ಯುಲು ಕಂಪನಿಗಾಗಿ ಹೊಸ ಇವಿ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ಕಂಪನಿಯಾಗಿರುವ ಯುಲು ಶೀಘ್ರದಲ್ಲೇ ಮತ್ತಷ್ಟು ಹೊಸ ಮಾದರಿಯ ಇವಿ ಸ್ಕೂಟರ್‌ಗಳನ್ನು ಗ್ರಾಹಕರ ಸೇವೆಗೆ ಪರಿಚಯಿಸುತ್ತಿದ್ದು, ಹೊಸ ಸ್ಕೂಟರ್ ಉತ್ಪಾದನೆಗಾಗಿ ಕಂಪನಿಯು ಬಜಾಜ್ ಆಟೋ ಜೊತೆಗೂಡಿದೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಹೆಚ್ಚುತ್ತಿರುವ ಮಾಲಿನ್ಯ ಮತ್ತು ಇಂಧನಗಳ ದರ ಪರಿಣಾಮ ವಾಹನ ಸವಾರರು ಎಲೆಕ್ಟ್ರಿಕ್ ಮಾದರಿಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಬಾಡಿಗೆಗೆ ನೀಡುವ ಯುಲು ಕಂಪನಿಯು ಸದ್ಯ ಬೆಂಗಳೂರಿನಂತಹ ಮಾಹಾನಗರಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಸದ್ಯ ಬಾಡಿಗೆ ವಾಹನ ಮಾದರಿಯಲ್ಲಿ ಯುಲು ಕಂಪನಿಯು ಮಿರಾಕಲ್ ಎನ್ನುವ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಳಕೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಶೀಘ್ರದಲ್ಲೇ ಮತ್ತಷ್ಟು ಇವಿ ಸ್ಕೂಟರ್‌ಗಳನ್ನು ಬಾಡಿಗೆ ವಾಹನಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುತ್ತಿದೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಸದ್ಯ ಬೆಂಗಳೂರು, ದೆಹಲಿ, ಮುಂಬೈ, ಪುಣೆ ಮತ್ತು ಭುವನೇಶ್ವರದಲ್ಲಿ ಬಾಡಿಗೆ ವಾಹನಗಳ ಕಾರ್ಯಾಚರಣೆ ಹೊಂದಿರುವ ಯುಲು ಕಂಪನಿಯು ಮಿರಾಕಲ್ ಮಾದರಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಳೆದ 1 ವರ್ಷದಲ್ಲಿ ಶೇ.3 ರಷ್ಟು ಲಾಭಾಂಶ ಪಡೆದುಕೊಂಡಿದೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಸದ್ಯ ಕಾರ್ಯಾಚರಣೆಯಲ್ಲಿರುವ ಮಿರಾಕಲ್ ಲೋ ಸ್ಪೀಡ್ ಸ್ಕೂಟರ್ ಮಾದರಿಯನ್ನು ಚೀನಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡಿದ್ದ ಯುಲು ಕಂಪನಿಯು ಮುಂಬರುವ ಹೊಸ ಯೋಜನೆಗಾಗಿ ಬಜಾಜ್ ಆಟೋ ಕಂಪನಿಯೊಂದಿಗೆ ಸಹಭಾಗಿತ್ವ ಘೋಷಿಸಿದೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಯುಲು ಕಂಪನಿಯು ಮಿರಾಕಲ್ ವಾಹನ ಜೊತೆಗೆ ಇನ್ನು ನಾಲ್ಕು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರ ಬೇಡಿಕೆಯೆಂತೆ ಅಭಿವೃದ್ದಿಗೊಳಿಸಲು ನಿರ್ಧರಿಸಿದ್ದು, ಬಜಾಜ್ ಕಂಪನಿಯು ಯುಲು ಕಂಪನಿಗಾಗಿ ಪ್ರತ್ಯೇಕ ಇವಿ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಲಿದೆ. ಬಜಾಜ್ ಉತ್ಪಾದನೆ ಮಾಡುವ ಇವಿ ಸ್ಕೂಟರ್‌ಗಳು ಯುಲು ಕಂಪನಿಗೆ ಮಾತ್ರ ಸೀಮಿತವಾಗಿರಲಿದ್ದು, ಹೊಸ ಸ್ಕೂಟರ್‌ಗಳು ಕಂಪನಿಯ ಬೇಡಿಕೆಯೆಂತೆ ಹಲವಾರು ಹೊಸ ವೈಶಿಷ್ಯತೆಗಳನ್ನು ಪಡೆದುಕೊಳ್ಳಲಿವೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಯುಲು ಕಂಪನಿಯು ಹೊಸ ಇವಿ ಸ್ಕೂಟರ್‌ಗಳನ್ನು ಕಾರ್ಪೊರೆಟ್ ಉದ್ಯೋಗಿಗಳಿಗಾಗಿ ಪ್ರತ್ಯೇಕ ವಾಹನಗಳನ್ನು, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಇವಿ ಸ್ಕೂಟರ್‌ಗಳನ್ನು ಮತ್ತು ವಾಣಿಜ್ಯ ಬಳಕೆಗಾಗಿ ಬೇಡಿಕೆ ಸಲ್ಲಿಸುವ ಗ್ರಾಹಕರಿಗಾಗಿಯೇ ಪ್ರತ್ಯೇಕ ಇವಿ ಸ್ಕೂಟರ್‌ಗಳನ್ನು ಅಭಿವೃದ್ದಿಗೊಳಿಸಲು ನಿರ್ಧರಿಸಿದೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಹೊಸ ಇವಿ ಸ್ಕೂಟರ್‌ಗಳ ಉತ್ಪಾದನೆಗಾಗಿ ಈಗಾಗಲೇ ಹಲವಾರು ಮಾರುಕಟ್ಟೆ ಅಧ್ಯಯನಗಳನ್ನು ನಡೆಸಿರುವ ಯುಲು ಕಂಪನಿಯು ಈ ವರ್ಷಾಂತ್ಯಕ್ಕೆ ಬಾಡಿಗೆ ಇವಿ ಸ್ಕೂಟರ್‌ಗಳ ಸಂಖ್ಯೆಯನ್ನು 10 ಸಾವಿರದಿಂದ 50 ಸಾವಿರಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಸದ್ಯ ಮಾರುಕಟ್ಟೆಯಲ್ಲಿರುವ ಮಿರಾಕಲ್ ಇವಿ ವಾಹನ ಬಳಕೆ ಮಾಡುತ್ತಿರುವ ಗ್ರಾಹಕರಲ್ಲಿ ಶೇ.80 ರಷ್ಟು ಜನ ಕಾರ್ಪೊರೇಟ್ ಉದ್ಯೋಗಿಗಳನ್ನು ಒಳಗೊಂಡಿದ್ದರೆ ಶೇ. 20 ರಷ್ಟು ಜನ ವಿದ್ಯಾರ್ಥಿಗಳು ಇವಿ ಸ್ಕೂಟರ್ ಬಳಕೆ ಮಾಡುತ್ತಿದ್ದಾರೆ.

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಯುಲು ಸ್ಕೂಟರ್ ಬಳಕೆ ಮಾಡುವ ಗ್ರಾಹಕರಲ್ಲಿ ಶೇ. 90 ರಷ್ಟು ಗ್ರಾಹಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶವನ್ನು ತಲುಪುವ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದರೆ ಇನ್ನು ಶೇ.10 ರಷ್ಟು ಗ್ರಾಹಕರು ಮನರಂಜನೆಯ ಉದ್ದೇಶದಿಂದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಯ್ಕೆ ಮಾಡುತ್ತಿದ್ದಾರೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಯುಲು ಕಂಪನಿಗೆ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಲಿದೆ ಬಜಾಜ್ ಆಟೋ

ಇದರಲ್ಲಿ ಕಾರ್ಪೊರೇಟ್ ಉದ್ಯೋಗಿಗಳು ಇನ್ನು ಹೆಚ್ಚಿನ ಮಟ್ಟದ ವೇಗದ ಸ್ಕೂಟರ್‌ಗಳ ಜೊತೆಗೆ ದಿನದ ಲೆಕ್ಕಾಚಾರದಲ್ಲಿ, ತಿಂಗಳ ಲೆಕ್ಕಾಚಾರದಲ್ಲಿ ಬಾಡಿಗೆಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ರೇಂಜ್ ಹೊಂದಿರುವ ಸ್ಕೂಟರ್‌ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದ್ದು, ಸ್ಕೂಟರ್‌ಗಳ ಫೀಚರ್ಸ್ ಮತ್ತು ಮೈಲೇಜ್ ರೇಂಜ್‌ಗೆ ಅನುಗುಣವಾಗಿ ಬಾಡಿಗೆಗೆ ದೊರೆಯಲಿವೆ.

Most Read Articles

Kannada
English summary
Yulu Electric Mobility Planning To Add Bajaj Made Electric Scooters. Read in Kannada.
Story first published: Wednesday, March 10, 2021, 22:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X