ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಅನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಲಕ್ಷವಾಗಿದೆ. ಇದೀಗ ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ವಿತರಣೆಯನ್ನು ಪ್ರಾರಂಭಿಸಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿದರು. ಭಾರತದಲ್ಲಿ ದ್ವಿಚಕ್ರ ವಾಹನ ತಯಾರಕರ ಮೊದಲ-ಎಕ್ಸ್‌ಪಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಅನ್ನು ಉದ್ಘಾಟಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ಆಫ್-ರೋಡ್ ಬೈಕನ್ನು ವಿತರಿಸಲಾಯಿತು. ಹೀರೋ ಮೋಟೋಕಾರ್ಪ್ ಶೀಘ್ರದಲ್ಲೇ ಭಾರತದಾದ್ಯಂತ ಇಂತಹ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಸಂಪೂರ್ಣವಾಗಿ ಮಾರಾಟವಾಗಿದೆ. ಈ ಹೊಸ ರ್‍ಯಾಲಿ ಎಡಿಷನ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಈ ಎಲ್ಲಾ ಯುನಿಟ್ ಗಳು ಮಾರಾಟವಾಗಿದೆ ಎಂದು ವರದಿಗಳಾಗಿದೆ. ಈ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಆವೃತ್ತಿಯೊಂದಿಗೆ, ಗ್ರಾಹಕರು ಎಕ್ಸ್‌ಪಲ್ಸ್ 200 4ವಿಯ ಫ್ಯಾಕ್ಟರಿ ಕಸ್ಟಮ್ ರೂಪಾಂತರವನ್ನು ಹೆಚ್ಚು ಆಫ್-ರೋಡ್ ಸಿದ್ಧ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಪಡೆಯಬಹುದು.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯು ಫ್ಯಾಕ್ಟರಿ ಫಿಟಡ್ ರ್‍ಯಾಲಿ ಕಿಟ್ ಅನ್ನು ಪಡೆಯುತ್ತದೆ, ಇದು 250 ಎಂಎಂ ಟ್ರ್ಯಾವೆಲ್ ನೊಂದಿಗೆ ಎತ್ತರದ ಮತ್ತು ಸಂಪೂರ್ಣ-ಹೊಂದಾಣಿಕೆಯ ಮುಂಭಾಗದ ಸಸ್ಪೆಕ್ಷನ್ ಮತ್ತು 220 ಎಂಎಂ ಟ್ರ್ಯಾವೆಲ್ ನೊಂದಿಗೆ ಸಂಪೂರ್ಣ-ಹೊಂದಾಣಿಕೆ ಮಾಡಬಹುದಾದ 10-ಹಂತದ ಹಿಂಭಾಗದ ಸಸ್ಪೆಕ್ಷನ್ ಅನ್ನು ಒಳಗೊಂಡಿದೆ,

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯು 885 ಎಂಎಂ ಸೀಟ್ ಎತ್ತರ, 40 ಎಂಎಂ ಹ್ಯಾಂಡಲ್‌ಬಾರ್ ರೈಸರ್‌ಗಳು, 270 ಎಂಎಂ ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್, 1,426 ಎಂಎಂನ ವೀಲ್‌ಬೇಸ್ ಮತ್ತು 116 ಎಂಎಂನ ಹೆಚ್ಚಿದ ಟ್ರಯಲ್ ಆಫ್ ರೋಡ್‌ನಲ್ಲಿ ಆತ್ಮವಿಶ್ವಾಸದ ಸವಾರಿ ನಿಲುವನ್ನು ಹೊಂದಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೈಕ್ 200 ಸಿಸಿ ನಾಲ್ಕು-ವಾಲ್ವ್, ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 18.9 ಬಿಹೆಚ್‍ಪಿ ಪವರ್ ಮತ್ತು 13.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ರ್‍ಯಾಲಿ ಎಡಿಷನ್ ಅದೇ 7-ಫಿನ್ ಆಯಿಲ್ ಕೂಲರ್ ಅನ್ನು ಹೊಂದಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಇದು ಭಾರೀ ಟ್ರಾಫಿಕ್‌ನಲ್ಲಿ ಉತ್ತಮ ಶಾಖ ನಿರ್ವಹಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಹೀರೋ MotoSports ರ್‍ಯಾಲಿ ಬೈಕ್ ನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ ಮತ್ತು Hero MotoSports ರ್‍ಯಾಲಿನ ಅದೇ ಬಣ್ಣದ ಸಂಯೋಜನೆಯನ್ನು ಹೊಂದಿದೆ ಮತ್ತು ಇಂಧನ ಟ್ಯಾಂಕ್‌ನ ಮೇಲ್ಭಾಗದಲ್ಲಿ ರ್‍ಯಾಲಿ ತಂಡದ ಸಿಎಸ್ ಸಂತೋಷ್ ಅವರ ಆಟೋಗ್ರಾಫ್ ಅನ್ನು ಹೊಂದಿದೆ,

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೈಕ್ ಮೂಲ ವಿನ್ಯಾಸವನ್ನು ಉಳಿಸಿಕೊಂಡಿದೆ ಆದರೆ ಲಾಂಗ್-ಟ್ರ್ಯಾವೆಲ್ ಸಸ್ಪೆಂಕ್ಷನ್, ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹ್ಯಾಂಡಲ್‌ಬಾರ್ ರೈಸರ್‌ಗಳೊಂದಿಗೆ ಬೈಕ್‌ನ ಆಫ್-ರೋಡ್ ವಿಶ್ವಾಸಾರ್ಹತೆಯನ್ನು ಹಲವಾರು ಹಂತಗಳನ್ನು ಇದು ತೆಗೆದುಕೊಳ್ಳುತ್ತದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಹೊಸ ಹೀರೋ ರ್‍ಯಾಲಿ ಎಡಿಷನ್ ಮ್ಯಾಕ್ಸ್‌ಸಿಸ್ ನಾಬಿ ಟೈರ್‌ಗಳು ಮತ್ತು ರ್‍ಯಾಲಿ ಕಿಟ್‌ನಿಂದ ಫ್ಲಾಟ್ ಸೀಟ್ ಅನ್ನು ಹೊಂದಿಲ್ಲ. ಬಣ್ಣ ಮತ್ತು ಗ್ರಾಫಿಕ್ಸ್ ಹೀರೋನ ರ್‍ಯಾಲಿ ತಂಡದಿಂದ ಪ್ರೇರಿತವಾಗಿದೆ.ಬೈಕ್ ಎಂಜಿನ್ ಅನ್ನು ರಕ್ಷಿಸುವ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ಗರಿಷ್ಠ ಗ್ರಿಪ್ ಮತ್ತು ನಿಯಂತ್ರಣಕ್ಕಾಗಿ ಬ್ರೇಕ್ ಪೆಡಲ್, ಜೊತೆಗೆ ವಿಸ್ತೃತ ಗೇರ್ ಲಿವರ್ ಮತ್ತು ಉದ್ದವಾದ ಸೈಡ್ ಸ್ಟ್ಯಾಂಡ್‌ನೊಂದಿಗೆ ಬರುತ್ತದೆ. ಈ ಆಪ್-ರೋಡ್ ಬೈಕ್ 160 ಕೆಜಿ ತೂಕವನ್ನು ಹೊಂದಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ. ಹೀರೋ ಎಕ್ಸ್‌ಪಲ್ಸ್ 200 ಕಡಿಮೆ ತೂಕ ಮತ್ತು ವೇಗದ ಆಫ್-ರೋಡ್ ಸಾಮರ್ಥ್ಯದೊಂದಿಗೆ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಸ್ಟಾಕ್ ಯಂತ್ರಕ್ಕೆ ಹೋಲಿಸಿದರೆ ಹೆಚ್ಚು ಸಾಮರ್ಥ್ಯದ ಆಫ್-ರೋಡರ್ ಇದಾಗಿದೆ,

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಇನ್ನು ಕಳೆದ ಜುಲೈ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 0.34 ಪ್ರತಿಶತದಷ್ಟು ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 4,30,684 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಂಪನಿಯು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಮಾರಾಟವಾದ 4,29,208 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಜುಲೈ 2022 ರಲ್ಲಿ ರಫ್ತು ಮಾಡಲಾದ 14,896 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಲಾದ 25,190 ಯುನಿಟ್‌ಗಳಿಗೆ ಹೋಲಿಸಿದರೆ, ಕಂಪನಿಯು ತನ್ನ ರಫ್ತಿನಲ್ಲಿ ಶೇಕಡಾ 40.86 ರಷ್ಟು ಕುಸಿತವನ್ನು ಕಂಡಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟಾರೆಯಾಗಿ (ದೇಶೀಯ + ರಫ್ತುಗಳು), 4,45,580 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ 4,54,398 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 1.94 ರಷ್ಟು ಕುಸಿತವನ್ನು ಕಂಡಿದೆ. ಇನ್ನು ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕವಾದ ವಿಡಾ(Vida) ಬ್ರ್ಯಾಂಡ್ ಆರಂಭಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಹೊಸ ಸ್ಕೂಟರ್ ಮಾದರಿಯು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿ ಪ್ರತ್ಯೇಕ ಇವಿ ಬ್ರಾಂಡ್ ಆರಂಭಿಸುತ್ತಿದೆ.

ಬೆಂಗಳೂರಿನಲ್ಲಿ 100 ಎಕ್ಸ್‌ಪಲ್ಸ್ ರ್‍ಯಾಲಿ ಎಡಿಷನ್ ಬೈಕ್‌ಗಳನ್ನು ವಿತರಿಸಿದ ಹೀರೋ ಮೋಟೋಕಾರ್ಪ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೀರೋ ಮೋಟೋಕಾರ್ಪ್ ತನ್ನ ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮುಂಬರುವ ಬೈಕ್ ಸ್ಟ್ಯಾಂಡರ್ಡ್ ರೂಪಾಂತರಕ್ಕೆ ಹೋಲಿಸಿದರೆ ಕೆಲವು ದೊಡ್ಡ ಬದಲಾವಣೆಯನ್ನು ಹೊಂದಿದೆ, ಅಲ್ಲದೇ ಇದು ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Hero motcorp delivered first 100 units of xpulse 200 4v rally edition motorcycles details
Story first published: Tuesday, August 30, 2022, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X