ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ ಯಮಹಾ

ಜಪಾನ್ ದ್ವಿಚಕ್ರ ವಾಹನ ಕಂಪನಿಯಾಗಿರುವ ಯಮಹಾ ತನ್ನ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಇ-01 ಮತ್ತು ಇಸಿ-05 ಮಾದರಿಗಳನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು ಮುಂದಿನ ಕೆಲವೇ ದಿನಗಳಲ್ಲಿ ಉತ್ಪಾದನಾ ಮಾದರಿಯೊಂದಿಗೆ ರಸ್ತೆಗಿಳಿಯಲಿವೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಯಮಹಾ ಕೂಡಾ ತನ್ನ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳನ್ನು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಇವಿ ಸ್ಕೂಟರ್ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಂಡಿವೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಹೊಸ ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮೊದಲ ಬಾರಿಗೆ ಟೊಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶನ ಮಾಡಿದ್ದ ಯಮಹಾ ಕಂಪನಿಯು ಈಗಾಗಲೇ ಟ್ರೇಡ್‌ಮಾರ್ಕ್ ಸಲ್ಲಿಕೆ ಮಾಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಯಮಹಾ ಮೋಟಾರ್‌ಸೈಕಲ್ ಕಂಪನಿಯು ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಜಾಲ ಹೊಂದಿದ್ದು, ಭಾರತದಲ್ಲೂ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುವ ಯೋಜನೆಯಲ್ಲಿದೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುವ ಮೂಲಕ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಮೀಸಲಿಡಲು ಸಹಕಾರಿಯಾಗಲಿದ್ದು, ಹೊಸ ಯೋಜನೆಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುವ ತವಕದಲ್ಲಿದೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಯಮಹಾ ಕಂಪನಿಯು ಸದ್ಯ ಅನಾವರಣಗೊಳಿಸಿರುವ ಹೊಸ ಸ್ಕೂಟರ್‌ಗಳು 125ಸಿಸಿ ಸಾಮರ್ಥ್ಯದ ಮ್ಯಾಕ್ಸಿ ಸ್ಕೂಟರ್‌ಗಳ ಶೈಲಿಯಲ್ಲಿ ನಿರ್ಮಾಣವಾಗುತ್ತಿದ್ದ, ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪೆಟ್ರೋಲ್ ಸ್ಕೂಟರ್‌ಗಳಿಂತಲೂ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಎಬಿಎಸ್, ಸ್ವಾಪ್ ಬ್ಯಾಟರಿ, ಜಿಯೋ ಫೆನ್ಸಿಂಗ್, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯಗಳ ಜೊತೆ ಹಲವಾರು ತಾಂತ್ರಿಕ ಅಂಶಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಸ್ಕೂಟರ್‌ಗಳನ್ನು ಜಾಗತಿಕ ಮಾರುಕಟ್ಟೆಗಳನ್ನು ಗುರಿಯಾಗಿಸಿ ಅಭಿವೃದ್ದಿಗೊಳಿಸಿದೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿಗಾಗಿ ತೈವಾನ್ ಮೂಲದ ಇ-ಸ್ಕೂಟರ್ ತಯಾರಕರಾದ ಗೊಗೊ ಜೊತೆಗೆ ಸಹಭಾಗಿತ್ವ ಹೊಂದಿರುವ ಯಮಹಾ ಕಂಪನಿಯು ಹೊಸ ಯೋಜನೆ ಅಡಿ ಹಲವಾರು ಹೊಸ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಗೊಗೊ ಕಂಪನಿಯು ಈಗಾಗಲೇ ಹಲವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮಾಡುವ ಮೂಲದ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದು, ಯಮಹಾ ಕಂಪನಿಯು ಇದೀಗ ಗೊಗೊ ಜೊತೆಗೂಡಿ ಜಾಗತಿಕ ಮಾರುಕಟ್ಟೆಗಾಗಿ ವಿವಿಧ ಮಾದರಿಯ ಇವಿ ಮಾದರಿಗಳನ್ನು ಸಿದ್ದಪಡಿಸುತ್ತಿದೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಹೊಸ ಸಹಭಾಗಿತ್ವ ಯೋಜನೆ ಅಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿದ್ದು, ಹೊಸ ಸ್ಕೂಟರ್‌ಗಳು ಈ ವರ್ಷದ ಕೊನೆಯಲ್ಲಿ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಲಿದೆ ಯಮಹಾ

ಹೊಸ ಇವಿ ಸ್ಕೂಟರ್‌ಗಳ ಬಗೆಗೆ ಯಾವುದೇ ನಿಖರವಾದ ತಾಂತ್ರಿಕ ಅಂಶಗಳಿಲ್ಲವಾದರೂ ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳು ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದ್ದಲ್ಲಿ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್‌ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿವೆ.

Most Read Articles

Kannada
Read more on ಯಮಹಾ yamaha
English summary
Yamaha Motor India Working On New EV Platform. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X