ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಕರ್ನಾಟಕವೂ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೇರಳ ರಾಜ್ಯದ ಬಹುತೇಕ ಭಾಗಗಳು ಭಾರೀ ಮಳೆಗೆ ತತ್ತರಿಸಿವೆ. ದೇಶದ ವಿವಿಧ ಭಾಗಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿವೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಈ ಸಂದರ್ಭದಲ್ಲಿ ಜನರು ಸುರಕ್ಷಿತವಾಗಿರುವುದರ ಜೊತೆಗೆ ವಾಹನಗಳನ್ನೂ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯ ಎಂದು ವಾಹನ ತಜ್ಞರು ಸಲಹೆ ನೀಡುತ್ತಾರೆ. ಮಳೆ ನೀರು ಇರುವ ಪ್ರದೇಶಗಳು ಹೆಚ್ಚು ಅಪಾಯಕಾರಿಯಾಗಿದ್ದು, ವಾಹನಗಳಿಗೆ ಹೆಚ್ಚು ಹಾನಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೂ ಕೆಲವರು ಮಳೆಯಿಂದ ಜಲಾವೃತವಾಗಿರುವ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುತ್ತಾರೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಇತ್ತೀಚಿಗೆ ಮಳೆಯಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಚಲಿಸಿದ ಯುವಕನೊಬ್ಬನ ಬೈಕ್ ಹಾನಿಗೀಡಾಗಿದೆ. ಈ ಯುವಕನ ಬೈಕ್ ಎಂಜಿನ್ ಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಯುವಕ ಚಾಲನೆ ಮಾಡುತ್ತಿದ್ದ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕಿನ ಎಂಜಿನ್ ಮಳೆ ನೀರಿನಿಂದ ಹಾಳಾಗಿದೆ. ಬೇರೆಯವರು ಮಳೆ ನೀರಿನಲ್ಲಿ ವಾಹನ ಚಾಲನೆ ಮಾಡಿ ಸಂಕಷ್ಟಕ್ಕೆ ಸಿಲುಕದೇ ಇರಲಿ ಎಂಬ ಕಾರಣಕ್ಕೆ ಈ ಲೇಖನವನ್ನು ಪ್ರಕಟಿಸಲಾಗುತ್ತಿದೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಯುವಕ ಮಳೆ ನೀರಿನಲ್ಲಿ ಬೈಕ್ ಚಾಲನೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಯುವಕ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಲ್ಲಿ ಚಾಲನೆ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಮುಂದಿನ ದೃಶ್ಯದಲ್ಲಿ ಬೈಕ್ ಮೆಕಾನಿಕ್ ಎಂಜಿನ್ ಒಳಗಿನಿಂದ ಮಳೆ ನೀರು ಹೊರ ಸೂಸುವ ದೃಶ್ಯಗಳನ್ನು ಕಾಣಬಹುದು.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಜಲಾವೃತವಾಗಿರುವ ರಸ್ತೆಗಳು ವಾಹನಗಳ ದೊಡ್ಡ ಶತ್ರು. ಇವು ವಾಹನಗಳಿಗೆ ಹಾನಿಯನ್ನುಂಟು ಮಾಡುವುದರ ಜೊತೆಗೆ ರಿಪೇರಿಗೆ ಹೆಚ್ಚು ಖರ್ಚು ಮಾಡುವಂತೆ ಮಾಡುತ್ತವೆ. ಆದರೂ ಕೆಲವರು ಅವಶ್ಯಕತೆಯಿಲ್ಲದಿದ್ದರೂ ಮಳೆ ನೀರಿನಲ್ಲಿ ವಾಹನ ಚಾಲನೆ ಮಾಡುತ್ತಾರೆ. ಅಂತಹವರಿಗೆ ಈ ಘಟನೆ ಎಚ್ಚರಿಕೆ ಎಂದೇ ಹೇಳಬಹುದು. ಬೈಕುಗಳು ಎತ್ತರದ ಜಲಮಾರ್ಗದಲ್ಲಿ ಚಲಿಸುವಾಗ ವಾಹನದ ಏರ್ ಇನ್ ಟೇಕ್ ಪ್ರದೇಶದ ಮೂಲಕ ಮಳೆ ನೀರು ಹರಿಯುತ್ತದೆ.

ಇದರಿಂದ ವಾಹನಗಳ ರಿಪೇರಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಎತ್ತರವಾಗಿರುವ ಬೈಕ್ ಆಗಿದೆ. ಈ ಬೈಕ್ 790 ಎಂಎಂ ಎತ್ತರವನ್ನು ಹೊಂದಿದೆ. ಆದರೂ ಈ ಬೈಕಿನ ಏರ್ ಇನ್ ಟೇಕ್ ರಂಧ್ರವು 100 ಎಂಎಂ ಎತ್ತರದಲ್ಲಿದೆ. ಇದರಿಂದ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಮಳೆ ನೀರಿನಿಂದ ಸುಲಭವಾಗಿ ಹಾಳಾಗುತ್ತದೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್:

ಬೈಕ್ ಪ್ರವಾಸ ಹಲವು ಜನರ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಸಾಮಾನ್ಯವಾಗಿ ದೂರದ ಪ್ರವಾಸಕ್ಕೆ ತೆರಳುವವರು ಕ್ರೂಸರ್ ಬೈಕ್ ಅಥವಾ ಅಡ್ವೆಂಚರ್ ಟೂರಿಂಗ್ ಬೈಕ್‌ಗಳನ್ನು ಬಳಸುತ್ತಾರೆ. ಕ್ರೂಸರ್ ಬೈಕ್‌ಗಳಲ್ಲಿ ವಿಂಡ್‌ಶೀಲ್ಡ್'ಗಳನ್ನು ಗಮನಿಸಬಹುದು. ಬೈಕ್‌ಗಳಲ್ಲಿ ಅಳವಡಿಸುವ ವಿಂಡ್‌ಶೀಲ್ಡ್'ಗಳಿಂದ ಹಲವಾರು ಪ್ರಯೋಜನಗಳಿವೆ. ಆ ಪ್ರಯೋಜನಗಳು ಯಾವುವು ಎಂಬುದನ್ನು ನೋಡುವುದಾದರೆ, ಬೈಕ್‌ಗಳಲ್ಲಿರುವ ವಿಂಡ್‌ಶೀಲ್ಡ್'ಗಳು ಮುಂಭಾಗದಿಂದ ಬರುವ ಗಾಳಿಯನ್ನು ನಿರ್ಬಂಧಿಸುತ್ತವೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ವಿಂಡ್‌ಶೀಲ್ಡ್'ಗಳನ್ನು ಬೈಕ್ ಹಾಗೂ ಸವಾರನ ಸುತ್ತಲೂ ಬರುವ ಗಾಳಿ ಹರಡುವುದನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ವಿಶಾಲವಾದ ವಿಂಡ್‌ಶೀಲ್ಡ್ ಮುಂಭಾಗದಿಂದ ಗಾಳಿ ಬೈಕ್ ಸವಾರನತ್ತ ಬರುವುದನ್ನು ತಡೆಯುತ್ತದೆ. ವಿಂಡ್‌ಶೀಲ್ಡ್ ಮುಂಭಾಗದಿಂದ ಬರುವ ಬಲವಾದ ಗಾಳಿಯ ಹೊರತಾಗಿ ಬೈಕ್‌ ಸವಾರನನ್ನು ಶಾಖ ಹಾಗೂ ಶೀತದಿಂದ ಸಹ ರಕ್ಷಿಸುತ್ತದೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಶೀತ ವಾತಾವರಣದಲ್ಲಿ ಬೈಕ್ ಸವಾರಿ ಮಾಡುವಾಗ ತಾಪಮಾನವು ಬೈಕ್‌ನ ತಾಪಮಾನಕ್ಕಿಂತ ಕಡಿಮೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ ವಿಂಡ್‌ಶೀಲ್ಡ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಳೆಗಾಲದಲ್ಲಿ ವಿಂಡ್‌ಶೀಲ್ಡ್ ಇಲ್ಲದ ಬೈಕ್ ಚಾಲನೆ ಮಾಡುವುದು ಕಷ್ಟ. ಮಳೆ ಬೀಳುವಾಗ ಗೋಚರತೆ ಕಡಿಮೆಯಾಗುತ್ತದೆ. ಹೆಲ್ಮೆಟ್ ಧರಿಸಿದರೂ ನೋಡುವುದಕ್ಕೆ ಸಮಸ್ಯೆಯಾಗುತ್ತದೆ. ದೊಡ್ಡ ಗಾತ್ರದ ವಿಂಡ್‌ಶೀಲ್ಡ್ ಮಳೆಯಿಂದ ಬೈಕ್ ಸವಾರನಿಗೆ ಹೆಚ್ಚು ರಕ್ಷಣೆ ನೀಡುತ್ತದೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಕೆಲವೊಮ್ಮೆ ಬೈಕ್ ಸವಾರನು ತಾಜಾ ಗಾಳಿಗಾಗಿ ಹೆಲ್ಮೆಟ್ ಗ್ಲಾಸ್ ತೆರೆದಾಗ ರಸ್ತೆಯ ಮೇಲೆ ಹಾರುವ ವಸ್ತುಗಳು ಕಣ್ಣಿಗೆ ಬೀಳುವ ಸಾಧ್ಯತೆಗಳಿರುತ್ತವೆ. ದೊಡ್ಡ ಗಾತ್ರದ ವಿಂಡ್‌ಶೀಲ್ಡ್ ಬೈಕ್ ಸವಾರನಿಗೆ ಈ ರೀತಿಯ ವಸ್ತುಗಳು ಬೀಳದಂತೆ ತಡೆಯುತ್ತದೆ. ದೂರದ ಪ್ರಯಾಣದಲ್ಲಿ ಗಾಳಿ ಬೈಕ್ ಸವಾರನನ್ನು ಆಯಾಸಗೊಳಿಸುತ್ತದೆ. ಮುಂಭಾಗದಿಂದ ಬರುವ ಗಾಳಿಗೆ ಹೊಂದಾಣಿಕೆಯಾಗಲು ಬೈಕ್ ಸವಾರ ಪರದಾಡ ಬೇಕಾಗುವುದರಿಂದ ಹೆಚ್ಚು ಆಯಾಸವಾಗುತ್ತದೆ. ಈ ವೇಳೆ ಬೈಕ್‌ನಲ್ಲಿರುವ ದೊಡ್ಡ ಗಾತ್ರದ ವಿಂಡ್‌ಶೀಲ್ಡ್ ನೆರವಿಗೆ ಬರುತ್ತದೆ.

ಭಾರೀ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಜಲಾವೃತ ರಸ್ತೆಗಳಲ್ಲಿನ ವಾಹನ ಚಾಲನೆ

ಬೈಕ್ ಚಾಲನೆ ಮಾಡುವಾಗ ಸವಾರನಿಗೆ ಸಾಕಷ್ಟು ಶಬ್ದ ಕೇಳಿ ಬರುತ್ತದೆ. ಒಪನ್ ಫೇಸ್ ಹೆಲ್ಮೆಟ್‌ಗಳನ್ನು ಬಳಸುವ ಬೈಕ್ ಸವಾರರಿಗೆ ಈ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ವಿಂಡ್‌ಶೀಲ್ಡ್ ಬಳಕೆಯು ಮುಂಭಾಗದಿಂದ ಬರುವ ಗಾಳಿಯ ಶಬ್ದವನ್ನು ಕಡಿಮೆ ಮಾಡುತ್ತದೆ. ವಿಂಡ್‌ಶೀಲ್ಡ್'ಗಳು ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿರುತ್ತವೆ. ಇದರಿಂದ ಬಹುತೇಕ ಸಂದರ್ಭಗಳಲ್ಲಿ ಬೈಕ್ ಗಾಳಿಯ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಚಲಿಸಲು ಸಾಧ್ಯವಾಗುತ್ತದೆ. ಜೊತೆಗೆ ಸುಗಮ ಮೇಲ್ಮೈ ಗಾಳಿಯ ಮೂಲಕ ಹೆಚ್ಚು ಇಂಧನ ದಕ್ಷತೆಗೂ ಕಾರಣವಾಗುತ್ತದೆ.

Most Read Articles

Kannada
English summary
Vehicles movement in waterlogged roads can create big problems details
Story first published: Monday, October 25, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X