ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ದೇಶದ ವಿವಿಧೆಡೆ ಸಂಭವಿಸುತ್ತಲೇ ಇವೆ. ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಂದು ಘಟನೆ ನಡೆದಿದ್ದು 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಮನೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಬ್ಯಾಟರಿ ಸ್ಪೋಟಗೊಂಡು 7 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನ ವಸೈ ಪ್ರದೇಶದಲ್ಲಿ ಕಳೆದ ಭಾನುವಾರ ನಡೆದಿದೆ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಮನೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಚಾರ್ಜ್ ಮಾಡುತ್ತಿದ್ದಾಗ ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಲಕನನ್ನು ಶಬ್ಬೀರ್ ಶಹನವಾಜ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಶಬ್ಬೀರ್ ಮತ್ತು ಅವನ ಅಜ್ಜಿ ಮನೆಯ ಹಾಲ್‌ನಲ್ಲಿ ಮಲಗಿದ್ದರು, ಬಾಲಕನ ತಂದೆ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಯನ್ನು ಚಾರ್ಜ್ ಮಾಡಲು ಪ್ಲಗ್ ಇನ್ ಮಾಡಿದ್ದರು.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಚಾರ್ಜ್ ಹಾಕಿದ್ದ ಕೆಲ ಸಮಯದ ಬಳಿಕ ಬ್ಯಾಟರಿ ಸ್ಪೋಟಗೊಂಡು ಶಬ್ಬೀರ್ ಅಜ್ಜಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಬಾಲಕನಿಗೆ ಶೇ.70 ರಷ್ಟು ಸುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಮಾಣಿಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಬಾಲಕನ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣವಾದ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಅದರ ಬ್ಯಾಟರಿ ಮಾದರಿಯನ್ನು ಬಹಿರಂಗಪಡಿಸಲಾಗಿಲ್ಲ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಇವಿ ಸ್ಕೂಟರ್ ಬೆಂಕಿ ಅವಘಡಗಳು

ಓಲಾ ಇವಿ ಸ್ಕೂಟರ್ ಬೆಂಕಿ ಅವಘಡದ ನಂತರ ಒಕಿನಾವಾದ ಪ್ಯೂರ್ ಇವಿ, ಜಿತೇಂದ್ರ ಎಲೆಕ್ಟ್ರಿಕ್ ಮತ್ತು ಇತರೆ ಹಲವು ಸ್ಟಾರ್ಟ್ ಅಪ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿಯ ಕೆಲವು ಪ್ರಕರಣಗಳು ವರದಿಯಾಗಿದ್ದವು, ಅದೇ ಸಮಯದಲ್ಲಿ ಜೂನ್‌ ಆರಂಭದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿನಲ್ಲೂ ಬೆಂಕಿ ಕಾಣಿಸಿಕೊಂಡಿತ್ತು.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

EV ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಥವಾ ಸ್ಫೋಟಗೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಹಿಂದೆಯೇ ಭಾರತ ಸರ್ಕಾರವು ಹೆಚ್ಚು ಕಟ್ಟುನಿಟ್ಟಾದ EV ಬ್ಯಾಟರಿ ಸುರಕ್ಷತಾ ಮಾನದಂಡಗಳನ್ನು ಪರಿಚಯಿಸಲು ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಬ್ಯಾಟರಿ ಸುರಕ್ಷತೆಗಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಕೆಲವು ಹೊಸ ಮಾನದಂಡಗಳನ್ನು ಶಿಫಾರಸ್ಸು ಮಾಡಿತ್ತು.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಎಲೆಕ್ಟ್ರಿಕ್ ವಾಹನ ತಯಾರಕರು ವಿಶ್ವಾಸಾರ್ಹತೆ, ಚಾರ್ಜಿಂಗ್ ಸಾಮರ್ಥ್ಯ, ವಿಭಿನ್ನ ಪರಿಸರಗಳು ಮತ್ತು ತಾಪಮಾನಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಪರಿಶೀಲಿಸಲು ಬ್ಯಾಟರಿಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗುತ್ತದೆ ಎಂದು ಸಲಹೆ ನೀಡಿತ್ತು. ಈ ಹೊಸ ಮಾನದಂಡಗಳನ್ನು ಆರಂಭದಲ್ಲಿ ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಗಡುವನ್ನು ಡಿಸೆಂಬರ್ 1, 2022 ಕ್ಕೆ ಮುಂದೂಡಲಾಗಿದೆ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಹೊಸ EV ಬ್ಯಾಟರಿ ಮಾನದಂಡಗಳು ಎರಡು ಹಂತಗಳಲ್ಲಿ ಜಾರಿಗೆ ಬರಲಿದ್ದು, ಹಂತ 1 ಡಿಸೆಂಬರ್ 1 ರಂದು ಪ್ರಾರಂಭವಾಗುತ್ತದೆ. ಹಾಗೆಯೇ ಹಂತ 2 ಅನ್ನು ಮಾರ್ಚ್ 31, 2023 ರಿಂದ ಕಾರ್ಯರೂಪಕ್ಕೆ ತರಲಾಗುತ್ತದೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಇವಿ ವಾಹನಗಳು ಹೊಸ ಮಾನದಂಡಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಅಗ್ನಿ ಅವಘಡಗಳ ಕುರಿತು ವಿವಿಧ ಹಂತದ ಪರೀಕ್ಷೆಗಳನ್ನು ಕೈಗೊಂಡಿದ್ದ ತನಿಖಾ ಸಮಿತಿಯು ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಿದ್ದು, ವರದಿಯಲ್ಲಿ ತನಿಖಾ ಸಮಿತಿಯು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಕಂಡುಬರುತ್ತಿರುವ ಅಗ್ನಿ ಅವಘಡಗಳಿಗೆ ಬ್ಯಾಟರಿ ವಿಭಾಗದಲ್ಲಿನ ಕೂಲಿಂಗ್ ತಂತ್ರಜ್ಞಾನದ ಕೊರತೆಯೇ ಘಟನೆಗಳಿಗೆ ಮುಖ್ಯ ಕಾರಣವೆಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ದೀರ್ಘಕಾಲಿಕ ಪ್ರಯಾಣದ ನಂತರ ಬ್ಯಾಟರಿ ವಿಭಾಗದಲ್ಲಿ ಹೆಚ್ಚಿನ ಮಟ್ಟದ ಶಾಖ ಉತ್ಪತ್ತಿಯಾಗಲಿದ್ದು, ಇದರಿಂದ ಬ್ಯಾಟರಿಗಳಲ್ಲಿನ ಶೆಲ್‌ಗಳಲ್ಲಿ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ. ಹೀಗಾಗಿ ಬ್ಯಾಟರಿ ವಿಭಾಗದಲ್ಲಿ ಸೂಕ್ತವಾದ ಕೂಲಿಂಗ್ ತಂತ್ರಜ್ಞಾನ ಅಳವಡಿಸದ ಹೊರತು ಇಂತಹ ಘಟನೆಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸುವ ಎಚ್ಚರಿಕೆ ನೀಡಲಾಗಿದ್ದು, ಬ್ಯಾಟರಿಗಳಲ್ಲಿ ಕೂಲಿಂಗ್ ತಂತ್ರಜ್ಞಾನವನ್ನು ಈಗಾಗಲೇ ವಿವಿಧ ಇವಿ ಕಾರುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಮಗುವನ್ನು ಬಲಿಪಡೆದ ಎಲೆಕ್ಟ್ರಿಕ್ ಸ್ಕೂಟರ್: ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಜೆಟ್ ಬೆಲೆಯ ಇವಿ ಸ್ಕೂಟರ್‌ಗಳಲ್ಲಿ ತಂತ್ರಜ್ಞಾನ ಕೊರತೆ ಹೆಚ್ಚಿದ್ದು, ಇದೇ ಕಾರಣಕ್ಕೆ ಸ್ಕೂಟರ್‌ಗಳು ಚಾಲನೆಯಿರುವಾಗಲೇ ಕೆಲವೊಮ್ಮೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಯೇ ಬ್ಯಾಟರಿ ಚಾರ್ಜಿಂಗ್ ವೇಳೆಯು ಪವರ್ ಒತ್ತಡಕ್ಕೆ ಬ್ಯಾಟರಿಗಳು ಸ್ಪೋಟಗೊಳ್ಳುತ್ತಿವೆ. ಇವಿ ಕಂಪನಿಗಳು ಬ್ಯಾಟರಿ ವಿಭಾಗದಲ್ಲಿ ಇನ್ನೂ ಧೀರ್ಘವಾದ ಅಧ್ಯಯವನ ಮಾಡಿ ಸ್ಪೋಟಕ್ಕೆ ನಿಖರ ಕಾರಣಗಳನ್ನು ಪತ್ತೆಹಚ್ಚಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇವಿ ವಾಹನ ಬೆಂಕಿ ಅವಘಗಳು ಮರುಕಳಿಸದಂತೆ ಎಷ್ಟು ಪರಿಣಾಕಾರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Electric scooter kills child 7 year old boy dies after battery explodes
Story first published: Tuesday, October 4, 2022, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X