ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿರುವ ಅಗ್ರಸ್ಥಾನದಲ್ಲಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದೆ.

Recommended Video

Honda CB300F KANNADA Review | What’s New From The Japanese? Switchable Traction Control & More

ಹೊಸ ದರಪಟ್ಟಿಯಲ್ಲಿ ಬಹುತೇಕ ಬೈಕ್ ಮಾದರಿಗಳ ದರ ಹೆಚ್ಚಿಸಲಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದೇ ದರ ಏರಿಕೆ ಪ್ರಮುಖ ಕಾರಣವಾಗಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಹೋಂಡಾ ಮೋಟಾರ್‌ಸೈಕಲ್ ಮಾದರಿಗಳಿಗೆ ಈಗಾಗಲೇ ಬುಕಿಂಗ್ ಸಲ್ಲಿಸಿರುವ ಗ್ರಾಹಕರನ್ನು ಹೊರತುಪಡಿಸಿ ಹೊಸದಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಹೊಸ ದರಗಳು ಅನ್ವಯಿಸಲಿದ್ದು, ವಿವಿಧ ಮಾದರಿಗಳನ್ನು ಆಧರಿಸಿ ಎಕ್ಸ್‌ಶೋರೂಂ ದರದಲ್ಲಿ ರೂ. 1 ಸಾವಿರದಿಂದ ರೂ. 17 ಸಾವಿರ ತನಕ ದರ ಹೆಚ್ಚಳವಾಗಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಆಟೋ ಬಿಡಿಭಾಗಗಳ ದರದಲ್ಲಿ ನಿರಂತರ ಹೆಚ್ಚಳ ಪರಿಣಾಮ ಹೊಸ ವಾಹನಗಳ ಬೆಲೆ ಹೆಚ್ಚುತ್ತಿದ್ದು, ಕಳೆದ ಏಪ್ರಿಲ್‌ನಲ್ಲಿ ದರ ಪರಿಷ್ಕರಣೆ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಮತ್ತೊಮ್ಮೆ ದರ ಹೆಚ್ಚಿಸಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಹೊಸ ದರ ಪಟ್ಟಿಯಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 150 ಸಿಸಿಯಿಂದ 350 ಸಿಸಿ ಬೈಕ್ ಮಾದರಿಗಳ ಬೆಲೆಯಲ್ಲಿ ಹೆಚ್ಚಿನ ಮಟ್ಟದ ದರ ಹೆಚ್ಚಿಸಿದ್ದು, ಸಿಬಿ200ಎಕ್ಸ್ ಅಡ್ವೆಂಚರ್ ಬೈಕ್ ಮಾದರಿಯು ಗರಿಷ್ಠ ರೂ. 17,200 ದರ ಹೆಚ್ಚಳ ಪಡೆದುಕೊಂಡಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಸಿಬಿ200ಎಕ್ಸ್ ನಂತರ ಹೈನೆಸ್ ಸಿಬಿ350, ಸಿಬಿ 350 ಸರಣಿಗಳು, ಎಕ್ಸ್-ಬ್ಲೇಡ್, ಎಸ್‌ಪಿ 125, ಹಾರ್ನೆಟ್, ಯುನಿಕಾನ್, ಲಿವೊ, ಸಿಡಿ110 ಮಾದರಿಗಳ ಬೆಲೆ ಹೆಚ್ಚಳವಾಗಿದ್ದು, ಬೆಲೆಗೆ ಅನುಗುಣವಾಗಿ ಶೇ. 5ರಿಂದ ಶೇ.14ರಷ್ಟು ಹೆಚ್ಚಿಸಲಾಗಿದೆ.

Honda Motorcycles Aug-22 Apr-22
CD110 Dream DLX ₹70,315 ₹69,251
Livo Drum ₹75,002 ₹73,938
Livo Disc ₹79,002 ₹77,938
CB Shine Drum ₹77,378 ₹76,314
CB Shine Disc ₹81,378 ₹80,314
SP125 Drum ₹82,486 ₹81,407
SP125 Disc ₹86,486 ₹85,407
Unicorn ₹1,03,706 ₹95,738
X-Blade ₹1,15,614 ₹1,07,851
X-Blade DX ₹1,20,004 ₹1,12,241
Hornet ₹1,35,274 ₹1,28,195
CB200X ₹1,47,535 ₹1,30,195
CB 350 DLX ₹1,98,179 ₹1,86,500
CB 350 DLX Pro ₹2,03,179 ₹1,92,500
CB 350 Anniversary Edition ₹2,05,679 -
CB350 RS Mono ₹2,03,179 -
CB350 RS Dual ₹2,03,808 -
ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಸ್ಕೂಟರ್ ವಿಭಾಗದಲ್ಲಿ ಗ್ರಾಜಿಯಾ 125 ಸ್ಕೂಟರ್ ಮಾದರಿಯು ಗರಿಷ್ಠ ರೂ. 6,300 ದರ ಹೆಚ್ಚಳ ಪಡೆದುಕೊಂಡಿದ್ದು, ತದನಂತರ ಡಿಯೋ, ಆಕ್ವಿವಾ ಸರಣಿಗಳು ಕೂಡಾ ಹೆಚ್ಚಿನ ದರ ಪಡೆದುಕೊಂಡಿವೆ.

Honda Scooters Aug-22 Apr-22
Dio STD ₹67,817 ₹62,229
Dio DLX ₹71,317 ₹65,627
Dio Sports Drum ₹68,317 -
Dio Sports DLX ₹73,317 -
Activa 6G STD ₹72,400 ₹71,432
Activa 6G DLX ₹74,400 ₹73,177
Activa Premium Deluxe ₹75,400 -
Activa 125 Drum ₹76,025 ₹74,898
Activa 125 Alloy ₹79,693 ₹78,567
Activa 125 Disc ₹83,198 ₹82,162
Grazia 125 Drum ₹81,211 ₹74,815
Grazia 125 Disc ₹88,536 ₹82,140
ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಇನ್ನು ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ ಜೊತೆ ತೀವ್ರ ಪೈಪೋಟಿ ನಡೆಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 4,02,701 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಹೋಂಡಾ ಕಂಪನಿಯು 3,40,420 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 18 ರಷ್ಟು ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಮತ್ತಷ್ಟು ದುಬಾರಿ

ಮುಂಬರುವ ಹಬ್ಬದ ಋತುಗಳಲ್ಲಿ ಮತ್ತಷ್ಟು ಬೇಡಿಕೆ ದಾಖಲಿಸುವ ನೀರಿಕ್ಷೆಯಲ್ಲಿರುವ ಹೋಂಡಾ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಇತ್ತೀಚೆಗೆ ಕಂಪನಿಯು ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ಬಿಡುಗಡೆ ಮಾಡಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಯಲ್ಲಿ ಮತ್ತಷ್ಟು ದುಬಾರಿ

ಹೊಸ ಹೋಂಡಾ ಆಕ್ಟಿವಾ ಪ್ರೀಮಿಯಂ ಎಡಿಷನ್ ಆರಂಭಿಕ ಬೆಲೆಯು ರೂ. 75,400 ನಿಗರಿಯಾಗಿದ್ದು, ಇದು ಟಾಪ್-ಸ್ಪೆಕ್ ಆಕ್ಟಿವಾ ಡಿಎಲ್‌ಎಕ್ಸ್ ರೂಪಾಂತರಕ್ಕಿಂತ ನಿಖರವಾಗಿ ರೂ. 1 ಸಾವಿರ ದುಬಾರಿಯಾಗಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಯಲ್ಲಿ ಮತ್ತಷ್ಟು ದುಬಾರಿ

ಬೇಸ್-ಸ್ಪೆಕ್ ಆಕ್ಟಿವಾ 6ಜಿ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 72,400 ನಿಂದ ಪ್ರಾರಂಭವಾಗುತ್ತದೆ. ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಹೊಸ ಹೋಂಡಾ ಆಕ್ಟಿವಾ ಪ್ರೀಮಿಯಂ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಹೋಂಡಾ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಯಲ್ಲಿ ಮತ್ತಷ್ಟು ದುಬಾರಿ

ಆಕ್ಟಿವಾ ಪ್ರೀಮಿಯಂ ಆವೃತ್ತಿಯ ಹಾರ್ಡ್‌ವೇರ್ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು ಆಕ್ಟಿವಾ ಡಿಎಲ್‌ಎಕ್ಸ್ ರೂಪಾಂತರದಂತೆಯೇ ಇರುತ್ತವೆ. ಆಕ್ಟಿವಾ ತನ್ನ ಉತ್ಸಾಹಭರಿತ ಕಾರ್ಯಕ್ಷಮತೆಗಾಗಿ ಈಗಾಗಲೇ ಜನಪ್ರಿಯವಾಗಿರುವ ಕಾರಣ ಕಾರ್ಯಕ್ಷಮತೆಯಲ್ಲಿ ಯಾವುದೇ ನವೀಕರಣ ಪರಿಚಯಿಸಿಲ್ಲ.

Most Read Articles

Kannada
English summary
Honda motorcycle india price hiked upto rs 17000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X