Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೈಗೆಟುಕುವ ಬೆಲೆಯ ಹೊಸ ಯಮಹಾ ಎಫ್‌ಜೆಡ್ 25 ಬೈಕ್ ವಿಶೇಷತೆಗಳು
ಯಮಹಾ ಮೋಟಾರ್ ಇಂಡಿಯಾ ಇಂದು ದೇಶೀಯ ಮಾರುಕಟ್ಟೆಯಲ್ಲಿ ತನ್ನ 2022ರ ಎಫ್‌ಜೆಡ್ 25 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಯಮಹಾ ಎಫ್‌ಜೆಡ್ 25 (Yamaha FZ 25) ಕ್ವಾರ್ಟರ್-ಲೀಟರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಈ ಹೊಸ ಯಮಹಾ ಎಫ್‌ಜೆಡ್ 25 ಬೈಕಿನ ಆರಂಭಿಕ ಬೆಲೆಯು ರೂ.1,38,800 ಗಳಾದರೆ, ಎಫ್‌ಜೆಡ್ಎಸ್ 25 ರೂಪಾಂತರದ ಬೆಲೆಯು ರೂ.1,43,300 ಗಳಾಗಿದೆ. ಈ ಎರಡೂ ಬೆಲೆಗಳು ನವದೆಹಲಿ ಎಕ್ಸ್ ಶೋ ರೂಂ ಪ್ರಕಾರವಾಗಿದೆ. ಈ ಯಮಹಾ ಎಫ್‌ಜೆಡ್ 25 ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೈಗೆಟುಕುವ ಕ್ವಾರ್ಟರ್-ಲೀಟರ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ ಮತ್ತು ಹೊಸ ಬಣ್ಣದ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಇನ್ನು ಈ ಸ ಯಮಹಾ ಎಫ್‌ಜೆಡ್ 25 ಬೈಕಿನ ಬಗ್ಗೆ ಹೆಚ್ಚಿನ ವಿಶೇಷತೆಗಳು ಇಲ್ಲಿದೆ.

ಬಣ್ಣಗಳು
ಈ 2022ರ ಎಫ್‌ಜೆಡ್ 25 ಹೊಸ ಮ್ಯಾಟ್ ಕಾಪರ್ ಶೇಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಎಫ್‌ಜೆಡ್ 25 ಬೈಕ್ ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಪೇಂಟ್ ಆಯ್ಕೆಗಳನ್ನು ಮುಂದುವರಿಸುತ್ತದೆ. ಹೊಸ ಬಣ್ಣಗಳ ಸೇರ್ಪಡೆಯೊಂದಿಗೆ ಮಾದರಿ ವರ್ಷದ ನವೀಕರಣವಾಗಿದೆ ಮತ್ತು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಅಳವಡಿಸಲಾಗಿಲ್ಲ.

ಎಂಜಿನ್
ಕ್ವಾರ್ಟರ್-ಲೀಟರ್ ವಿಭಾಗದ ಈ ಬೈಕ್ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ನೇಕೆಡ್ ಮೋಟಾರ್‌ಸೈಕಲ್ 249 cc ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ SOHC ಎಂಜಿನ್ ಅನ್ನು ಮುಂದುವರೆಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 20.5 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 20.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫೀಚರ್ಸ್
ಹೊಸ ಯಮಹಾ ಎಫ್‌ಜೆಡ್ 25 ಬೈಕ್ ವೈಶಿಷ್ಟ್ಯಗಳು ನೆಗೆಟಿವ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಹೀಟ್ ಶೀಲ್ಡ್‌ನೊಂದಿಗೆ ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಂ, ತೀಕ್ಷ್ಣವಾಗಿ ಕಾಣುವ ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಅಗ್ರೇಸಿವ್ ಫಾಸಿಕ, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ.

ಇದರೊಂದಿಗೆ ಈ ಬೈಕಿನಲ್ಲಿ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಶೌಡ್‌ಗಳು, ಸ್ಪ್ಲಿಟ್ ಬ್ಲ್ಯಾಕ್ ಸೀಟ್ ಸೆಟಪ್, ನಕಲ್ ಗಾರ್ಡ್‌ಗಳು, ಚಿಕ್ಕದಾದ ವಿಂಡ್‌ಸ್ಕ್ರೀನ್, ಬ್ಲ್ಯಾಕ್ಡ್ ಔಟ್ ಬಾಡಿ ಪ್ಯಾನೆಲ್‌ಗಳು ಮತ್ತು ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳಿಂದಾಗಿ ಆಕರ್ಷಕ ಮಾದರಿಯಾಗಿದೆ..

ಹೊಸ ಮ್ಯಾಟ್ ಕಾಪರ್ ಕಲರ್ ಥೀಮ್ ಆರೇಂಜ್ ಬಣ್ಣದ ಇಂಧನ ಟ್ಯಾಂಕ್ ಫಿನಿಶ್ ಅನ್ನು ಒಳಗೊಂಡಿದೆ ಮತ್ತು ನಕಲ್ ಗಾರ್ಡ್‌ನ ಮೇಲಿನ ಭಾಗದಲ್ಲಿ ಇದೇ ರೀತಿಯ ಕಾಣಬಹುದು. ಇನ್ನು ಗ್ರೇ ಫಿನಿಶಿಂಗ್ ಸ್ಪ್ಲಿಟ್ ಗ್ರಾಬ್ ರೈಲ್‌ಗಳೊಂದಿಗೆ ಪಿಲಿಯನ್ ಕೆಳಗಿನ ಸೈಡ್ ಪ್ಯಾನೆಲ್‌ಗಳು, ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳು, ಹೆಡ್‌ಲ್ಯಾಂಪ್ ಹೌಸಿಂಗ್, ಫ್ರಂಟ್ ಫೆಂಡರ್ ಗಳಲ್ಲಿ ಹೊಂದಿದೆ.

ಬ್ರೇಕಿಂಗ್
ಎಫ್‌ಜೆಡ್ 25 ಬೈಕ್ ಇತರ ಕೆಲವು ಮುಖ್ಯಾಂಶಗಳೆಂದರೆ, ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಜೋಡಿಸಲಾಗಿದೆ.

ಸಸ್ಪೆಂಕ್ಷನ್
ಇನ್ನು ಈ ಹೊಸ ಯಮಹಾ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯೊಂದಿಗೆ ಹಿಂಭಾಗದ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಯಮಹಾ ತನ್ನ ಎಂಟಿ-15 ಬೈಕ್ ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಯಮಹಾ ಎಂಟಿ-15 ನೇಕೆಡ್ ಬೈಕ್ ಒಂದೆರಡು ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಹೊಸ ಬೈಕಿನ ಬಿಡುಗಡೆಯ ದಿನಾಂಕವನ್ನು ಕಂಪನಿಯು ಬಹಿರಂಗಪಡಿಸಿಲ್ಲ, ಕೆಲವು ವರದಿಗಳ ಪ್ರಕಾರ ಈ ಹೊಸ ಯಮಹಾ ಎಂಟಿ-15 ಬೈಕ್ ಈ ತಿಂಗಳು ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗಬಹುದು. ಈ ಹೊಸ ಯಮಹಾ ಎಂಟಿ-15 ಬೈಕ್ ಬ್ಲೂಟೂತ್-ಸಕ್ರಿಯಗೊಳಿಸಿದ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಸೇರ್ಪಡೆಯಾಗಿದೆ. ಹೊಸ ಯಮಹಾ ವೈಝಡ್ಎಫ್ ಆರ್15 ವಿ4 ಈಗಾಗಲೇ ಅದರ ಹಿಂದಿನ ಅಪ್‌ಡೇಟ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ ಎಂದು ಪರಿಗಣಿಸಿದರೆ ಇದು ಆಶ್ಚರ್ಯವೇನಿಲ್ಲ.

ಈ ಕ್ಲಸ್ಟರ್ ನಲ್ಲಿ ಗೇರ್ ಸ್ಥಾನ, ರೈಡ್ ಮೋಡ್‌ಗಳು, ಸರಾಸರಿ ವೇಗ, ಇಂಧನ ದಕ್ಷತೆ ಮತ್ತು ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದು ಕರೆ ಮತ್ತು ಅಧಿಸೂಚನೆ ನವೀಕರಣಗಳು ಮತ್ತು ಫೋನ್ ಬ್ಯಾಟರಿ ಮಟ್ಟವನ್ನು ಸಹ ಪ್ರದರ್ಶಿಸುತ್ತದೆ. ಯಮಹಾ ಎಂಟಿ-15 ಬೈಕ್ ಹೆಚ್ಚಿನ ಯುನಿಟ್ ಗಳನ್ನು ಆರ್15 ಮಾದರಿಯೊಂದಿಗೆ ಹಂಚಿಕೊಳ್ಳುವುದರಿಂದ, ಬ್ಲೂಟೂತ್ ಅನ್ನು ಪಡೆಯುವ ಸಮಯವಾಗಿದೆ, ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಅದೇ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಹೊಂದಿರುತ್ತದೆ.

ಒಟ್ಟಾರೆಯಾಗಿ ಈ ಹೊಸ ಯಮಹಾ ಎಫ್‌ಜೆಡ್ 25 ಕ್ವಾರ್ಟರ್-ಲೀಟರ್ ಬೈಕ್ ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಹೊಸ ಬಣ್ಣದೊಂದಿಗೆ ಪ್ರವೇಶಿಸಿದೆ. ಈ ಹೊಸ ಹೊಸ ಯಮಹಾ ಎಫ್‌ಜೆಡ್ 25 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎಫ್250 ಮತ್ತು ಡೊಮಿನಾರ್ 250 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.