಂತೆಯೇ KTM ಕೂಡ ದೇಶಿಯ ಮಾರುಕಟ್ಟೆಯಲ್ಲಿ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇವುಗಳಲ್ಲಿ RC 390 ಬೈಕ್ ಸಹ ಸೇರಿದೆ. ಈ ಬೈಕ್ 373.3 ಸಿಸಿ ಎಕ್ಸಾಸ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 40.5 ಬಿ‌ಹೆಚ್‌ಪಿ ಪವರ್ ಹಾಗೂ 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

ಈ ಬೈಕ್ ಒಂದು ಸ್ಪ್ಲಿಟ್ ಟ್ರಯಲ್ ಫ್ರೇಮ್ ಹಾಗೂ ಹೊಸ ವಿನ್ಯಾಸದ ಫೀಚರ್ ಅನ್ನು ಸಹ ಹೊಂದಿದೆ. ಇತ್ತೀಚಿಗೆ ಬಿಡುಗಡೆಯಾದ ಈ ಬೈಕಿನ ಸ್ಪೈ ಚಿತ್ರಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

ಹೊಸ ತಲೆಮಾರಿನ RC 200 ಬೈಕ್ RC 390 ಬೈಕಿನ ವಿನ್ಯಾಸದ ಫೀಚರ್ ಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಬೈಕಿನಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಈ ಬೈಕ್ ಸ್ಪೋರ್ಟಿ ಎಕ್ಸಾಸ್ಟ್ ಹಾಗೂ ಎಲ್ಇಡಿ ಸ್ಕ್ರೀನ್ ಗಳನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

RC 125 KTM ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಮೂರನೇ ವಾಹನವಾಗಿದೆ. KTM ಕಂಪನಿಯು RC ಸರಣಿಯ ಬೈಕುಗಳನ್ನು ಬಲಪಡಿಸಲುಭಾರತದಲ್ಲಿ RC 125 ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಬೈಕಿನಲ್ಲಿ ಎಲ್‌ಸಿ‌ಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್ ಚಾನೆಲ್ ಎಬಿಎಸ್ ನಂತಹ ಫೀಚರ್ ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

TVS Apache RR 310

ಮಾರುಕಟ್ಟೆಯಲ್ಲಿರುವ ಪೈಪೋಟಿಗೆ ತಕ್ಕಂತೆ TVS ಕಂಪನಿಯು ತನ್ನ ಅಪಾಚೆ ಆರ್ ಆರ್ 310 ಬೈಕ್ ಅನ್ನು ಅಪ್ ಡೇಟ್ ಮಾಡುತ್ತಿದೆ. ಹೊಸ ಅಪ್‌ಡೇಟ್ ಮೂಲಕ ಈ ಬೈಕ್‌ನಲ್ಲಿ ವಿವಿಧ ಫೀಚರ್‌ಗಳನ್ನು ನೀಡುವ ನಿರೀಕ್ಷೆಗಳಿವೆ. TVS Apache RR 310 ಬೈಕ್ ಅಡ್ಜಸ್ಟಬಲ್ ಫ್ರಂಟ್ ಸಸ್ಪೆಂಷನ್ ಹಾಗೂ ರಿಡಿಸೈನ್ ಮಾಡಲಾದ ಹೆಡ್‌ಲ್ಯಾಂಪ್ ಅನ್ನು ಹೊಂದಿರಲಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

ಆದರೆ ಎಂಜಿನ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿದು ಬಂದಿದೆ. ಈ ಬೈಕ್ 313.2 ಸಿಸಿ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 31 ಬಿ‌ಹೆಚ್‌ಪಿ ಪವರ್ ಹಾಗೂ 27.3 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ವಿವಿಧ ದ್ವಿಚಕ್ರ ವಾಹನಗಳಿವು

Royal Enfield Classic 350

Royal Enfield Classic 350 ಭಾರತದಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಈ ಬೈಕ್ ಅನ್ನು ಸೆಪ್ಟೆಂಬರ್ 1 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ಬೈಕಿನ ಹಲವು ಅಪ್ ಡೇಟ್ ಗಳನ್ನು ಮಾಡಲಾಗಿದೆ ಎಂದು ವರದಿಗಳಾಗಿವೆ.ಇದರಿಂದ ಈ ಬೈಕ್ ಮೇಲಿರುವ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Most Read Articles

Kannada
English summary
Two wheelers launching during diwali in indian market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X